Battery Protection: ಈ ತಪ್ಪುಗಳಿಂದ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಹಾಳಾಗುತ್ತದೆ..!
ಮ್ಯೂಸಿಕ್ ಆಲಿಸಲು ನೀವು ಯಾವಾಗಲೂ ಹೆಡ್‌ಫೋನ್‌ಗಳು ಅಥವಾ ಏರ್ ಫೋನ್‌ಗಳನ್ನು ಬಳಸಬೇಕು. ಇದು ಬ್ಯಾಟರಿ ಬಳಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಆದರೆ ಇವುಗಳಿಲ್ಲದೆ ಸಂಗೀತ ಕೇಳಿದರೆ, ಬ್ಯಾಟರಿಯು ಅಗತ್ಯಕ್ಕಿಂತ ಹೆಚ್ಚು ಖರ್ಚಾಗುತ್ತದೆ.
ನೀವು ಚಾರ್ಜಿಂಗ್ ವೇಳೆ ಗೇಮ್ ಆಡುತ್ತಿದ್ದರೆ ಕೂಡಲೇ ನಿಲ್ಲಿಸಿ. ಏಕೆಂದರೆ ಚಾರ್ಜಿಂಗ್ ಸಮಯದಲ್ಲಿ ಬ್ಯಾಟರಿ ಸ್ವಲ್ಪ ಬಿಸಿಯಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನೀವು ಗೇಮ್ ಆಡಿದ್ರೆ ಬ್ಯಾಟರಿಯು ಅತಿಯಾಗಿ ಬಿಸಿಯಾಗಬಹುದು. ಇದು ಫೋನಿನ ಬ್ಯಾಟರಿ ಹಾಳಾಗಲು ಕಾರಣವಾಗುತ್ತದೆ.
ನೀವು Vibration Notifications ತಪ್ಪಿಸಬೇಕು. ಏಕೆಂದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Notifications ಬಂದಾಗಲೆಲ್ಲಾ ಅದು Vibration ಆಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ಬ್ಯಾಟರಿ ಡ್ರೈನ್ ವಿಪರೀತವಾಗಿ ಹೆಚ್ಚಾಗುತ್ತದೆ ಮತ್ತು ನಿಮ್ಮ ಸ್ಮಾರ್ಟ್‌ಫೋನ್ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲ್ಲ.
ನೀವು ಯಾವಾಗಲೂ ಸ್ಮಾರ್ಟ್‌ಫೋನ್‌ನಲ್ಲಿರುವ ರಿಂಗ್‌ಟೋನ್‌ಗಳನ್ನು ಮಾತ್ರ ಆಯ್ಕೆ ಮಾಡಬೇಕು. ಏಕೆಂದರೆ ಅವುಗಳ ಬೀಟ್‌ಗಳು ಮತ್ತು ಅವುಗಳ ಧ್ವನಿಯು ತುಂಬಾ ಕಡಿಮೆಯಿರುತ್ತದೆ. ಇದರ ಕಾರಣದಿಂದ ಬ್ಯಾಟರಿಯು ಕಡಿಮೆ ಖರ್ಚಾಗುತ್ತದೆ. ನೀವು ರಿಂಗ್‌ಟೋನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಹೊಂದಿಸಿದರೆ ಅದರ ಆವರ್ತನವು ಅಧಿಕವಾಗಿರುತ್ತದೆ ಮತ್ತು ಹೆಚ್ಚು ಬ್ಯಾಟರಿಯನ್ನು ಬಳಸುತ್ತದೆ.
ನೀವು ಸ್ಮಾರ್ಟ್‌ಫೋನ್‌ನಲ್ಲಿರುವ ಅನಗತ್ಯ ಫೈಲ್‌ಗಳನ್ನು ಡಿಲೀಟ್ ಮಾಡಬೇಕು. ಏಕೆಂದರೆ ಈ ಫೈಲ್‌ಗಳಿಂದಾಗಿ ಸ್ಮಾರ್ಟ್‌ಫೋನ್‌ನ ಪ್ರೊಸೆಸರ್‌ನಲ್ಲಿ ಹೆಚ್ಚಿನ ಒತ್ತಡವಿರುತ್ತದೆ. ಈ ಒತ್ತಡವು ವಿಪರೀತವಾಗಿ ಹೆಚ್ಚಾದಾಗ ಅದು ಬಿಸಿಯಾಗಲು ಪ್ರಾರಂಭಿಸುತ್ತದೆ. ನಂತರ ಅದು ಬ್ಯಾಟರಿಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಬ್ಯಾಟರಿಯ ಬಾಳ್ವಿಕೆ ಕಡಿಮೆಯಾಗುತ್ತದೆ.