SIP Plus Insurance: SIP ಮೂಲಕ ಹೂಡಿಕೆ ಮಾಡುವವರಿಗೆ ಸಿಗುತ್ತೆ 50 ಲಕ್ಷ ರೂ.ಗಳ ಉಚಿತ Life Insurance! ಹೇಗೆ?

Tue, 11 May 2021-10:19 pm,

1. ಈ ಫಂಡ್ ಗಳ ಮೇಲೆ ಕೊಡುಗೆ ನೀಡಲಾಗುತ್ತಿದೆ - ಪ್ರಸ್ತುತ, ಕೆಲವು ಮ್ಯೂಚುಯಲ್ ಫಂಡ್ ಕಂಪನಿಗಳು ಎಸ್‌ಐಪಿ ಜೊತೆಗೆ ವಿಮಾ ರಕ್ಷಣೆಯನ್ನು ಉಚಿತವಾಗಿ ನೀಡುತ್ತಿವೆ. ಪಿಜಿಐಎಂ ಇಂಡಿಯಾ ಮ್ಯೂಚುವಲ್ ಫಂಡ್, ಐಸಿಐಸಿಐ ಪ್ರುಡೆನ್ಶಿಯಲ್, ನಿಪ್ಪಾನ್ ಇಂಡಿಯಾ ಮ್ಯೂಚುವಲ್ ಫಂಡ್ ಮತ್ತು ಆದಿತ್ಯ ಬಿರ್ಲಾ ಸನ್ಲೈಫ್‌ನ ಫಂಡ್ ಗಳು ಇವುಗಳಲ್ಲಿ ಶಾಮೀಲಾಗಿವೆ. ಈ ಕುರಿತು ಮಾತನಾಡುವ ಬಿಪಿಎನ್ ಫಿನ್‌ಕ್ಯಾಪ್‌ನ ನಿರ್ದೇಶಕ ಎ.ಕೆ.ನಿಗಮ್, ಇದು ನಿಜಕ್ಕೂ ಒಂದು ಗ್ರೂಪ್ ಫ್ರೀ ಜೀವ ವಿಮಾ ಯೋಜನೆಯಾಗಿದೆ, ಇದು ಒಂದು ರೀತಿಯ ಗುಂಪು ವಿಮಾ ಯೋಜನೆಯಾಗಿದೆ. ಇದಕ್ಕೆ ಯಾವುದೇ ರೀತಿಯ ಆರೋಗ್ಯ ತಪಾಸಣೆ ಅಗತ್ಯವಿಲ್ಲ. ಹೂಡಿಕೆದಾರರು ಈ ಫಂಡ್ ಹೌಸ್‌ಗಳ ಎಸ್‌ಐಪಿ ಯೋಜನೆಯೊಂದಿಗೆ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ಅವರಿಗೆ ವೈದ್ಯಕೀಯ ಪರೀಕ್ಷೆಯಿಲ್ಲದೆ ವಿಮಾ ರಕ್ಷಣೆ ಒದಗಿಸಲಾಗುತ್ತದೆ.  ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುವಲ್ ಫಂಡ್‌ನ 'ಎಸ್‌ಐಪಿ ಪ್ಲಸ್', ಆದಿತ್ಯ ಬಿರ್ಲಾ ಸನ್ ಲೈಫ್ ಮ್ಯೂಚುಯಲ್ ಫಂಡ್‌ನ 'ಸೆಂಚುರಿ ಎಸ್‌ಐಪಿ', ಪಿಜಿಐಎಂ ಇಂಡಿಯಾ ಮ್ಯೂಚುಯಲ್ ಫಂಡ್‌ನ 'ಸ್ಮಾರ್ಟ್ ಎಸ್‌ಐಪಿ' ಮತ್ತು ನಿಪ್ಪಾನ್ ಇಂಡಿಯಾದ 'ಎಸ್‌ಐಪಿ ಗಳಲ್ಲಿ ಈ ವಿಮಾ ರಕ್ಷಣೆ ಒದಗಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

