ಮದುವೆಯಾಗಿ ಎರಡು ತಿಂಗಳು ಕಳೆಯುತ್ತಿದ್ದಂತೆ ಮನೆ ತೊರೆದ ನಟಿ ಸೋನಾಕ್ಷಿ ಸಿನ್ಹಾ..!
ನಟಿ ಸೋನಾಕ್ಷಿ ಸಿನ್ಹಾ ಎರಡು ತಿಂಗಳ ಹಿಂದೆಯಷ್ಟೆ ತಮ್ಮ ಬಹುಕಾಲದ ಗೆಳೆಯ ಜಾಹೀರ್ ಇಕ್ಬಲ್ನೊಂದಿಗೆ ಸಪ್ತಪದಿ ತುಳಿದರು. ಮದುವೆ ನಂತರ ಈ ಜೋಡಿ ಮುಂಬೈನ ಬಾಂದ್ರಾದಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದರು.
ಇನ್ನೂ ಈ ಜೋಡಿ ಇದೀಗ ತಾವು ಖರೀದಿಸಿದ್ದ ಐಷಾರಾಮಿ ಮನೆಯನ್ನು ಮಾರಾಟಕ್ಕಿಟ್ಟಿದ್ದಾರೆ. ಮನೆ ಖರೀದಿಸಿದ ಕೇವಲ 57 ದಿನಗಳ ನಂತರ ಈ ಜೋಡಿ ತಾವು ಖರೀದಿಸಿದ್ದ ತಮ್ಮ ಮೊದಲ ಐಷಾರಾಮಿ ಮನೆಯನ್ನು ಮಾರಾಟಕ್ಕಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಅವರ ಮದುವೆ ನಿರ್ಧಾರಕ್ಕೆ ಸೋನಾಕ್ಷಿ ಸಿನ್ಹಾ ಅವರ ತಂದೆ ತಾಯಿಗೆ ಇಷ್ಟವಿಲ್ಲದಿದ್ದರು, ಮಗಳ ಸಂತೋಷಕ್ಕಾಗಿ ಮುನಿಸನ್ನು ಮರೆತು ಶತ್ರುಘ್ನ ಸಿನ್ಹಾ ಹಾಗೂ ತಾಯಿ ಪೂನಂ ಸಿನ್ಹಾ ಮದುವೆಗೆ ಹಾಜರ್ ಆಗಿದ್ದರು.
ಜೂನ್ 23 ರಂದು ಸೋನಾಕ್ಷಿ ಸಿನ್ಹಾ ಜಹೀರ್ ಇಕ್ಬಾಲ್ ಅವರೊಂದಿಗೆ ಮಾನೆಯಲ್ಲಿಯೇ ಸಿಂಪಲ್ ಆಗಿ ವಿವಾಹವಾಗಿದ್ದರೂ, ನಂತರ 24 ರಂದು ಅದ್ದೂರಿಯಾಗಿ ಅರತಾಕ್ಷತೆಯನ್ನು ನಿಗದಿ ಪಡೆಸಿದ್ದರು, ಈ ಸಮಾರಂಭಕ್ಕೆ ಬಾಲಿವುಡ್ ತಾರಾಗಣವೇ ಹಾಜರ್ ಅಗಿತ್ತು.
ಇನ್ನೂ, ಈ ಜೋಡಿ ಮದುವೆಯಾದ ಕೆಲವೇ ದಿನಗಳಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿತ್ತು. ಅಪಾರ್ಟ್ಮೆಂಟ್ 4 ಸಾವಿರ ಚದರ ಅಡಿ ವಿಸ್ತಾರದಲ್ಲಿರುವ ಈ ಅಪಾರ್ಟ್ಮೆಂಟ್ ಅನ್ನು ಇದೀಗ ಮಾರಾಟಕ್ಕಿಡಲಾಗಿದೆ. ಸೋನಾಕ್ಷಿಯ ಈ ಹಠಾತ್ ನಿರ್ಧಾರವು ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದೆ.
ಸೋನಾಕ್ಷಿ ಸಿನ್ಹಾ ಅವರ ಅಪಾರ್ಟ್ಮೆಂಟ್ ಇಷ್ಟು ಬೇಗ ಮಾರಾಟವಾಗುವ ಸುದ್ದಿ ಕೇಳಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.