Saving Tips: ಹಣ ಉಳಿಸಲು ಬಹಳ ಪ್ರಯೋಜನಕಾರಿ ಸಲಹೆಗಳಿವು

Tue, 10 Jan 2023-3:29 pm,

ಹಣ ಉಳಿತಾಯ: ಇಂದಿನ ಯುಗದಲ್ಲಿ ಎಲ್ಲದಕ್ಕೂ ಹಣವೇ ಮುಖ್ಯ. ಪ್ರಸ್ತುತ ಜೀವನ ನಡೆಸಲು ಮಾತ್ರವಲ್ಲ, ಭವಿಷ್ಯದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಕೂಡ ಹಣ ಬೇಕೇ ಬೇಕು. ಇದಕ್ಕಾಗಿ, ಹಣ ಉಳಿಕೆ, ಜೊತೆಗೆ ಸರಿಯಾದ ಸ್ಥಳದಲ್ಲಿ ಹಣದ ಹೂಡಿಕೆ ಎರಡೂ ಬಹಳ ಮುಖ್ಯ. 

ಕೈಯಲ್ಲಿ ಕಾಸಿದ್ದರೆ ಬೇಕೆಂದಿದ್ದನ್ನೆಲ್ಲಾ ಕೊಳ್ಳುವ ಅಗತ್ಯವಿಲ್ಲ. ನೀವು ಹಣ ಉಳಿಸಲು ಅನುಸರಿಸಬೇಕಾದ ಮೊದಲ ಹೆಜ್ಜೆ ಎಂದರೆ ನೀವು ಒಂದು ಸಣ್ಣ ಪಿನ್ ಕೊಳ್ಳಬೇಕೆಂದರೂ ಅದು ನಿಮಗೆ ಅಗತ್ಯವೇ? ಎಂಬುದನ್ನು ಒಮ್ಮೆ ಯೋಚಿಸಿ. ನಿಮಗೆ ನಿಜವಾಗಿಯೂ ಅಗತ್ಯವಿದ್ದರೆ ಮಾತ್ರವೇ ಖರೀದಿಸಿ.

ಇತ್ತೀಚಿನ ದಿನಗಳಲ್ಲಿ ಏನನ್ನಾದರೂ ಕೊಳ್ಳಲು ಮಾರುಕಟ್ಟೆಗೆ ಹೋಗಬೇಕು ಎಂಬ ಅಗತ್ಯವಿಲ್ಲ. ಆನ್‌ಲೈನ್ ಶಾಪಿಂಗ್ ನಮ್ಮ ಕೆಲಸವನ್ನು ಸುಲಭಗೊಳಿಸಿದೆ. ವಿಪರ್ಯಾಸವೆಂದರೆ ತಂತ್ರಜ್ಞಾನ ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಹಾನಿಕಾರಕವೂ ಹೌದು. ಆನ್‌ಲೈನ್‌ ಶಾಪಿಂಗ್ ಒಂದು ಗೀಳಾಗಿ ಪರಿವರ್ತನೆಯಾದರೆ ಕಂಡಕಂಡದ್ದನ್ನೆಲ್ಲಾ ಕೊಳ್ಳುತ್ತಾ ಹಣ ವ್ಯರ್ಥವಾಗುತ್ತದೆ. ಹಾಗಾಗಿ, ಇದನ್ನು ತಪ್ಪಿಸಿ. 

ನೀವು ಏನನ್ನಾದರೂ ಖರೀದಿಸುವಾಗ ಮಿಗುವ ಚಿಲ್ಲರೆಯನ್ನು ಉಳಿಸುವ ಅಭ್ಯಾಸ ರೂಢಿಸಿಕೊಳ್ಳಿ. ಒಂದು ರೂಪಾಯಿಯನ್ನೂ ನಿರ್ಲಕ್ಷಿಸಬೇಡಿ. ಕೆಲವೊಮ್ಮೆ ನೀವು ಉಳಿಸಿದ ಚಿಲ್ಲರೆಯೇ ನಿಮ್ಮ ಕಷ್ಟಕಾಲದಲ್ಲಿ ಸಹಾಯಕ್ಕೆ ಬರಬಹುದು.

ಪ್ರಸ್ತುತ ಎಲ್ಲದಕ್ಕೂ ಚಂದಾದಾರಿಕೆ ಬಹಳ ಮುಖ್ಯ. ನೀವು ಯಾವುದೇ ಚಂದಾದಾರಿಕೆಯನ್ನು ಪಡೆದಿದ್ದರೆ ಅವುಗಳನ್ನು ಬಳಸುತ್ತಿಲ್ಲ ಎಂದಾದರೆ ಚಂದಾದಾರಿಕೆಯನ್ನು ರದ್ದುಗೊಳಿಸಿ. ಈ ರೀತಿ ಮಾಡುವುದರಿಂದ ಸಾಕಷ್ಟು ಹಣ ಉಳಿಸಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link