ಬಾನಂಗಳದ ಅದ್ಬುತ : ಬೆಂಗಳೂರಿನಲ್ಲಿ ಆಕಾಶದಲ್ಲಿ ಕಂಡು ಬಂತು ಅಮೋಘ ದೃಶ್ಯ
ಮೋಡಗಳಿಂದಾಗಿ ಈ ಸೌರ ಉಂಗುರವು ರೂಪುಗೊಳ್ಳುತ್ತದೆ. ಮೋಡಗಳಲ್ಲಿ ಸಣ್ಣ ಸಣ್ಣ ಮಂಜುಗಡ್ಡೆಯ ಕಣಗಳಿರುತ್ತವೆ. ಸೂರ್ಯನ ಕಿರಣಗಳು ಈ ಹಿಮದ ಕಣಗಳ ಮೇಲೆ ಬಿದ್ದಾಗ, ಕಿರಣಗಳು ಚದುರಿಹೋಗಲು ಪ್ರಾರಂಭಿಸುತ್ತವೆ. ಕಿರಣಗಳು ಒಂದು ಕೋನದಲ್ಲಿ ವಿಭಜನೆಯಾದಾಗ, ಸೂರ್ಯನ ಸುತ್ತ ಈ ರೀತಿಯ ವೃತ್ತವು ರೂಪುಗೊಳ್ಳುತ್ತದೆ.
ಇಂದು ಬೆಂಗಳೂರಿನಲ್ಲಿ ಹವಾಮಾನ ತಿಳಿಯಾಗಿದೆ. ಬಿಸಿಲು ಮೂಡಿದ್ದು, ಆಕಾಶದಲ್ಲಿ ಬಿಳಿ ಮೋಡಗಳು ಕಾಣಿಸುತ್ತಿವೆ. ಹೀಗಿರುವಾಗ ಸೂರ್ಯನ ಸುತ್ತ ಇಂಥಹ ವೃತ್ತ ಅಥವಾ ಉಂಗುರ ಕಾಣಿಸಿಕೊಳ್ಳುತ್ತದೆ.
ಆಕಾಶದಲ್ಲಿ ಮೂಡಿ ಬಂದ ಈ ಅಮೋಘ ದೃಶ್ಯ ವೀಕ್ಷಿಸಿದ ಜನರಲ್ಲೂ ಸಂತೋಷ ಮನೆ ಮಾಡಿತ್ತು. ಈ ದೃಶ್ಯವನ್ನು ಕ್ಯಾಮರಾದಲ್ಲೂ ಸೆರೆ ಹಿಡಿಯುತ್ತಿರುವ ನೋಟ ಕಂಡು ಬಂತು.
ಇದರಲ್ಲಿ ಸೂರ್ಯನ ಸುತ್ತ ಮೂಡಿರುವ ವೃತ್ತ ಕೂಡಾ ಕಾಮನಬಿಲ್ಲಿನಂತೆ ಕಾಣಿಸುತ್ತಿದೆ. ಇದರಲ್ಲಿ ಕಾಮನಬಿಲ್ಲಿನ ಏಳೂ ಬಣ್ಣಗಳನ್ನು ಕಾಣಬಹುದು.