ಚಿರಂಜೀವಿ ಅಳಿಯನಾಗಬೇಕಿತ್ತಾ ಅಲ್ಲು ಅರ್ಜುನ್... ಈ ಕಾರಣಕ್ಕೆ ಆಸೆ ಈಡೇರಲಿಲ್ಲವೇ!?
ಮೆಗಾಸ್ಟಾರ್ ಚಿರಂಜೀವಿ ತಮ್ಮ ಪುತ್ರಿ ಶ್ರೀಜಾಳನ್ನು ಅಲ್ಲು ಅರ್ಜುನ್‌ಗೆ ಮದುವೆ ಮಾಡಿಕೊಡಬೇಕು ಅಂತ ಬಯಸಿದ್ದರು ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಮೆಗಾಸ್ಟಾರ್ ಚಿರಂಜೀವಿ ಮಗಳು ಎರಡನೇ ಪತಿಗೂ ವಿಚ್ಛೇದನ ನೀಡಿದ್ದಾರೆ ಎಂಬ ಊಹಾಪೋಹಗಳ ನಡುವೆ ಇಂಥದ್ದೊಂದು ಸಂಗತಿ ವೈರಲ್ ಆಗಿದೆ.
ಚಿರಂಜೀವಿ ಅವರಿಗೆ ತಮ್ಮ ಮಗಳು ಮದುವೆಯಾದ ಎರಡೂ ಸಂಬಂಧಗಳೂ ಇಷ್ಟವಿರಲಿಲ್ಲ ಎಂದು ಹೇಳಲಾಗಿದೆ.
ಚಿರಂಜೀವಿ ಅವರಿಗೆ ತಮ್ಮ ಮಗಳು ಶ್ರೀಜಾಳನ್ನು ಅಲ್ಲು ಅರ್ಜುನ್‌ಗೆ ಕೊಟ್ಟು ಮದುವೆ ಮಾಡಬೇಕೆಂಬ ಆಸೆ ಇತ್ತು ಅನ್ನೋ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರದಾಡುತ್ತಿದೆ.
ಕಾರಣಾಂತರಗಳಿಂದ ಚಿರಂಜೀವಿ ಅವರ ಆಸೆ ಈಡೇರಲಿಲ್ಲವಂತೆ ಎನ್ನಲಾಗುತ್ತದೆ. ಸ್ನೇಹಾ ರೆಡ್ಡಿ ಜೊತೆ ಅಲ್ಲು ಅರ್ಜುನ್ ಮದುವೆಯಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ.