ಶೋಭಿತಾ ಜೊತೆ ನಾಗ ಚೈತನ್ಯ ಡೇಟಿಂಗ್..! ಸಮಂತಾ ಚೈತನ್ಯ ಒಂದಾಗೋಕೆ ನೋ ಚಾನ್ಸ್
ನಟಿ ಸಮಂತಾ ರುತ್ ಪ್ರಭುವಿನಿಂದ ವಿಚ್ಛೇದನ ಪಡೆದ ನಂತರ ಚೈತನ್ಯ ತೆಲುಗು ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಸುಮಾರು ಮೂರು ವರ್ಷಗಳ ಕಾಲ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸಮಂತಾ ಮತ್ತು ಚೈತನ್ಯ ವಿಚ್ಛೇದನ ಪಡೆದಿದ್ದಾರೆ.
ಅಲ್ಲದೆ, ಎಲ್ಲವನ್ನೂ ಮರೆತು ಸ್ನೇಹಿತರಂತಿರುವ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ತಮ್ಮ ಜೀವನದಲ್ಲಿ ಮುಂದೆ ಸಾಗಿದ್ದಾರೆ.
ಇದೀಗ ಪೊನ್ನಿಯಿನ್ ಸೆಲ್ವನ್ I ನಟಿ ಶೋಭಿತಾ ಧುಲಿಪಾಲ ಜೊತೆ ಚೈತನ್ಯ ಅಕ್ಕಿನೇನಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.
ಅಲ್ಲದೆ, ಈ ವಿಚಾರಕ್ಕೆ ಇವರಿಬ್ಬರ ಇತ್ತೀಚಿನ ಚಿತ್ರ ಬೆಂಕಿಗೆ ತುಪ್ಪ ಸುರಿದಿದೆ. ಅಲ್ಲದೆ, ಈ ಕುರಿತ ಫೋಟೋಗಳು ಸಹ ವೈರಲ್ ಆಗಿವೆ.
ಆದ್ರೆ ಈ ಕುರಿತು ಶೋಭಿತಾ ಧುಲಿಪಾಲ, ನಾಗ ಚೈತನ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಕೆಲವರು ಸಿನಿಮಾ ಶೂಟಿಂಗ್‌ಗೆ ತೆರಳಿರಬಹುದು ಎಂದು ಹೇಳುತ್ತಿದ್ದಾರೆ.