ಈ 3 ರಾಶಿಗೆ ಅಷ್ಟೈಶರ್ಯದ ಮೂಟೆಯನ್ನೇ ಹೊತ್ತು ತರಲಿದೆ ಪಿತೃ ಪಕ್ಷದ ಸೂರ್ಯಗ್ರಹಣ: ಇವರು ಕೋಟ್ಯಾಧಿಪತಿಯಾಗಲು ಇನ್ನು ಹೆಚ್ಚು ಸಮಯ ಬೇಕಾಗಿಲ್ಲ
ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಣಗಳು ಕಾಲಕಾಲಕ್ಕೆ ಸಂಭವಿಸುತ್ತವೆ. ಇದು ಮಾನವ ಜೀವನ, ದೇಶ ಮತ್ತು ಪ್ರಪಂಚದ ಮೇಲೆ ಪರಿಣಾಮ ಬೀರುತ್ತದೆ. ಈ ವರ್ಷ ಪಿತೃ ಪಕ್ಷದಲ್ಲಿ 2 ಗ್ರಹಣಗಳು ಸಂಭವಿಸಲಿವೆ. ಅದರಲ್ಲಿ ಮೊದಲ ಚಂದ್ರಗ್ರಹಣ ಸೆಪ್ಟೆಂಬರ್ 17 ರಂದು ಸಂಭವಿಸಿದರೆ, ಪಿತೃ ಪಕ್ಷದ ಕೊನೆಯ ದಿನವಾದ ಅಕ್ಟೋಬರ್ 2 ರಂದು ಸೂರ್ಯಗ್ರಹಣ ಸಂಭವಿಸಲಿದೆ.
ಅಂದರೆ ಪಿತೃ ಪಕ್ಷದಲ್ಲಿ ಎರಡು ಗ್ರಹಣಗಳು ಸಂಭವಿಸಲಿವೆ. ಈ ಕಾರಣದಿಂದಾಗಿ ಕೆಲವು ರಾಶಿಗಳಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಬಹುದು. ಅಲ್ಲದೆ, ಈ ಸಮಯದಲ್ಲಿ ಹಠಾತ್ ಆರ್ಥಿಕ ಲಾಭ ಮತ್ತು ಪ್ರಗತಿಯ ಸಾಧ್ಯತೆಗಳಿವೆ. ಅಂತಹ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ.
ವೃಷಭ ರಾಶಿ: ಪಿತೃ ಪಕ್ಷದಲ್ಲಿ ಸಂಭವಿಸುತ್ತಿರುವ ಎರಡೂ ಗ್ರಹಣಗಳು ವೃಷಭ ರಾಶಿಯ ಜನರಿಗೆ ಲಾಭದಾಯಕವಾಗಲಿದೆ. ಈ ಅವಧಿಯಲ್ಲಿ ಅನಿರೀಕ್ಷಿತ ಹಣದ ಲಾಭವನ್ನು ಪಡೆಯಬಹುದು. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಗೌರವ ಮತ್ತು ಪ್ರತಿಷ್ಠೆ ಪ್ರಾಪ್ತಿಯಾಗುವುದಲ್ಲದೆ, ದೊಡ್ಡ ವ್ಯಾಪಾರ ವ್ಯವಹಾರಗಳನ್ನು ಮಾಡಬಹುದು. ಉದ್ಯೋಗಸ್ಥರಿಗೆ ಬಡ್ತಿ ದೊರೆಯಬಹುದು.
ತುಲಾ ರಾಶಿ: ಈ ಎರಡೂ ಗ್ರಹಣಗಳು ಕೆಲಸ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯಲು ಸಹಾಯ ಮಾಡಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಸಿಹಿ ಸುದ್ದಿಯನ್ನು ಪಡೆಯುವಿರಿ. ಅಷ್ಟೇ ಅಲ್ಲದೆ, ಚಾಲ್ತಿಯಲ್ಲಿರುವ ಅನೇಕ ಯೋಜನೆಗಳು ಪೂರ್ಣಗೊಳ್ಳುತ್ತವೆ. ಆರ್ಥಿಕ ಭದ್ರತೆ ಇರುತ್ತದೆ. ವಿವಾಹಿತರ ವೈವಾಹಿಕ ಜೀವನವು ಈ ಅವಧಿಯಲ್ಲಿ ಅದ್ಭುತವಾಗಿರುತ್ತದೆ.
ಧನು ರಾಶಿ: ಎರಡೂ ಗ್ರಹಣಗಳು ನಿಮಗೆ ಮಂಗಳಕರವಾಗಲಿದೆ. ಈ ಅವಧಿಯಲ್ಲಿ, ನಿಮ್ಮ ಆದಾಯವು ಮಹತ್ತರವಾಗಿ ಹೆಚ್ಚಾಗಬಹುದು. ವೃತ್ತಿಜೀವನದಲ್ಲಿ ಶುಭವಾಗಲಿದೆ. ಅಷ್ಟೇ ಅಲ್ಲದೆ, ಅದೃಷ್ಟವು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಈ ಅವಧಿಯಲ್ಲಿ ಮನೆ, ವಾಹನ ಕೂಡ ಖರೀದಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.