ಅದೇ ನನಗೆ ಬೇಕು.. ನಾನು ತಾಯಿಯಾಗಬೇಕು..! ನಟಿ ಶೋಭಿತಾ ಹೇಳಿಕೆ ವೈರಲ್‌

Wed, 28 Feb 2024-11:58 pm,

2016 ರಲ್ಲಿ ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ʼರಮಣ್ ರಾಘವ್ 2.0ʼ ಸಿನಿಮಾದ ಮೂಲಕ ಶೋಭಿತಾ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. 2017 ರಲ್ಲಿ ಬಿಡುಗಡೆಯಾದ ʼಗೂಢಾಚಾರಿʼ ಸಿನಿಮಾದ ಮೂಲಕ ಸಾಕಷ್ಟು ಕ್ರೇಜ್ ಗಿಟ್ಟಿಸಿಕೊಂಡರು.

ಸಧ್ಯ ಮಂಕಿ ಮ್ಯಾನ್ ಎಂಬ ಹಾಲಿವುಡ್ ಸಿನಿಮಾದಲ್ಲಿ ಸೋಭಿತಾ ನಟಿಸುತ್ತಿದ್ದಾರೆ. ಈ ಮೂಲಕ ಅವರು ಪ್ಯಾನ್‌ ವರ್ಲ್ಡ್‌ ಲೆವೆಲ್‌ನಲ್ಲಿ ಮಿಂಚಲಿದ್ದಾರೆ. ಈ ಸಿನಿಮಾ ಅವರಿಗೆ ಯಶಸ್ಸನ್ನು ತಂದುಕೊಡಲಿದೆ ಎಂದು ಅಭಿಮಾನಿಗಳು ಹಾರೈಸಿದ್ದಾರೆ. 

ಇತ್ತೀಚಿನ ಸಂದರ್ಶನವೊಂದರಲ್ಲಿ ಶೋಭಿತಾ ʼಜೀವನದ ನಿಜವಾದ ಅರ್ಥವೇನುʼ ಎಂಬ ಪ್ರಶ್ನೆಗೆ ಉತ್ತರಿಸುತ್ತಾ.. ತಮ್ಮದೇ ಆದ ಶೈಲಿಯಲ್ಲಿ ಅದ್ಭುತ ಮಾತುಗಳನ್ನಾಡಿದ್ದಾರೆ. ಜೀವನದಲ್ಲಿ ನಾವು ಮಾಡುವ ಕೆಲಸಗಳು ನಮಗೆ ಖುಷಿ ಕೊಡುವ ರೀತಿಯಲ್ಲಿ ಇರಬೇಕು ಅಂತ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಅಲ್ಲದೆ, ಜೀವನದಲ್ಲಿ ಹೆಚ್ಚು ಆಶಿಸಿದ್ದು ತಾಯ್ತನ ಎಂದು ಶೋಭಿತಾ ಭಾವುಕರಾಗಿ ಮಾತನಾಡಿದ್ದು. ವಾಸ್ತವವಾಗಿ, ಅದು ಯಾವಾಗ ಬರುತ್ತದೆ ಅಂತ ನನಗೆ ತಿಳಿದಿಲ್ಲ, ಆದರೆ ಅದು ಅದ್ಭುತ ಘಳಿಗೆ ಅಂತ ತಾಯಿತನದ ಬಗ್ಗೆ ಹೆಮ್ಮೆಯ ನುಡಿಗಳನ್ನಾಡಿದ್ದಾರೆ. 

ಇನ್ನು ಮಗುವಿಗೆ ತಾಯಿಯಾಗುವುದು.. ಅಮ್ಮ ಅಂತ ಕರೆಸಿಕೊಳ್ಳುವುದು ತುಂಬಾ ಒಳ್ಳೆಯದು. ಅದಕ್ಕಾಗಿ ಕಾಯುತ್ತಿರುವೆ ಅಂತ ಹೇಳಿರುವ ಶೋಭಿತಾ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನಟಿಯ ಮಾತಿಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವದಂತಿಗಳು ಹರಿದಾಡುತ್ತಿವೆ. ನಾಗ ಚೈತನ್ಯ ಮತ್ತು ಶೋಭಿತಾ ಪರಸ್ಪರ ಪ್ರೀತಿಸುತ್ತಿದ್ದು, ಮದುವೆ ಆಗ್ತಾರೆ ಅಂತ ಹೇಳಲಾಗಿತ್ತು. ಆದ್ರೆ ಇದು ಸತ್ಯಕ್ಕೆ ದೂರವಾಗಿತ್ತು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link