Small Business Idea: 25 ಸಾವಿರ ಹೂಡಿಕೆ ಮಾಡಿ, ಪ್ರತಿ ತಿಂಗಳು 2 ಲಕ್ಷ ಗಳಿಸಿ!
ಇತ್ತೀಚಿನ ದಿನಗಳಲ್ಲಿ ಮೀನು ಸಾಕಣೆಯ ವ್ಯವಹಾರವು ಬಹಳ ಜನಪ್ರಿಯವಾಗುತ್ತಿದೆ. ಸರ್ಕಾರದ ನೆರವಿನಿಂದ ಆರಂಭವಾದ ಈ ವ್ಯವಹಾರದಿಂದ 2 ಲಕ್ಷಕ್ಕೂ ಅಧಿಕ ಆದಾಯ ಬರುತ್ತದೆ. ಕೇಂದ್ರ ಸರ್ಕಾರವೂ ಹಲವು ಸೌಲಭ್ಯಗಳನ್ನು ನೀಡುತ್ತಿರುವುದು ಗಮನಿಸಬೇಕಾದ ಸಂಗತಿ. ನೀವು ಈ ಬ್ಯುಸಿನೆಸ್ ಪ್ರಾರಂಭಿಸಲು ಬಯಸಿದರೆ ನಿಮ್ಮ ರಾಜ್ಯದ ಮೀನುಗಾರಿಕೆಗೆ ಸಂಬಂಧಿತ ಕಚೇರಿಯಲ್ಲಿ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದು.
ನೀವು ಮೀನು ಸಾಕಾಣಿಕೆ ವ್ಯವಹಾರ ಮಾಡುತ್ತಿದ್ದರೆ ಅಥವಾ ಪ್ರಾರಂಭಿಸಲು ಬಯಸಿದರೆ ಇದರ ಆಧುನಿಕ ತಂತ್ರಜ್ಞಾನವು ನಿಮಗೆ ಬಂಪರ್ ಲಾಭವನ್ನು ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಬಯೋಫ್ಲಾಕ್ ಟೆಕ್ನಿಕ್ ಮೀನು ಸಾಕಣೆಗೆ ಬಹಳ ಪ್ರಸಿದ್ಧವಾಗಿದೆ. ಈ ತಂತ್ರವನ್ನು ಬಳಸಿಕೊಂಡು ಅನೇಕ ಜನರು ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ.
ಬಯೋಫ್ಲೋಕ್ ಟೆಕ್ನಿಕ್ ಎಂಬುದು ಮೀನುಗಾರಿಕೆ ವ್ಯವಹಾರಕ್ಕೆ ಸಂಬಂಧಿಸಿದ ಬ್ಯಾಕ್ಟೀರಿಯಾದ ಹೆಸರು. ಈ ತಂತ್ರದ ಮೂಲಕ ಮೀನು ಸಾಕಾಣಿಕೆಯ ವ್ಯವಹಾರವು ತುಂಬಾ ಸುಲಭವಾಗುತ್ತದೆ. ಇದರಲ್ಲಿ ಮೀನುಗಳನ್ನು ದೊಡ್ಡ (ಸುಮಾರು 10-15 ಸಾವಿರ ಲೀಟರ್) ತೊಟ್ಟಿಗಳಲ್ಲಿ ಹಾಕಲಾಗುತ್ತದೆ. ಈ ತೊಟ್ಟಿಗಳಲ್ಲಿ ನೀರು ಸುರಿಯುವುದು, ವಿತರಿಸುವುದು, ಅದರಲ್ಲಿ ಆಮ್ಲಜನಕ ನೀಡುವುದು ಇತ್ಯಾದಿ ಉತ್ತಮ ವ್ಯವಸ್ಥೆ ಇದೆ. ಬಯೋಫ್ಲೋಕ್ ಬ್ಯಾಕ್ಟೀರಿಯಾವು ಮೀನಿನ ಮಲವನ್ನು ಪ್ರೋಟೀನ್ ಆಗಿ ಪರಿವರ್ತಿಸುತ್ತದೆ. ಇದನ್ನು ಮೀನು ಮತ್ತೆ ತಿನ್ನುತ್ತದೆ, ಆಹಾರದ 3ನೇ ಒಂದು ಭಾಗವನ್ನು ಉಳಿಸುತ್ತದೆ. ನೀರು ಕೂಡ ಕೊಳೆಯಾಗದಂತೆ ನೋಡಿಕೊಳ್ಳುತ್ತದೆ. ಖರ್ಚಿನ ಬಗ್ಗೆ ಮಾತನಾಡುವುದಾದರೆ ನೀವು 7 ಟ್ಯಾಂಕ್‌ಗಳೊಂದಿಗೆ ನಿಮ್ಮ ವ್ಯವಹಾರ ಪ್ರಾರಂಭಿಸಲು ಬಯಸಿದರೆ ಸುಮಾರು 7.5 ಲಕ್ಷ ರೂ. ವೆಚ್ಚವಾಗುತ್ತದೆ. ಆದಾಗ್ಯೂ ನೀವು ಜಮೀನಿನಲ್ಲಿ ಕೊಳ ನಿರ್ಮಿಸಿ ಮೀನು ಸಾಕಾಣಿಕೆ ಮಾಡಿದರೆ ದೊಡ್ಡ ಲಾಭ ಸಿಗುತ್ತದೆ.
ಮೀನು ಸಾಕಣೆಯು ಭರ್ಜರಿ ಲಾಭ ತಂದುಕೊಡುತ್ತದೆ. ನೀವು ಕಡಿಮೆ ವೆಚ್ಚದಲ್ಲಿ ಅಧಿಕಾ ಲಾಭ ಪಡೆಯಬಹುದು. ಸರ್ಕಾರವೂ ಕೂಡ ಮೀನುಗಾರಿಕೆಗೆ ಉತ್ತೇಜನ ನೀಡುತ್ತಿದೆ. ಮೀನು ಕೃಷಿಕರನ್ನು ಪ್ರೋತ್ಸಾಹಿಸಲು ಛತ್ತೀಸ್‌ಗಢ ಸರ್ಕಾರವು ಕೃಷಿ ಸ್ಥಾನಮಾನವನ್ನೂ ನೀಡಿದೆ. ರಾಜ್ಯ ಸರ್ಕಾರಗಳು ಮೀನುಗಾರರಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ನೀಡುತ್ತಿವೆ. ಇದರೊಂದಿಗೆ ಸರ್ಕಾರದಿಂದ ಮೀನುಗಾರರಿಗೆ ವಿಮಾ ಯೋಜನೆ ಮತ್ತು ಸಹಾಯಧನವೂ ದೊರೆಯುತ್ತದೆ. ಇದರ ಬಗ್ಗೆ ನೀವು ಸಂಬಂಧಿತ ಕೃಷಿ ಇಲಾಖೆಗಳಲ್ಲಿ ವಿಚಾರಿಸಬೇಕು.
ವಿವಿಧ ರಾಜ್ಯಗಳಲ್ಲಿ ಮೀನುಗಾರಿಕೆಗಾಗಿ ರೈತರಿಗೆ ತರಬೇತಿ ನೀಡಲಾಗುತ್ತದೆ. ಈ ತರಬೇತಿಯ ನಂತರ ರೈತರು ಈ ವ್ಯವಹಾರದಲ್ಲಿ ಕೇವಲ 25 ಸಾವಿರ ರೂ. ಹೂಡಿಕೆ ಮಾಡುವ ಮೂಲಕ ಲಾಭ ಗಳಿಸಲು ಪ್ರಾರಂಭಿಸುತ್ತಾರೆ. ಇದಕ್ಕಾಗಿ ನೀವು ಸ್ವಲ್ಪ ತಂತ್ರಜ್ಞಾನ ಮತ್ತು ಜಾಗವನ್ನು ಹೊಂದಿರಬೇಕು. ಇದರಡಿ ಮೀನುಗಾರರಿಗೆ ವಿಮಾ ಯೋಜನೆಗಳು ಮತ್ತು ಸಬ್ಸಿಡಿಗಳು ಸಹ ಸರ್ಕಾರದಿಂದ ಲಭ್ಯವಿದೆ.