ಗ್ರಹಣದ ದಿನದಿಂದಲೇ ಬದಲಾಗುವುದು ಈ ರಾಶಿಯವರ ಜೀವನ ! ಎಲ್ಲಾ ಕೆಲಸಗಳಲ್ಲಿಯೂ ಕೈ ಹಿಡಿಯುವುದು ಅದೃಷ್ಟ! ನಿಮ್ಮ ಏಳಿಗೆ ತಡೆಯುವವರೇ ಇಲ್ಲ
ಮಾರ್ಚ್ 25 ರ ಭಾನುವಾರದಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಇದಾದ 15 ದಿನಗಳ ನಂತರ ಅಂದರೆ ಏಪ್ರಿಲ್ 8 ರಂದು, ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸುತ್ತದೆ.
ವರ್ಷದ ಮೊದಲ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಎರಡೂ ಮೇಷ ರಾಶಿಯ ಜನರಿಗೆ ಮಂಗಳಕರ ಫಲಿತಾಂಶಗಳನ್ನು ನೀಡಬಹುದು. ಮೇಷ ರಾಶಿಯವರ ವ್ಯವಹಾರದಲ್ಲಿ ಪ್ರಗತಿಯಾಗುವುದು. ಪ್ರತಿ ಹಂತದಲ್ಲೂ ಲಾಭವೇ.ಸೋಲು ನಷ್ಟ ಎನ್ನುವ ಮಾತೆ ಇರುವುದಿಲ್ಲ. ವೈವಾಹಿಕ ಜೀವನದಲ್ಲಿ ಸಂತೋಷ ತುಂಬಿರುವುದು.
ಮಿಥುನ ರಾಶಿಯವರ ಪಾಲಿಗೂ ಎರಡೂ ಗ್ರಹಣ ಶುಭ ಫಲವನ್ನೇ ಹೊತ್ತು ತರಲಿದೆ. ನಿಮಗೆ ಎಲ್ಲಿಂದಲಾದರೂ ಹಣ ಬರುವುದಿದ್ದರೆ ಈ ಸಮಯದಲ್ಲಿ ನಿಮ್ಮ ಕೈ ಸೇರುವುದು ಖಂಡಿತಾ. ಹಣಕಾಸಿನ ಸ್ಥಿತಿಯಲ್ಲಿ ಭಾರೀ ಸುಧಾರಣೆಯಾಗುವುದು. ಉದ್ಯೋಗ ಅರಸುತ್ತಿರುವವರಿಗೆ ಈ ಬಾರಿ ಉದ್ಯೋಗ ಸಿಗುವುದು ಪಕ್ಕಾ.
ಸಿಂಹ ರಾಶಿಯವರು ಬಹಳ ಸಮಯದಿಂದ ಅನುಭವಿಸುತ್ತಿದ್ದ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಸಿಗುವುದು. ನಿಮ್ಮ ಜೀವನದ ಒಳ್ಳೆಯ ದಿನಗಳು ಆರಂಭವಾಗುವುದು. ವಿದೇಶ ಪ್ರವಾಸಕ್ಕೆ ತೆರಳುವ ಸಾಧ್ಯತೆಗಳಿವೆ.
15 ದಿನಗಳ ಅಂತರದಲ್ಲಿ ಸಂಭವಿಸುವ ಚಂದ್ರಗ್ರಹಣ ಮತ್ತು ಸೂರ್ಯಗ್ರಹಣವು ಧನು ರಾಶಿಯ ಜನರ ಅದೃಷ್ಟವನ್ನು ಬೆಳಗಿಸುತ್ತದೆ. ಈ ರಾಶಿಯವರು ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸುವರು. ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ಸಮಯ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)