ನಿಶ್ಚಿತಾರ್ಥವಾದ ಕೆಲವೇ ದಿನದಲ್ಲಿ ನಾಗಚೈತನ್ಯ ಕುಟುಂಬಕ್ಕೆ ಶಾಕ್ ಕೊಟ್ಟ ಸೋಭಿತಾ ಧೂಳಿಪಾಲ! ಅಕ್ಕಿನೇನಿ ಮನದಲ್ಲಿ ಶುರುವಾಯ್ತು ತಳ ಮಳ
Sobhita Dhulipala: ಸೋಭಿತಾ ಧೂಳಿಪಾಲ.. ಈ ಹೆಸರಿಗೆ ವಿಶೇಷ ಪರಿಚಯ ಅಗತ್ಯವಿಲ್ಲ, ಯಾಕೆಂದರೆ ಇತ್ತೀಚೆಗೆ ಈಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾಳೆ, ಅದರಲ್ಲಂತೂ ಸಮಂತಾ ಫ್ಯಾನ್ಸ್ ಕೆಂಗಣ್ಣಿಗೆ ಈಕೆ ಗುರಿಯಾಗಿದ್ದಾಳೆ.
ಸಮಂತಾ ಅವರೊಂದಿಗೆ ವಿಚ್ಛೇದನದ ನಂತರ ನಾಗಚೈತನ್ಯ ಸೋಭಿತಾ ಅವರ ಜೊತೆ ನಿಶ್ಛಿತಾರ್ಥ ಮಾಡಿಕೊಂಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.
ಇದೀಗ ನಟಿ ಕೊಟ್ಟಿರುವ ಒಂದು ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚೆಗೆ ಸಂರ್ಶನವೊಂದರಲ್ಲಿ ಭಾಗಿಯಾಗಿದ್ದ ನಟಿ ಹಲವು ವಿಷಯಗಳ ಕುರಿತು ಮಾಹಿತಿ ಹಂಚಿಕೊಂಡರು. ಅದರಲ್ಲಿ ಪ್ರಮುಖವಾಗಿ ನಿಶ್ಚಿತಾರ್ಥದ ಕುರಿತು ನಟಿಯನ್ನು ಪ್ರಶ್ನಿಸಲಾಯಿತು, ಅದಕ್ಕೆ ಉತ್ತರಿಸಿದ ನಟಿ " ಅಂದುಕೊಂಡಂತೆ ಅತ್ಯಂತ ಶಾಂತವಾಗಿ, ಸರಳವಾಗಿ, ಸೂಪರ್ ಆಗಿ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿರುವುದು ಅತೀವ ಸಂತಸ ತಂದಿದೆ" ಎಂದರು.
ತಂದೆ-ತಾಯಿ, ಸಂಸ್ಕೃತಿ, ಸಂಪ್ರದಾಯಗಳನ್ನು ತುಂಬಾ ಗೌರವಿಸುತ್ತೇನೆ, ಅಷ್ಟೆ ಅಲ್ಲ ಅವರು ಎಂದಿಗೂ ನನ್ನ ಜೊತೆಯೇ ಇರಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.
ತಾಯ್ತನದ ಬಗ್ಗೆ ಕುಷಿ ಇದ್ದರೂ ಸಹ, ಆಕೆಗೆ ಈ ಮುಂಚೆ ಮದುವೆಯಾಗಲಿ, ಮಕ್ಕಳಾಗಲಿ ಯಾವುದೂ ಇಷ್ಟವಿರಲಿಲ್ಲ. ಈ ವಿಷಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.