SIP Calculator: ಪ್ರತಿ ತಿಂಗಳು ಇಷ್ಟೇ ಹೂಡಿಕೆ ಮಾಡಿದರೆ ಸಾಕು ಕೋಟ್ಯಾಧಿಪತಿಯಾಗಿ ಬಿಡಬಹುದು

Thu, 26 Aug 2021-9:19 pm,

ಮ್ಯೂಚುವಲ್ ಫಂಡ್ SIP ನಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡುವ ಮೂಲಕ ನಿಗದಿತ ಸಮಯದ ನಂತರ 1 ಕೋಟಿ ರೂಪಾಯಿಗಳ ಮಾಲೀಕರಾಗಬಹುದು. SIP Calculator  ಪ್ರಕಾರ, ಪ್ರತಿ ತಿಂಗಳು 10,000 ರೂ.ಗಳನ್ನು ಹೂಡಿಕೆ ಮಾಡಿದರೆ ಮತ್ತು ಅದನ್ನು 20 ವರ್ಷಗಳವರೆಗೆ ನಿರಂತರವಾಗಿ ನಿರ್ವಹಿಸುತ್ತಿದ್ದರೆ, ನಂತರ 1 ಕೋಟಿ (99,91,479 ರೂ) ಅನ್ನು ಸುಲಭವಾಗಿ ರೂಪಿಸಬಹುದು. ಇದರ ವಾರ್ಷಿಕ ರಿಟರ್ನ್ 12 ಪ್ರತಿಶತವಾಗಿರುತ್ತದೆ.   

ನೀವು SIP ನಲ್ಲಿ ಮಾಸಿಕ 10,000 ರೂಗಳನ್ನು 20 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ನೀವು ಸುಮಾರು 76 ಲಕ್ಷ ರೂಪಾಯಿಗಳ ಲಾಭವನ್ನು ಪಡೆಯುತ್ತೀರಿ. ಈ ಸಂಪೂರ್ಣ ಅವಧಿಯಲ್ಲಿ ನಿಮ್ಮ ಹೂಡಿಕೆ ಕೇವಲ 24 ಲಕ್ಷ ರೂಪಾಯಿಗಳು ಮಾತ್ರ.  

ಮ್ಯೂಚುವಲ್ ಫಂಡ್ SIP ನಲ್ಲಿ ಹೂಡಿಕೆ ಆದಷ್ಟು ಬೇಗ ಆರಂಭಿಸಬೇಕು. ಏಕೆಂದರೆ, ಇದು ನಿಮಗೆ ದೀರ್ಘಾವಧಿಯವರೆಗೆ ಲಾಭವನ್ನು ಪಡೆಯಲು ಅವಕಾಶವನ್ನು ನೀಡುತ್ತದೆ. 30 ನೇ ವಯಸ್ಸಿನಲ್ಲಿ ಮಾಸಿಕ 10,000 ರೂ.ಗಳ SIP ಅನ್ನು ಪ್ರಾರಂಭಿಸಿದರೆ,  50 ನೇ ವಯಸ್ಸಿನಲ್ಲಿ ನೀವು 1 ಕೋಟಿ ರೂ. ಸಿಗುತ್ತದೆ. 

ಬಿಪಿಎನ್ ಫಿನ್‌ಕ್ಯಾಪ್‌ನ ನಿರ್ದೇಶಕರಾದ ಎಕೆ ನಿಗಮ್ ಪ್ರಕಾರ, ಹೂಡಿಕೆದಾರರು ದೀರ್ಘಾವಧಿಯ SIPಯನ್ನು ತಮ್ಮದಾಗಿಸಿಕೊಂದರೆ 12-15 ಪ್ರತಿಶತದಷ್ಟು ಆದಾಯವನ್ನು ಪಡೆಯಬಹುದು. SIP ಹೂಡಿಕೆಯ ಒಂದು ವ್ಯವಸ್ಥಿತ ವಿಧಾನವಾಗಿದೆ. ಇದರಲ್ಲಿ, ಹೂಡಿಕೆದಾರರು ಮಾರುಕಟ್ಟೆಯ ಅಪಾಯವನ್ನು ನೇರವಾಗಿ ಎದುರಿಸಬೇಕಾಗಿಲ್ಲ. ಆದಾಯವು ಸಾಂಪ್ರದಾಯಿಕ ಉತ್ಪನ್ನಕ್ಕಿಂತ ಹೆಚ್ಚಾಗಿರುತ್ತದೆ. ಇದರಲ್ಲಿಯೂ ಅಪಾಯವಿದೆ. ಆದ್ದರಿಂದ, ಹೂಡಿಕೆದಾರರು ತಮ್ಮ ಆದಾಯ, ಗುರಿ ಮತ್ತು ಅಪಾಯದ ವಿವರಗಳನ್ನು ನೋಡಿದ ನಂತರ ಹೂಡಿಕೆ ನಿರ್ಧಾರವನ್ನು ತೆಗೆದುಕೊಳ್ಳಬೇಕು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link