2. SIP Insurance ಕೊಡುಗೆಯ ಬಗ್ಗೆ ತಿಳಿದುಕೊಳ್ಳಿ - ಎಸ್‌ಐಪಿಯಲ್ಲಿ ಹೂಡಿಕೆ ಆರಂಭಿಸಿದಾಗ ಹೂಡಿಕೆದಾರರು ಈ ವಿಮಾ ರಕ್ಷಣೆಯನ್ನು ಉಚಿತವಾಗಿ ಪಡೆಯುತ್ತಾರೆ. ಬಹುತೇಕ ಫಂಡ್ ಹೌಸ್ ಗಳ ಎಲ್ಲಾ ಇಕ್ವಿಟಿ ಮತ್ತು ಹೈಬ್ರಿಡ್ ಯೋಜನೆಗಳಲ್ಲಿ ಈ ಸೌಲಭ್ಯ ಇದೆ.  ಈ ಯೋಜನೆಯಲ್ಲಿ ಹೂಡಿಕೆ ಮಾಡುವ 18-51 ವಯಸ್ಸಿನ ಜನರಿಗೆ ಬಹುತೇಕ ಫಂಡ್ ಹೌಸ್‌ಗಳು ಈ ಎಸ್‌ಐಪಿ ವಿಮೆಯನ್ನು ನೀಡುತ್ತಿವೆ. ಇದರ ಅಡಿಯಲ್ಲಿ ಯಾವುದೇ ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲ. ಏಕೆಂದರೆ ಇದು ಗುಂಪು ವಿಮಾ ಪಾಲಿಸಿಯಾಗಿದೆ. 55 ವರ್ಷ ವಯಸ್ಸಿನವರೆಗೆ ವಿಮಾ ರಕ್ಷಣೆ ಸಿಗಲಿದೆ. ಆದ್ದರಿಂದ, ಹೂಡಿಕೆದಾರರು 51 ನೇ ವಯಸ್ಸಿನಲ್ಲಿ 10 ವರ್ಷದ ಎಸ್‌ಐಪಿಯನ್ನು ಪ್ರಾರಂಭಿಸಿದರೆ, ಅವರಿಗೆ 55 ವರ್ಷ ವಯಸ್ಸಿನವರೆಗೆ ವಿಮಾ ರಕ್ಷಣೆ ಸಿಗುತ್ತದೆ. ಆದರೆ ಕೆಲ ಕಂಪನಿಗಳು 60 ವರ್ಷ ವಯಸ್ಸಿನವರೆಗೂ ವಿಮಾ ರಕ್ಷಣೆಯನ್ನು ನೀಡುತ್ತಿವೆ.

