ಮನೆಯ ಸುತ್ತ ಈ ಎಣ್ಣೆ ಚೆಲ್ಲಿದರೆ ಒಂದೇ ಒಂದು ಹಾವು ಕೂಡ ಅತ್ತಕಡೆ ಸುಳಿಯಲ್ಲ!
ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಬಳಕೆ ಮಾಡುವ ಮೂಲಕ ಹಾವುಗಳು ಬಾರದಂತೆ ತಡೆಯಬಹುದು. ಅಂತಹ ವಸ್ತುಗಳು ಯಾವುವು ಎಂಬುದನ್ನು ಈ ವರದಿಯಲ್ಲಿ ನೋಡೋಣ.
ಕಾರ್ಬೋಲಿಕ್ ಆಮ್ಲವು ಹಾವುಗಳನ್ನು ಓಡಿದುಲು ಅತ್ಯುತ್ತಮ ಅಸ್ತ್ರವಾಗಿದೆ. ಮನೆಯ ಸುತ್ತಲೂ ಕಾರ್ಬೋಲಿಕ್ ಆಮ್ಲವನ್ನು ಸುರಿದರೆ ಅತ್ತಕಡೆ ಒಂದೇ ಒಂದು ಹಾವುಗಳ ಸಹ ಸುಳಿಯಲ್ಲ.
ಕಾರ್ಬೋಲಿಕ್ ಆಮ್ಲ ಇಲ್ಲದಿದ್ದರೆ, ಹಾವು ಚಲಿಸುವ ಜಾಗಕ್ಕೆ ಸಲ್ಫರ್ ಅಥವಾ ಗಂಧಕದ ಪುಡಿಯನ್ನು ಸಿಂಪಡಿಸಿ. ಸಲ್ಫರ್ ಪೌಡರ್ ಹಾವುಗಳ ಚರ್ಮಕ್ಕೆ ಸ್ಪರ್ಶಿಸಿದಂತೆ ಅವುಗಳು ಕೆರಳುತ್ತವೆ. ಅಷ್ಟೇ ಅಲ್ಲದೆ, ಉರಿಯ ಅನುಭವದಿಂದ ಅಲ್ಲಿಂದ ಓಡಿ ಹೋಗುತ್ತವೆ.
ಮನೆಯ ಸುತ್ತಲೂ ಬೆಳ್ಳುಳ್ಳಿ ಎಣ್ಣೆ ಅಥವಾ ಬೆಳ್ಳುಳ್ಳಿಯನ್ನೇ ಪುಡಿಮಾಡಿ ಹಾಕಿದರೆ, ಅಗತ್ಯವಿದ್ದಲ್ಲಿ ಅದಕ್ಕೆ ಸಾಸಿವೆ ಎಣ್ಣೆಯನ್ನು ಸಹ ಮಿಶ್ರಣ ಮಾಡಿ. ಇದನ್ನು ಮನೆಯ ಸುತ್ತಲೂ ಸಿಂಪಡಿಸಿದರೆ ಒಂದೇ ಒಂದು ಹಾವು ಕೂಡ ಆ ಕಡೆ ಬರಲ್ಲ.
ನಿಂಬೆ ರಸದೊಂದಿಗೆ ಕೆಂಪು ಮೆಣಸು ಅಥವಾ ಸುಣ್ಣದ ಪುಡಿಯನ್ನು ಬೆರೆಸಿ ಮನೆಯ ಸುತ್ತಲೂ ಸಿಂಪಡಿಸಬಹುದು. ಹೀಗೆ ಮಾಡಿದರೆ ಹಾವುಗಳು ಆ ಜಾಗಕ್ಕೆ ಬರುವುದಿಲ್ಲ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)