ತರುಣ್‌ ಸುಧೀರ್‌ ಕೈ ಹಿಡಿಯುತ್ತಿರುವ ಬೆನ್ನಲ್ಲೆ ಸೋನಾಲ್‌ ಸಖತ್‌ ಪಾರ್ಟಿ..ಇಲ್ಲಿವೆ ನೋಡಿ ಫೋಟೋಸ್‌

Wed, 07 Aug 2024-12:17 pm,

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ಸೋನಾಲ್‌ ಮದುವೆ ಡೇಟ್‌ ಫೀಕ್ಸ್‌ ಆಗಿದೆ. ಪ್ರೀತಿಗೆ ಜಾತಿ, ಬೇದ-ಭಾವವಿಲ್ಲ ಎನ್ನುವ ಮಾತನ್ನು ನಿಜ ಮಾಡಿ ಈ ಜೋಡಿ. ಶೀಘ್ರವೇ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಇದರ ಬೆನ್ನಲ್ಲೆ ನಟಿ ತಮ್ಮ ಆಪ್ತರೊದಿಗೆ ಬ್ಯಾಚುಲರ್ಸ್‌ ಪಾರ್ಟಿ ಆಚರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್‌ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ.

ಹಿಂದೂ ಹಾಗೂ ಕ್ರೈಸ್ತ ಧರ್ಮದಂತೆ ಸೋನಾಲ್‌ ಹಾಗೂ ತರುಣ್‌ ಸುದೀರ್‌ ಜೋಡಿ ಆಗಸ್ಟ್‌ 10  ಹಾಗೂ 11 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಮದುವೆಗೆ ಇನ್ನೇನು ಕೆಲವೇ ದಿನಗಲು ಬಾಕಿ ಇದ್ದು, ಜೋಡಿ ತಯಾರಿಗಳಲ್ಲಿ ಭಾಗಿಯಾಗಿದ್ದಾರೆ.  

ಸೋನಾಲ್‌ ತಂಗಿ ಅಕ್ಕನಿಗಾಗಿ ಸರ್ಪ್ರೈಸ್‌ ಪಾರ್ಟಿ ಆಯೋಜನೆ ಮಾಡಿದ್ದು, ತಂಗಿ ತಾಯಿ ಹಾಗೂ ಆಪ್ತ ಸ್ನೇಹಿತೆಯರೊಂದಿಗೆ ಸೋನಾಲ್‌ ಬ್ಯಾಚುಲರೇಟ್‌ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ.  

ಇತ್ತೀಚೆಗಷ್ಟೆ ಈ ಜೋಡಿ ಸುದ್ದಿಗೋಷ್ಟಿ ಮಾಡಿ ತಮ್ಮ ಪ್ರೀತಿಯ ಪಯನ ಹಾಗೂ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಇರುವ ಅಭಿಪ್ರಾಯದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದರು. ತಮ್ಮ ಬೇಟಿಯಾದ ಕಹಾನಿಯನ್ನು ಎಲ್ಲರ ಮುಂದೆ ಬಿಚ್ಚಿದ್ದರು.  

ಇನ್ನೂ ಸೋನಾಲ್‌ ಹಾಗೂ ತರುಣ್‌ ಸುಧೀರ್‌ ಸಿನಿಮಾರಂಗದ ತಾರೆಗಳಿಗೆ, ತಮ್ಮ ಆಪ್ತ ಸ್ನೇಹಿತರಿಗೆ ಅಂತಾ ಎಲ್ಲರಿಗೂ ತಮ್ಮ ಮದುವೆಯ ಆಮಂತ್ರಣವನ್ನು ತಲುಪಿಸಿದ್ದಾರೆ. ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೂ ಮದುವೆಯ ಆಮಂತ್ರಣ ತಲುಪಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link