ಹಾರ್ದಿಕ್ ಇಲ್ಲದೆ ಮಗನ ಹುಟ್ಟುಹಬ್ಬ ಆಚರಿಸಿದ ನತಾಶ..ಮಗನ ವಿಡಿಯೋ ಶೇರ್ ಮಾಡಿ ಪಾಂಡ್ಯ ಭಾವುಕ
ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಮಾಡೆಲ್ ನತಾಶಾ ಸ್ಟಾಂಕೋವಿಕ್ ಇತ್ತೀಚೆಗಷ್ಟೆ ವಿಚ್ಛೇದನವನ್ನು ಘೋಷಿಸಿದ್ದಾರೆ. ವಿಚ್ಛೇದನವನ್ನು ಘೋಷಿಸುವ ಮೊದಲು, ನತಾಶ ತನ್ನ 4 ವರ್ಷದ ಮಗ ಅಗಸ್ತ್ಯನೊಂದಿಗೆ ಸರ್ಬಿಯಾಕ್ಕೆ ಹಾರಿರುವುದು ಗೊತ್ತೇ ಇದೆ. ತಂದೆ ತಾಯಿಯ ವಿಚ್ಚೇದನದ ಬಳಿಕ ಅಗಸ್ತ್ಯ ಇತ್ತೀಚೆಗಷ್ಟೇ ತಮ್ಮ ಅಜ್ಜಿಯ ಮನೆಯಲ್ಲಿ ನಾಲ್ಕನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಮಗನ ಹುಟ್ಟುಹಬ್ಬವನ್ನು ಸಿಂಪಲ್ ಆಗಿ ಆಚರಿಸಿರುವ ನತಾಶ ಅಭಿಮಾನಿಗಳ ಕಣ್ಣಿಗೆ ಗುರಿಯಾಗಿದ್ದಾರೆ.
ನತಾಶಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರೂ ಬೇರ್ಪಟ್ಟಿದ್ದಾರೆ. ಇಬ್ಬರ ನಡುವಿನ ಪತಿ-ಪತ್ನಿ ಸಂಬಂಧ ಇದೀಗ ಅಂತ್ಯಗೊಂಡಿದೆ. ಇಬ್ಬರೂ ವಿಚ್ಛೇದನದ ಮೂಲಕ ಬೇರೆಯಾಗಿದ್ದರೂ, ಅವರು ತಮ್ಮ 4 ವರ್ಷದ ಮಗ ಅಗಸ್ತ್ಯನಿಗೆ ಸಹ-ಪೋಷಕರಾಗಿ ಮಗನನ್ನು ನೋಡಿಕೊಳ್ಳುತ್ತೇವೆ ಎಂದು ವಿಚ್ಚೇದನದ ಕುರಿತು ಹೇಳುವಾಗ ಅಧಿಕೃತವಾಗಿ ಘೋಷಿಸಿದ್ದರು. ಹಾರ್ದಿಕ್‌ನಿಂದ ವಿಚ್ಛೇದನ ಪಡೆದ ನಂತರ, ನತಾಶಾ ಸರ್ಬಿಯಾದಲ್ಲಿ ಮಗ ಅಗಸ್ತ್ಯನ ನಾಲ್ಕನೇ ಹುಟ್ಟುಹಬ್ಬವನ್ನು ಆಚರಿಸಿ, ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದು, ಟ್ರೋಲ್ ಪೇಜ್‌ಗಳಿಗೆ ತುತ್ತಾಗಿದ್ದಾರೆ.
ನತಾಶ ಈ ಪೋಸ್ಟ್ ಅನ್ನು ಹಂಚಿಕೊಂಡ ಕೂಡಲೇ, ಹಾರ್ದಿಕ್ ಸಹೋದರ ಮತ್ತು ಕ್ರಿಕೆಟಿಗ ಕೃನಾಲ್ ಪಾಂಡ್ಯ ಅವರು ಕಾಮೆಂಟ್ ವಿಭಾಗದಲ್ಲಿ ಬಿಳಿ ಹೃದಯದ ಎಮೋಜಿಯನ್ನು ಹಾಕಿ ಕಾಮೆಂಟ್ ಮಾಡಿದ್ದಾರೆ. ಆದಾಗ್ಯೂ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಚಿತ್ರಗಳನ್ನು ನೋಡಿ ಸಂತೋಷಪಡದೆ, ಹಾರ್ದಿಕ್ ಅವರ ಅನುಪಸ್ಥಿತಿಯನ್ನು ಪ್ರಶ್ನಿಸುವ ಮೂಲಕ ನತಾಶಾ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
'ತಂದೆ ಇದ್ದಿದ್ದರೆ, ಇನ್ನೂ ಸುಂದರವಾಗಿರುತ್ತಿತ್ತು!' ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬ ಬಳಕೆದಾರರು ನತಾಶಾ ಅವರನ್ನು ಗುರಿಯಾಗಿಟ್ಟುಕೊಂಡು 'ನೀವು ಈ ಆಚರಣೆಯನ್ನು ಹಾರ್ದಿಕ್‌ನೊಂದಿಗೆ ಆಚರಿಸಿ ನಂತರ ಹೊರಗೆ ಹೋಗಬಹುದಿತ್ತು, ಇದನ್ನು ನೋಡುವ ಹಾರ್ದಿಕ್ ಪಾಂಡ್ಯಾಗೆ ಇದೀಗ ಎಷ್ಟು ನೋವಾಗಿರಬಾರದು, ತಂದೆಯಿಂದ ಮಗನನ್ನು ಬೇರ್ಪಡಿಸಿ ತಪ್ಪು ಮಡಿದ್ದೀರಾ' ಎಂದು ಕಾಮೆಂಟ್ ಸೆಕ್ಷನ್‌ನಲ್ಲಿ ಕಾಮೆಂಟ್ ಮಾಡುವ ಮೂಲಕ ನತಾಶ ಅವರ ನಡೆಯನ್ನು ಟೀಕಿಸಿದ್ದಾರೆ.
ನತಾಶಾ ಅವರ ಈ ಚಿತ್ರವನ್ನು ಹಂಚಿಕೊಳ್ಳುವ ಮೊದಲು, ಹಾರ್ದಿಕ್ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ತಮ್ಮ ಮಗನಿಗೆ ವಿಶ್ ಮಾಡಿದ್ದರು. ಸುಂದರವಾದ ವೀಡಿಯೊವನ್ನು ಹಂಚಿಕೊಂಡಿರುವ ಹಾರ್ದಿಕ್ "ನಿನ್ನೊಬ್ಬನ ಕಾರಣ ನಾನು ಜೀವನದಲ್ಲಿ ಮುನ್ನುಗಲು ಪ್ರಯತ್ನಿಸುತ್ತೇನೆ, ನನ್ನ ಕ್ರೈಮ್ ಪಾರ್ಟ್ನರ್‌ಗೆ ಜನ್ಮ ದಿನದ ಹೃಪೂರ್ವಕ ಶುಭಾಷಯಗಳು" ಎಂದು ಬರೆಯುವ ಮೂಲಕ ಪೋಸ್ಟ್ ಹಂಚಿಕೊಂಡಿದ್ದಾರೆ