ಈ ಸೊಪ್ಪನ್ನು ಬರೀ ಮೂಸಿ ನೋಡುವುದರರಿಂದಲೇ ಶೀತ ಕೆಮ್ಮು ತಕ್ಷಣ ಪರಿಹಾರವಾಗುತ್ತದೆ ! ಕಫ, ತಲೆನೋವಿಗೂ ಇದೇ ಮದ್ದು
ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳಿಂದ ಪರಿಹಾರ ನೀಡುವ ನೈಸರ್ಗಿಕ ವಸ್ತುವೆಂದರೆ ಪುದೀನ ಎಲೆಗಳು. ಆಯುರ್ವೇದದಲ್ಲಿಯೂ ಪುದೀನ ಎಲೆಗಳನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಿಕ ಔಷಧಿಯಾಗಿ ನೋಡಲಾಗುತ್ತದೆ.
ಒಂದು ಹಿಡಿ ಪುದೀನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಹಾಗೆ ಮೂಸಿ ನೋಡಿ. ಪದೇ ಪದೇ ದಿನದಲ್ಲಿ ಈ ರೀತಿ ಮಾಡುವುದರಿಂದ ಶೀತ ಮತ್ತು ತಲೆನೋವಿನಿಂದ ಮುಕ್ತಿ ಪಡೆಯಬಹುದು .
ಪುದೀನ ಎಲೆಗಳನ್ನು ಜಗಿಯುವುದರಿಂದ ಎದೆಯ ಬಳಿಯ ಕಂಜೆಶನ್ ಕಡಿಮೆಯಾಗುತ್ತದೆ. ಇದು ಕಫ ಕರಗಿಸಲು ಸಹಾಯ ಮಾಡುತ್ತದೆ.ಉಸಿರಾಟದ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಪುದಿನಾ ರಸವನ್ನು ಶರಬತ್ತು ಮತ್ತು ಇತರ ಪಾನೀಯಗಳೊಂದಿಗೆ ಬೆರೆಸಿ ಕುಡಿಯುವುದರಿಂದ ದೇಹಕ್ಕೆ ಶಾಖದಿಂದ ಪರಿಹಾರ ಸಿಗುತ್ತದೆ.
ಪುದೀನಾ ಆಂಟಿವೈರಲ್ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಪುದೀನ ಎಲೆಗಳು ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ.
ಸೂಚನೆ: ಆತ್ಮೀಯ ಓದುಗರೇ, ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ.ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ.ಜೀ ನ್ಯೂಸ್ ಇದನ್ನು ಅನುಮೊದಿಸುವುದಿಲ್ಲ.