ಅನ್ಯ ಧರ್ಮದ ಯುವಕನನ್ನು ಮದುವೆಯಾಗಿರುವುದು ಇದೇ ಕಾರಣಕ್ಕೆ !ಇಷ್ಟು ದಿನಗಳ ಬಳಿಕ ಸತ್ಯ ಬಾಯ್ಬಿಟ್ಟ ಸೋನಾಕ್ಷಿ ಸಿನ್ಹಾ
ಸೋನಾಕ್ಷಿ ಸಿನ್ಹಾ ವಿವಾಹ ಕಳೆದ ತುಂಗಳು 23 ನೆರವೇರಿದೆ. ಅನ್ಯಧರ್ಮದ ಜಹೀರ್ ಇಕ್ಬಾಲ್ ನನ್ನು ಸೋನಾಕ್ಷಿ ವರಿಸಿದ್ದಾರೆ.ಈ ಮದುವೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಅಪಸ್ವರ ಕೇಳಿ ಬಂದಿತ್ತು.
ಸೋನಾಕ್ಷಿ ಸಿನ್ಹಾ ಮದುವೆಯಾಗುತ್ತಿದ್ದ ಹಾಗೆ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು.ಆದರೆ ಇದ್ಯಾವುದರ ಬಗ್ಗೆಯೂ ಸೋನಾಕ್ಷಿ ತುಟಿ ಬಿಚ್ಚಿರಲಿಲ್ಲ.
ಇದೀಗ ಇದೇ ಮೊದಲ ಬಾರಿಗೆ ತನ್ನ ಮದುವೆ, ಮದುವೆ ನಿರ್ಧಾರದ ಬಗ್ಗೆ ನಟಿ ಮನ ಬಿಚ್ಚಿ ಮಾತನಾಡಿದ್ದಾರೆ. ಜಹೀರ್ ಇಕ್ಬಾಲ್ ನನ್ನು ಯಾಕೆ ಮದುವೆಯಾದೆ ಎನ್ನುವ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ಜಹೀರ್ ನನ್ನ ಜೀವನವನ್ನು ರೂಪಿಸಲು ಸಹಾಯ ಮಾಡಿದ್ದಾನೆ.ಇದಕ್ಕಾಗಿಯೇ ನಾನು ಅವನನ್ನು ಮದುವೆಯಾದೆ. ನನ್ನ ಜೀವನದ ಏರಿಳಿತಗಳಲ್ಲಿ ದೊಡ್ಡ ಬೆಂಬಲವಾಗಿ ನನ್ನ ಜೊತೆ ನಿಂತಿದ್ದ ವ್ಯಕ್ತಿ ಜಹೀರ್ ಎಂದು ನಟಿ ಹೇಳಿದ್ದಾರೆ.
ಇನ್ನು ಟ್ರೋಲಿಂಗ್ ಬಗ್ಗೆ ಸೋನಾಕ್ಷಿ ತಲೆ ಕೆಡಿಸಿಕೊಂಡಂತೆ ಕಾಣುವುದಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ಇವೆಲ್ಲಾ ಸಹಾ ಎಂದು ನಕ್ಕು ಸುಮ್ಮನಾಗಿದ್ದಾರೆ.