ಬಿಗ್ ಬಾಸ್ ಕನ್ನಡದಲ್ಲಿ ಫೈನಲ್ ಪ್ರವೇಶಿಸಿದ ಮೊಟ್ಟಮೊದಲ ಕಂಟೆಸ್ಟೆಂಟ್..!? ಬಲಿಷ್ಠರ ಎದುರೇ ಯುಕ್ತಿ ಪ್ರದರ್ಶಿಸಿ ಗೆದ್ದ ಈ ʼಚತುರʼ
ಕನ್ನಡ ಬಿಗ್ ಬಾಸ್ ಸೀಸನ್ 11 ಮುಕ್ತಾಯಗೊಳ್ಳಲು ಇನ್ನೇನು ಕೆಲವೇ ವಾರಗಳು ಬಾಕಿ ಉಳಿದಿವೆ. 10 ಸ್ಪರ್ಧಿಗಳಷ್ಟೇ ಉಳಿದುಕೊಂಡಿದ್ದು ಒಂದಷ್ಟು ಮಂದಿ ಶಕ್ತಿ ಬಲದಲ್ಲಿ ಆಡುತ್ತಿದ್ದರೆ, ಮತ್ತೊಂದಷ್ಟು ಮಂದಿ ಯುಕ್ತಿಯ ಬಲದಿಂದ ಆಡುತ್ತಿದ್ದಾರೆ.
ಆದರೆ ಈ ಎಲ್ಲದರ ಮಧ್ಯೆ ಓರ್ವ ಸ್ಪರ್ಧಿಗೆ ಮಾತ್ರ ಸಿಕ್ಕಾಪಟ್ಟೆ ಫ್ಯಾನ್ ಬೇಸ್ ಇದ್ದು, ಈತನೇ ಈ ಬಾರಿಯ ಬಿಗ್ ಬಾಸ್ ವಿನ್ನರ್ ಎಂದು ಹೇಳಲಾಗುತ್ತಿದೆ. ಅದಕ್ಕೂ ಮುನ್ನ ಬಿಗ್ ಬಾಸ್ ಫಿನಾಲೆಗೆ ಎಂಟ್ರಿ ಕೊಡೋದು ಫಿಕ್ಸ್ ಎಂದು ಹೇಳಲಾಗುತ್ತಿದೆ.
ಈತ ಶಕ್ತಿಗಿಂತ ಯುಕ್ತಿ ಮೇಲು ಎಂಬ ಗಾದೆಗೆ ತಕ್ಕಂತೆ ಆಡುತ್ತಿರುವ ಚತುರ. ಅಂದಹಾಗೆ ಆತ ಬೇರಾರು ಅಲ್ಲ ಹನುಮಂತು. ಈ ಸ್ಪರ್ಧಿ ಸಖತ್ ಆಕ್ಟೀವ್ ಆಗಿದ್ದು ಎಷ್ಟೇ ಬಲಿಷ್ಠರ ಮುಂದೆಯೂ ತೊಡೆತಟ್ಟಿ ನಿಲ್ಲುವಷ್ಟು ಧೈರ್ಯವಂತ.
ಹನುಮಂತು ಅವರಿಗೆ ಮನೆ ಹೊರಗಡೆಯೂ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಮೊದಮೊದಲು ಕೊಂಚ ಗೊಂದಲಕ್ಕೀಡಾಗಿದ್ದ ಹನುಮಂತು ಆ ಬಳಿಕ ಧನರಾಜ್ ಅವರ ಸ್ನೇಹ ಮಾಡಿ ಬಿಗ್ ಬಾಸ್ ಮನೆಯಲ್ಲಿ ಆಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಸರ್ವೆಗಳನ್ನು ಮಾಡಲಾಗುತ್ತಿದ್ದು, ಅದರಲ್ಲಿ ಅತಿ ಹೆಚ್ಚು ಓಟ್ ಬೀಳುತ್ತಿರುವುದು ಹನುಮಂತು ಅವರಿಗೆ. ಈ ಎಲ್ಲಾ ಆಧಾರಗಳನ್ನಿಟ್ಟುಕೊಂಡು ನೋಡಿದರೆ, ಹನುಮಂತು ಫಿನಾಲೆಗೆ ಎಂಟ್ರಿ ಪಡೆಯುವುದು ಖಚಿತ ಎನಿಸುತ್ತದೆ.
ಇನ್ನೊಂದೆಡೆ ಹನುಮಂತು ಮಾತ್ರ ಫಿನಾಲೆಗೆ ಪ್ರವೇಶಿಸುವುದು ನೂರಕ್ಕೆ ನೂರು ಖಚಿತ ಎಂಬುದು ನೆಟ್ಟಿಗರ ಮಾತು. ಇದಕ್ಕೆ ಕಾರಣ ಅವರ ಆಟದ ವೈಖರಿ. ಒಂದಿಷ್ಟು ಗದ್ದಲ ಮಾಡದೆ ತಮ್ಮಷ್ಟಕ್ಕೇ ತಾವಿದ್ದುಕೊಂಡು, ಆಕ್ಟೀವ್ ಆಗಿರುವ ಹನುಮಂತು ಈ ಬಾರಿ ಟೈಟಲ್ ವಿನ್ನರ್ ಆಗ್ತಾರ ಎಂಬುದನ್ನು ಕಾದುನೋಡಬೇಕಿದೆ.