Snakes: ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಿವು, ಒಂದೇ ಹೊಡೆತಕ್ಕೆ ಮನುಷ್ಯರ ಉಸಿರನ್ನೇ ನಿಲ್ಲಿಸುತ್ತವೆ
ನಾಗರ ಹಾವಿನ ಪ್ರಜಾತಿಗಳಲ್ಲಿ, ಹೆಚ್ಚು ವಿಷವು ಫಿಲಿಪೈನ್ ಪ್ರಜಾತಿಯ ಹಾವುಗಳಲ್ಲಿ ಕಂಡುಬರುತ್ತದೆ. ಈ ನಾಗರಹಾವು ತನ್ನ ಬೇಟೆಯನ್ನು ಕಚ್ಚುವುದಿಲ್ಲ, ತನ್ನ ಬೇಟೆಯ ಮೇಲೆ ತನ್ನ ಬಾಯಿಯಿಂದ ವಿಷವನ್ನು ಸಿಂಪಡಿಸುತ್ತದೆ ಎಂಬುದು ಇಲ್ಲಿ ವಿಶೇಷ. ಇದರ ವಿಷ ಅದರ ಶತ್ರುವಿನ ಅಥವಾ ಮನುಷ್ಯನ ಉಸಿರು ಮತ್ತು ಹೃದಯದ ಮೇಲೆ ನೇರ ಪರಿಣಾಮ ಬೀರುತ್ತದೆ.
ಸಾ-ಸ್ಕೇಲ್ಡ್ ವೈಪರ್ನ ಒಂದೇ ಹೊಡೆತದಲ್ಲಿ 70 ಮಿಗ್ರಾಂ ವಿಷ ಇರುತ್ತದೆ. ಓರ್ವ ಸಾಮಾನ್ಯ ಮನುಷ್ಯನನ್ನು ಗಂಭೀರವಾಗಿ ಗಾಯಗೊಳಿಸಲು ಕೇವಲ 5 ಮಿಲಿಗ್ರಾಂ ವಿಷ ಸಾಕು. ಇದನ್ನು ತಿಳಿದ ನಂತರ, ಈ ಹಾವಿನಿಂದ ಉಂಟಾಗುವ ಅಪಾಯವನ್ನು ಒಮ್ಮೆ ಊಹಿಸಿ ನೋಡಿ.
ಬಾರ್ಬಾ ಅಮರಿಲ್ಲಾ ವಿಶಾಲವಾದ ತ್ರಿಕೋನಾಕಾರದ ತಲೆಯನ್ನು ಹೊಂದಿರುತ್ತದೆ ಮತ್ತು ಸಾಮಾನ್ಯವಾಗಿ 1.2 ರಿಂದ 2 ಮೀಟರ್ ಉದ್ದವಿರುತ್ತದೆ. ಈ ಹಾವು ಕಂದು ಅಥವಾ ಬೂದು ಬಣ್ಣದ್ದಾಗಿರುತ್ತದೆ. ಇದರ ಕಡಿತವು ಮನುಷ್ಯರಿಗೆ ತುಂಬಾ ಮಾರಕ ಎಂದು ಸಾಬೀತಾಗಬಹುದು. ಇದರ ಒಂದು ಹೊಡೆತ ನಿಮಗೆ ಶಾಕಷ್ಟು ನೋವನ್ನು ನೀಡುತ್ತದೆ.
ಈಸ್ಟರ್ನ್ ಟೈಗರ್ ಹಾವಿನ ವಿಷದಲ್ಲಿ ರಕ್ತ ಹೆಪ್ಪುಗಟ್ಟುವ ಮತ್ತು ನರ ಪಾರ್ಶ್ವವಾಯುವಿಗೆ ಕಾರಣವಾಗುವ ಏಜೆಂಟ್ ಇರುತ್ತದೆ, ಇದು ಮನುಷ್ಯರಿಗೆ ಅತ್ಯಂತ ಅಪಾಯಕಾರಿಯಾಗಿದೆ. ದಾಳಿ ಮಾಡುವ ಮೊದಲು ಟೈಗರ್ ಹಾವು ತನ್ನ ತಲೆ ಮತ್ತು ಕುತ್ತಿಗೆಯನ್ನು ಚಪ್ಪಟೆಗೊಳಿಸಿ ನಂತರ ದಾಳಿ ಇಡುತ್ತದೆ.
ಸಮುದ್ರ ಹಾವುಗಳನ್ನು ವಿಶ್ವದ ಅತ್ಯಂತ ವಿಷಕಾರಿ ಹಾವುಗಳೆಂದು ಪರಿಗಣಿಸಲಾಗಿದೆ. ಈ ಅಪಾಯಕಾರಿ ಹಾವಿನ ವಿಷದ ಕೆಲವೇ ಹನಿಗಳು 1,000 ಜನರನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಇವು ಸಮುದ್ರದಲ್ಲಿ ಮಾತ್ರ ಕಂಡುಬರುವುದರಿಂದ ಮೀನುಗಾರರು ಹೆಚ್ಚಾಗಿ ಇವುಗಳಿಗೆ ಗುರಿಯಾಗಿ ಪ್ರಾಣ ಕಳೆದುಕೊಳ್ಳುತ್ತಾರೆ.