ಅನ್ನ ಬೇಯಿಸುವ ಮುನ್ನ ಹೀಗೆ ಮಾಡಿ.. ಬ್ಲಡ್ ಶುಗರ್ ಹೆಚ್ಚಾಗುವುದಿಲ್ಲ.. ತೂಕ ಕೂಡ ಇಳಿಕೆಯಾಗುತ್ತೆ!
ಸಾಮಾನ್ಯವಾಗಿ ಅನ್ನವನ್ನು ಬೇಯಿಸುವಾಗ ಅಕ್ಕಿಯನ್ನು ತೊಳೆದು ರೈಸ್ ಕುಕ್ಕರ್‌ನಲ್ಲಿ ಹಾಕುತ್ತೇವೆ ಅಥವಾ ಒಲೆಯ ಮೇಲೆ ಬೇಯಿಸುತ್ತೇವೆ. ಅದರ ಬದಲು ಅಕ್ಕಿ ನೆನೆಸಿಟ್ಟು ಅನ್ನ ಮಾಡಬೇಕು.
ಅಕ್ಕಿಯನ್ನು ಬೇಯಿಸುವ ಮೊದಲು ನೆನೆಸಿಡಬೇಕು. ಇದು ಬ್ಲಡ್ ಶುಗರ್ ಹೆಚ್ಚಾಗುವುದನ್ನು ತಡೆಯುತ್ತದೆ. ತೂಕವನ್ನು ಸಹ ಕಡಿಮೆ ಮಾಡುತ್ತದೆ.
ಮಧುಮೇಹ ಇರುವವರು ಅನ್ನವನ್ನು ತಿನ್ನಬಾರದು. ಇದರಲ್ಲಿರುವ ಕಾರ್ಬೋಹೈಡ್ರೇಟ್‌ಗಳು ಸಕ್ಕರೆಯ ಮಟ್ಟದಲ್ಲಿ ಹಠಾತ್ ಹೆಚ್ಚಳಕ್ಕೆ ಕಾರಣವಾಗುತ್ತವೆ. ಅದಕ್ಕಾಗಿಯೇ ವೈದ್ಯರು ಕಡಿಮೆ ಪ್ರಮಾಣದಲ್ಲಿ ಅನ್ನವನ್ನು ತಿನ್ನಲು ಸಲಹೆ ನೀಡುತ್ತಾರೆ.
ಅಕ್ಕಿಯನ್ನು ಬೇಯಿಸುವ ಮೊದಲು ನೆನೆಸಿಟ್ಟರೆ ಮಧುಮೇಹಿಗಳಿಗೂ ಒಳ್ಳೆಯದು. ಈ ರೀತಿ ಅನ್ನವನ್ನು ಬೇಯಿಸಿ ಮಧುಮೇಹಿಗಳು ತಿಂದರೆ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುವುದಿಲ್ಲ. ಅಕ್ಕಿ ನೆನಸಿಟ್ಟು ಬೇಯಿಸಿದರೆ, ಅನ್ನ ತಿಂದ ನಂತರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವುದಿಲ್ಲ.
ಸಾಮಾನ್ಯವಾಗಿ ಕೆಲವರು ಅನ್ನ ತಿಂದ ತಕ್ಷಣ ತೂಕ ಹೆಚ್ಚಿಸಿಕೊಳ್ಳುತ್ತಾರೆ. ಅದಕ್ಕಾಗಿಯೇ ಅನೇಕರು ಅನ್ನ ತಿನ್ನುವುದನ್ನು ತಪ್ಪಿಸುತ್ತಾರೆ. ಅಕ್ಕಿಯನ್ನು ಬೇಯಿಸುವ ಮೊದಲು ನೆನೆಸಿಟ್ಟರೆ ತೂಕ ಹೆಚ್ಚಾಗುವುದಿಲ್ಲ. (ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.)