Snake Attract Plants: ಮನೆಯ ಸುತ್ತ ಈ ಗಿಡಗಳನ್ನು ತಪ್ಪಿಯೂ ಬೆಳೆಸಬೇಡಿ… ಹಾವುಗಳು ಬರುತ್ತೆ!
ಮನೆಯಲ್ಲಿ ನೆಡುವ ಕೆಲವೊಂದು ಗಿಡಗಳು ಅಯಸ್ಕಾಂತದಂತೆ ಹಾವುಗಳನ್ನು ಆಕರ್ಷಿಸುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಇಂದು ಈ ಲೇಖನದಲ್ಲಿ ಹಾವುಗಳನ್ನು ಆಕರ್ಷಿಸುವ 6 ಸಸ್ಯಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮಲ್ಲಿಗೆಯ ಸುಗಂಧದ ಕಾರಣದಿಂದಲೇ ಅದರ ಗಿಡವನ್ನು ಮನೆಯಲ್ಲಿ ನೆಡಲು ಅನೇಕರು ಇಷ್ಟಪಡುತ್ತಾರೆ. ಆದರೆ ಜಾಸ್ಮಿನ್ ವೈನ್ಸ್ ಕುಟುಂಬದ ಸಸ್ಯಗಳಲ್ಲಿ ಹಾವುಗಳು ವಾಸಿಸುವ ಸಾಧ್ಯತೆಗಳು ಹೆಚ್ಚು. ಇದರ ಹಿಂದಿನ ಕಾರಣವೆಂದರೆ ಈ ಸಸ್ಯದ ಹೂವುಗಳ ಬಲವಾದ ವಾಸನೆ ಮತ್ತು ದಟ್ಟವಾಗಿ ಬೆಳೆಯುವುದು.
ಸೈಪ್ರೆಸ್ ಸಸ್ಯ: ಮನೆಯ ಸುತ್ತ ಮುಕ್ತ ಸ್ಥಳಾವಕಾಶವಿದ್ದರೆ, ಸೈಪ್ರೆಸ್ ಮರವನ್ನು ನೆಡಬಹುದು. ಇನ್ನು ಈ ಸಸ್ಯಗಳು ದಟ್ಟವಾಗಿದ್ದು, ಅಲಂಕಾರವಾಗಿ ನೋಡಲು ಆಕರ್ಷಣೀಯವಾಗುರುತ್ತದೆ. ಆದರೆ ಇವುಗಳ ಸಾಂದ್ರತೆ ಕಾರಣದಿಂದ ಇದರ ಎಡೆಯಲ್ಲಿ ಹಾವುಗಳು ಸೇರಿಕೊಳ್ಳುತ್ತವೆ.
ಸಿಟ್ರಸ್ ಸಸ್ಯ: ಲೆಮೆನ್ ಗ್ರಾಸ್ ಅಥವಾ ಯಾವುದೇ ರೀತಿಯ ಸಿಟ್ರಸ್ ಸಸ್ಯವಾಗಿರಲಿ, ಈ ಸಸ್ಯಗಳಲ್ಲಿ ಇಲಿಗಳು ಮತ್ತು ಸಣ್ಣ ಪಕ್ಷಿಗಳು ವಾಸಿಸುತ್ತವೆ. ಇವುಗಳನ್ನು ತಿನ್ನಲೆಂದೇ ಹಾವುಗಳು ಈ ಗಿಡಗಳ ಸುತ್ತ ಸುಳಿದಾಡುತ್ತಿರುತ್ತವೆ. ಹೀಗಾಗಿ ಮನೆಯಲ್ಲಿ ಸಿಟ್ರಸ್ ಸಸ್ಯಗಳನ್ನು ನೆಡಬೇಡಿ.
ಕ್ಲೋವರ್ ಸಸ್ಯ: ಹೆಚ್ಚಿನ ಜನರು ಮನೆಯ ಅಲಂಕಾರಕ್ಕಾಗಿ ಕ್ಲೋವರ್ ಸಸ್ಯವನ್ನು ಬಳಸುತ್ತಾರೆ. ಈ ಸಸ್ಯಗಳು ನೆಟ್ಟ ಪ್ರದೇಶವನ್ನು ಸಂಪೂರ್ಣವಾಗಿ ಆವರಿಸುತ್ತವೆ. ದಟ್ಟವಾಗಿ ಬೆಳೆಯುವ ಕಾರಣ ಹಾವುಗಳು ಸುಲಭವಾಗಿ ಅದರ ಅಡಿಯಲ್ಲಿ ಅಡಗಿಕೊಳ್ಳುತ್ತವೆ.
ದಾಳಿಂಬೆ ಗಿಡ: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಮನೆಯ ಅಂಗಳ ಮತ್ತು ಬಾಲ್ಕನಿಯಲ್ಲಿ ದಾಳಿಂಬೆ ಗಿಡಗಳನ್ನು ನೆಡಲು ಶುರು ಮಾಡಿದ್ದಾರೆ. ಆದರೆ ದಾಳಿಂಬೆ ಮರಗಳ ಬಳಿ ಹಾವುಗಳು ಬೀಡು ಬಿಡುತ್ತವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು.
ಲವಂಗದ ಗಿಡ: ಈ ಸಸ್ಯಗಳಲ್ಲಿ ಹಾವುಗಳನ್ನು ಆಕರ್ಷಿಸುವ ಗುಣವಿದೆ. ಈ ಗಿಡದಿಂದ ಬರುತ್ತಿರುವ ವಾಸನೆಯೇ ಇದಕ್ಕೆ ಕಾರಣ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.