3. SIP ಜೊತೆಗೆ 50 ಲಕ್ಷ ರೂ.ಗಳವರೆಗೆ ವಿಮಾ ರಕ್ಷಣೆ - PGIM ಇಂಡಿಯಾ ಮ್ಯೂಚುವಲ್ ಫಂಡ್‌ನ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಮ್ಯೂಚುವಲ್ ಫಂಡ್ ಹೌಸ್‌ಗಳು ಮೊದಲ ವರ್ಷದಲ್ಲಿ ಎಸ್‌ಐಪಿ (Systematic Investment Plan) ಮೊತ್ತಕ್ಕಿಂತ 20 ಪಟ್ಟು ಹೆಚ್ಚಿನ ವಿಮಾ ರಕ್ಷಣೆಯನ್ನು ನೀಡುತ್ತಿವೆ. ಎರಡನೇ ವರ್ಷ ಹೂಡಿಕೆಯ 75 ಪಟ್ಟು ಮತ್ತು ಮೂರನೇ ವರ್ಷ 120 ಪಟ್ಟು ಹೆಚ್ಚಿನ ಕವರ್ ನೀಡುತ್ತದೆ. ವಿಮಾ ರಕ್ಷಣೆಯು ಮಾಸಿಕ ಎಸ್‌ಐಪಿಯ 20 ರಿಂದ 120 ಪಟ್ಟು ಆಗಲಿದೆ. ಇದು ಗರಿಷ್ಠ 50 ಲಕ್ಷದವರೆಗೆ ಇರುವ ಸಾಧ್ಯತೆ ಇದೆ. ಆದರೆ, ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುವಲ್ ಫಂಡ್‌ 'ಎಸ್‌ಐಪಿ ಪ್ಲಸ್' ನಲ್ಲಿ, ಎಸ್‌ಐಪಿ ಮೇಲಿನ ವಿಮಾ ರಕ್ಷಣೆಯು ಮೊದಲ ವರ್ಷದಲ್ಲಿ 10 ಪಟ್ಟು, ಎರಡನೇ ವರ್ಷದಲ್ಲಿ 50 ಪಟ್ಟು ಮತ್ತು ಮೂರನೇ ವರ್ಷದಲ್ಲಿ 100 ಪಟ್ಟು ಇರಲಿದೆ. ಆದರೆ, ಗರಿಷ್ಠ ವಿಮಾ ರಕ್ಷಣೆ  ಕೇವಲ 50 ಲಕ್ಷ ರೂ. ಮಾತ್ರ ಇರಲಿದೆ. ಉದಾಹರಣೆಗೆ ಓರ್ವ ವ್ಯಕ್ತಿ 5000 ರೂ.ಗಳ ಮಾಸಿಕ ಎಸ್‌ಐಪಿ ಆರಂಭಿಸಿದ್ದಾನೆ ಎಂದು ಭಾವಿಸೋಣ.  ಆಗ ಆತನಿಗೆ ಮೊದಲ ವರ್ಷದಲ್ಲಿ ವಿಮಾ ರಕ್ಷಣೆ 20 ಪಟ್ಟು ಅಂದರೆ 1 ಲಕ್ಷ ರೂಪಾಯಿ ಇರಲಿದೆ. ಎರಡನೇ ವರ್ಷದಲ್ಲಿ ಇದು 75 ಪಟ್ಟು ಅಂದರೆ 3.75 ಲಕ್ಷ ರೂಪಾಯಿಗಳು ಇರಲಿದೆ. ಮೂರನೇ ವರ್ಷದಲ್ಲಿ ಇದು 120 ಪಟ್ಟು ಅಥವಾ 6 ಲಕ್ಷ ರೂ. ಇರಲಿದೆ. ಅಂದರೆ,  ಯಾವುದೇ ಆಕಸ್ಮಿಕ ಕಾರಣಗಳಿಂದಾಗಿ ಎಸ್‌ಐಪಿ ಹೊಂದಿರುವ ವ್ಯಕ್ತಿ ಮೂರನೇ ವರ್ಷದಲ್ಲಿ ಮೃತಪಟ್ಟರೆ, ಅವರ ನಾಮಿನಿಗೆ ಮ್ಯೂಚುವಲ್ ಫಂಡ್ ಯುನಿಟ್ ಗಳ ಜೊತೆಗೆ ವಿಮಾ ಮೊತ್ತದ ಲಾಭ ಕೂಡ ಸಿಗಲಿದೆ.

4. ಈ ಷರತ್ತುಗಳು ಅನ್ವಯಿಸುತ್ತವೆ - PGIMನ ಸ್ಮಾರ್ಟ್ SIP ನಿಯಮಗಳ ಪ್ರಕಾರ, ಎಸ್‌ಐಪಿ ಜೊತೆಗೆ ವಿಮಾ ರಕ್ಷಣೆ ನೀಡಲಾಗುತ್ತಿರುವ ಫಂಡ್ ಗಳಲ್ಲಿ ನೀವು ಕನಿಷ್ಠ 3 ವರ್ಷಗಳವರೆಗೆ ಹೂಡಿಕೆ ಮಾಡಿರಬೇಕು. ಮೂರು ವರ್ಷಗಳ ಮೊದಲು ಎಸ್‌ಐಪಿ ಸ್ಥಗಿತಗೊಂಡರೆ, ವಿಮೆಯ ಅಡಿಯಲ್ಲಿ ಸಿಗುವ ವಿಮಾ ರಕ್ಷಣೆಯ ಲಾಭ ನಿಂತುಹೋಗಲಿದೆ. ಇದೇ ವೇಳೆ, ಮೂರು ವರ್ಷಗಳ ಕಾಲ ಎಸ್‌ಐಪಿ ಮುಂದುವರೆಸಿದ ನಂತರೆ ನಿಮಗೆ ವಿಮೆಯ ಲಾಭ ನೀಡುವುದನ್ನು ಮುಂದುವರೆಸಲಾಗುತ್ತದೆ. ಆದರೆ,  ಹೂಡಿಕೆ ಸ್ಥಗಿತಗೊಂಡ ಕಾರಣ ನಿಮ್ಮ ಲೈಫ್ ಕವರ್ ಮೊತ್ತವನ್ನು ಕೂಡ ಕಡಿಮೆ ಮಾಡಲಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link