Solar Eclipse 2022: ಭಾರತದಲ್ಲಿ ಗೋಚರಿಸಿದ ಸೂರ್ಯಗ್ರಹಣದ ಸುಂದರ ಫೋಟೋಗಳು ಇಲ್ಲಿವೆ ನೋಡಿ
ಭಾಗಶಃ ಸೂರ್ಯಗ್ರಹಣವು ದೆಹಲಿಯಲ್ಲಿ ಸಂಜೆ 4:29ಕ್ಕೆ ಸಂಭವಿಸಿತು, ಸಂಜೆ 6.26ಕ್ಕೆ ಮುಕ್ತಾಯವಾಯಿತು. ಈ ಅಪರೂಪದ ಖಗೋಳ ವಿದ್ಯಮಾನವನ್ನು ಲಕ್ಷಾಂತರ ಜನರು ಕಣ್ತುಂಬಿಕೊಂಡರು.
ಗ್ರಹಣವು ಸಾಯಂಕಾಲ ನಡೆಯುತ್ತಿರುವುದರಿಂದ, ಸೂರ್ಯಾಸ್ತದ ನಂತರ ನಡೆಯಲಿರುವ ಖಗೋಳ ವಿದ್ಯಮಾನದ ಅಂತ್ಯವು ಗೋಚರಿಸುವುದಿಲ್ಲ.
ಅಲ್ಯೂಮಿನೈಸ್ಡ್ ಮೈಲಾರ್, ಕಪ್ಪು ಪಾಲಿಮರ್, ವೆಲ್ಡಿಂಗ್ ಗ್ಲಾಸ್‌ನಂತಹ ಫಿಲ್ಟರ್ ಮತ್ತು ದೂರದರ್ಶಕದ ಮೂಲಕ ಸೂರ್ಯಗ್ರಹಣವನ್ನು ಕಣ್ತುಂಬಿಕೊಳ್ಳುವುದು ಅತ್ಯಂತ ಸುರಕ್ಷಿತ ವಿಧಾನವಾದಿದೆ. ದೇಶದ ವಿವಿಧ ಭಾಗಗಳಲ್ಲಿ ಅಪರೂಪದ ಸೂರ್ಯಗ್ರಹಣವನ್ನು ಕಣ್ತುಂಬಿಕೊಂಡು ಲಕ್ಷಾಂತರ ಜನರು ಖುಷಿಪಟ್ಟಿದ್ದಾರೆ.
ಗ್ರಹಣದ ವೇಳೆ ಭಾರತದಲ್ಲಿ ಜನರು ಸಾಮಾನ್ಯವಾಗಿ ಮನೆಯೊಳಗೆ ಇರಲು ಬಯಸುತ್ತಾರೆ. ಈ ವೇಳೆ ಯಾವುದೇ ರೀತಿಯ ಆಹಾರ ಸೇವಿಸುವುದಿಲ್ಲ. ಗ್ರಹಣ ಮುಗಿದ ನಂತರ ಸ್ನಾನ ಮಾಡಿ ಹೊಸ ಬಟ್ಟೆ ತೊಡಬೇಕು ಎಂದು ಹಲವರು ನಂಬುತ್ತಾರೆ. ಸೂರ್ಯ ದೇವರಿಗೆ ಸಮರ್ಪಿತವಾದ ಮಂತ್ರಗಳನ್ನು ಪಠಿಸುವುದು ದೇಶದ ಅನೇಕ ಮನೆಗಳಲ್ಲಿ ಅನುಸರಿಸುವ ಮತ್ತೊಂದು ಅಭ್ಯಾಸವಾಗಿದೆ.