ಚಳಿಗಾಲದಲ್ಲಿ ಮಾಡುವ ಈ ತಪ್ಪಿನಿಂದ ಕುಗ್ಗಿ ಹೋಗುವುದು ತ್ವಚೆಯ ಕಾಂತಿ
ಚಳಿಯಲ್ಲಿ ಉಗುರುಬೆಚ್ಚಗಿನ ಅಥವಾ ಬಿಸಿನೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು. ಆದರೆ ಬಿಸಿ ನೀರಿನಿಂದ ಮುಖ ತೊಳೆದಾಗ ತ್ವಚೆಗೆ ಸಾಕಷ್ಟು ಹಾನಿಯಾಗುತ್ತದೆ. ಬಿಸಿ ನೀರಿನಿಂದ ಚರ್ಮದ ಶುಷ್ಕತೆ ಹೆಚ್ಚಾಗುತ್ತದೆ. ಅದೇ ರೀತಿ ಸೂಕ್ಷ್ಮ ತ್ವಚೆ ಇರುವವರು ಬಿಸಿ ನೀರಿನಿಂದ ಮುಖ ತೊಳೆದರೆ ಸ್ಕಿನ್ ಇನ್ ಫೆಕ್ಷನ್ ಆಗುವ ಸಾಧ್ಯತೆಯೂ ಹೆಚ್ಚುತ್ತದೆ.
ಸ್ನಾನದ ನಂತರ ಮುಖವನ್ನು ಸ್ವಚ್ಛಗೊಳಿಸಲು ಫೇಸ್ ವಾಶ್ ಅಥವಾ ಕ್ಲೆನ್ಸರ್ ಬಳಸಿ ಸ್ವಚ್ಛಗೊಳಿಸಿ.
ನಿಮ್ಮ ಚರ್ಮವನ್ನು ಮೃದು ಮತ್ತು ಆರೋಗ್ಯಕರವಾಗಿಡಲು ಸಾಕಷ್ಟು ಪೌಷ್ಟಿಕಾಂಶದ ಅಗತ್ಯವಿರುತ್ತದೆ. ಇದಕ್ಕಾಗಿ, ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಮಾಯಿಶ್ಚರೈಸರ್ ಹಚ್ಚಿ.
ಚರ್ಮಕ್ಕೆ ಹೆಚ್ಚಿನ ಪೋಷಣೆಯ ಅಗತ್ಯವಿರುವವರು ತಮ್ಮ ಮುಖದ ಮೇಲೆ ಸೀರಮ್ ಅನ್ನು ಬಳಸಬಹುದು. ಮಾಯಿಶ್ಚರೈಸರ್ ಹಚ್ಚಿದ ನಂತರ ಫೇಸ್ ಸೀರಮ್ ಅನ್ನು ಬಳಸಬಹುದು. ಇದು ತೆರೆದ ರಂಧ್ರಗಳ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ. ಮೊಡವೆಗಳಂತಹ ಸಮಸ್ಯೆಗಳನ್ನು ಸಹ ಕಡಿಮೆ ಮಾಡುತ್ತದೆ.