ಒಂದೇ ಓವರ್ ನಲ್ಲಿ ಆರು ವಿಕೆಟ್ ಪತನ ! ಇದು ಹ್ಯಾಟ್ರಿಕ್ ಅಲ್ಲ ಡಬಲ್ ಹ್ಯಾಟ್ರಿಕ್ ದಾಖಲೆ
ಇನ್ನೇನು ವಿಶ್ವಕಪ್ ಮುಕ್ತಾಯದ ಹಂತ ತಲುಪಿದೆ. ಒಂದು ತಿಂಗಳ ಕಾಲ ನಡೆದ ವಿಶ್ವಕಪ್ ಅನೇಕ ದಾಖಲೆಗಳನ್ನು ಬರೆದಿದೆ.
ವಿಶ್ವಕಪ್ ಮಧ್ಯೆಯೇ ವಿಶ್ವ ದಾಖಲೆಯೊಂದು ನಿರ್ಮಾಣವಾಗಿದೆ. ಒಂದೇ ಓವರ್‌ನಲ್ಲಿ ಹ್ಯಾಟ್ರಿಕ್ ಅಲ್ಲ ಡಬಲ್ ಹ್ಯಾಟ್ರಿಕ್ ಮಾಡಿರುವ ದಾಖಲೆ ಅದು. ಅಂದರೆ ಒಂದೇ ಓವರ್ ನಲ್ಲಿ ಬೌಲರ್ ಒಬ್ಬ ಆರು ವಿಕೆಟ್ ಗಳನ್ನು ಕಬಳಿಸಿರುವ ಪವಾಡ ನಡೆದಿದೆ.
ಆಸ್ಟ್ರೇಲಿಯದ ಗೋಲ್ಡ್ ಕೋಸ್ಟ್ ಪ್ರೀಮಿಯರ್ ಲೀಗ್‌ನಲ್ಲಿ ಸರ್ಫರ್ಸ್ ಪ್ಯಾರಡೈಸ್ ವಿರುದ್ಧ ಮುಗೀರಬರ್ ಪಂದ್ಯ ನಡೆಯುತ್ತಿತ್ತು. ಈ ದೇಶೀಯ ಕ್ರಿಕೆಟ್ ಲೀಗ್‌ನಲ್ಲಿ ಈ ದಾಖಲೆ ನಿರ್ಮಾಣವಾಗಿದೆ.
ಬಲು ರೋಚಕ ಪಂದ್ಯದಲ್ಲಿ ಪ್ಯಾರಡೈಸ್‌ಗೆ ಗೆಲ್ಲಲ್ಲು ಬೇಕಾಗಿದ್ದದ್ದು 5 ರನ್. ಕೈಯ್ಯಲ್ಲಿತ್ತು 6 ವಿಕೆಟ್. ಆಗ ಬೌಲ್ ಮಾಡಲು ಬಂದದ್ದು ಮುಗೀರಬ ನಾಯಕ ಗರೆಥ್ ಮಾರ್ಗನ್.
ಗೆಲುವು ಪ್ಯಾರಡೈಸ್ ತಂಡದ್ದೇ ಎನ್ನುವ ಭಾವನೆ ಎಲ್ಲರದ್ದಾಗಿತ್ತು. ಆದರೆ ಆ ಓವರ್‌ನ 6 ಎಸೆತಗಳಲ್ಲಿ ಆರು ವಿಕೆಟ್ ಉರುಳಿವೆ. ಒಂದೇ ಓವರ್‌ನಲ್ಲಿ ಡಬಲ್ ಹ್ಯಾಟ್ರಿಕ್ ಸಾಧಿಸಿದ ವಿಶ್ವದಾಖಲೆ ಈಗ ಗರೆಥ್ ಮಾರ್ಗನ್ ಅವರ ಹೆಸರಿನಲ್ಲಿದೆ.
ಇನ್ನು ಈ ಬಾರಿಯ ವಿಶ್ವಕಪ್ ನ ಮೊದಲ ಸೆಮಿಫೈನಲ್ ನಾಳೆ ನಡೆಯಲಿದೆ. ಎರಡನೇ ಸೆಮಿ ಫೈನಲ್ ಗುರುವಾರ ನಡೆಯಲಿದೆ.