ಕ್ರಿಕೆಟ್ ಕ್ರಶ್ ಸ್ಮೃತಿ ಮಂಧಾನ ಬಾಯ್ ಫ್ರೆಂಡ್ ಯಾರು ಗೊತ್ತಾ…? ದೀಪಿಕಾ, ಅಮಿತಾಬ್’ಗೆ ಇವರೇ ಫೇವರೇಟ್ ಸಿಂಗರ್

Wed, 27 Dec 2023-9:48 pm,

ಭಾರತ ಮಹಿಳಾ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಬಾಲಿವುಡ್ ಖ್ಯಾತ ಗಾಯಕನ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತದೆ.

ಅವರ ಹೆಸರು ಪಲಾಶ್ ಮುಚ್ಚಲ್. ಪಲಾಶ್ ಸಂಗೀತ ಸಂಯೋಜಕ ಮತ್ತು ಗಾಯಕ ಕೂಡ. ಸ್ಮೃತಿ ಮಂಧಾನ ಮತ್ತು ಪಲಾಶ್ ನಡುವಿನ ಸಂಬಂಧ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಾಗುತ್ತಿದೆ.  

ಅಂದಹಾಗೆ ಪಲಾಶ್ ಮುಚ್ಚಲ್ ಮಧ್ಯಪ್ರದೇಶದ ಇಂದೋರ್‌ ಮೂಲದವರು. ಇವರ ಸಹೋದರಿ ಪಾಲಕ್ ಮುಚ್ಚಲ್ ಬಾಲಿವುಡ್’ನ ಖ್ಯಾತ ಹಿನ್ನೆಲೆ ಗಾಯಕಿ.

ಅಕ್ಕ ತಮ್ಮ ಸೇರಿಕೊಂಡು, ಹೃದ್ರೋಗದ ವೈದ್ಯಕೀಯ ಚಿಕಿತ್ಸೆಗೆ ಅಗತ್ಯವಿರುವ ಬಡ ಮಕ್ಕಳಿಗೆ ಹಣವನ್ನು ಸಂಗ್ರಹಿಸಲೆಂದು ಚಾರಿಟಿಯನ್ನು ಪ್ರಾರಂಭಿಸಿದ್ದರು.

ಪಲಾಶ್ ಮುಚ್ಚಲ್ ಇಂದೋರ್‌’ನ ಮಾರ್ವಾಡಿ ಕುಟುಂಬದಲ್ಲಿ 22 ಮೇ 1995 ರಂದು ಜನಿಸಿದರು. ತಾಯಿ ಅಮಿತಾ ಮುಚ್ಚಲ್ ಗೃಹಿಣಿ ಮತ್ತು ತಂದೆ ರಾಜ್‌ ಕುಮಾರ್ ಮುಚ್ಚಲ್ ಖಾಸಗಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪಲಾಶ್ ಮುಚ್ಚಲ್ ಅವರ ಚೊಚ್ಚಲ ಚಿತ್ರ ‘ಡಿಶ್ಕಿಯಾವೂ’ 28 ಮಾರ್ಚ್ 2014 ರಂದು ಬಿಡುಗಡೆಯಾಯಿತು. ಇನ್ನು ಇವರ ಫೇಮಸ್ ಹಾಡುಗಳೆಂದರೆ ಭೂತನಾಥ್ ರಿಟರ್ನ್ಸ್‌’ನ "ಪಾರ್ಟಿ ತೋ ಬಂತಿ ಹೈ" ಮತ್ತು ಡಿಶ್ಕಿಯಾವೂನ್‌ ಚಿತ್ರದ "ತು ಹಿ ಹೈ ಆಶಿಕಿ"

ZEENEWS TRENDING STORIES

By continuing to use the site, you agree to the use of cookies. You can find out more by Tapping this link