Sonu Gowda: ಜೈಲಿನಿಂದ ಹೊರ ಬಂದ್ಮೇಲೆ ತಾಯಿಯ ಸೀರೆಯನ್ನು ಉಟ್ಟಿಕೊಂಡು ಯುಗಾದಿ ಹಬ್ಬ ಸಂಭ್ರಮಿಸಿದ ರೀಲ್ಸ್ ರಾಣಿ ಸೋನು!

Wed, 10 Apr 2024-12:11 pm,

ರೀಲ್ಸ್ ರಾಣಿ ಎಂದೇ ಖ್ಯಾತಿ ಪಡೆದಿರುವ ನಟಿ ಸೋನು ಗೌಡ ಜೈಲಿನಿಂದ ಹೊರಬಂದ ಮೇಲೆ ತುಂಬಾನೇ ಸಂತೋಷವಾಗಿ ಸೀರೆಯನ್ನು ಉಟ್ಟಿಕೊಂಡು ಯುಗಾದಿ ಹಬ್ಬವನ್ನು ಆಚರಿಸದ್ದಾರೆ. 

ನಟಿ ಸೋನು ಶ್ರೀನಿವಾಸ್ ಗೌಡ ಪಿಂಕ್‌ ಆರೆಂಜ್‌ ಮಿಶ್ರಿತ  ಸೀರೆಯನ್ನು ಹಾಕಿಕೊಂಡು ಅದಕ್ಕೆ ಗುಲಾಬಿ ಬ್ಲೌಸ್‌ ಧರಿಸಿದ್ದರು. ಹಾಗೆಯೇ ಹೇರ್ ಫ್ರೀಯಾಗಿ ಬಿಟ್ಟುಕೊಂಡು ನೆಕ್ಲೆಸ್ ಧರಿಸಿ ಮತ್ತು ಝುಮುಕಿ  ಕೂಡ ಹಾಕಿಕೊಂಡಿದ್ದರು. ಹಣೆಗೆ ಸಿಂಪಲ್‌ ಆಗಿ ಸಣ್ಣ ಬೊಟ್ಟು ಇಟ್ಟುಕೊಂಡಿದ್ದರು.

ನಟಿ ಸೋನು ಗೌಡ ಯುಗಾದಿ ಹಬ್ಬದಂದು ಸೀರೆಯಲ್ಲಿ ಪೋಟೋಶೂಟ್‌ ಮಾಡಿಸಿ ಅದನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಕ್ಯಾಪ್ಶನ್‌ನಲ್ಲಿ ಯುಗಾದಿ ಹಬ್ಬದ ಶುಭಾಷಯವನ್ನು ತಿಳಿಸಿದ್ದಾರೆ. ಹಾಗೆಯೇ ಈಕೆ ಉಟ್ಟ ಸೀರೆ ತನ್ನ ಅಮ್ಮನದು ಎಂದು ತಿಳಿಸಿದ್ದಾರೆ.

ನಟಿ ಸೂನು ಗೌಡ ಫೋಟೋಸ್‌ ವೈರಲ್‌ ಆಗಿದ್ದು, ಈ ಪೋಸ್ಟ್‌ಗೆ ಇಪ್ಪತ್ತೊಂಬತ್ತು ಸಾವಿರಕ್ಕೂ ಹೆಚ್ಚು ಲೈಕ್ಸ್‌ ಬಂದಿದೆ. ಕಾಮೆಂಟ್‌ ಬಾಕ್ಸ್‌ನಲ್ಲಿ ಕೆಲವರು ರೆಡ್ ಹಾರ್ಟ್ ಜಾಗೂ ಫೈರ್ ಎಮೋಜಿಗಳನ್ನು ನೀಡಿದ್ದಾರೆ.

ನಟಿ ಸೋನು ಗೌಡಗೆ ನೆಟ್ಟಿರು ಕಮೆಂಟ್‌ ವಿಭಾಗದಲ್ಲಿ ʻಹ್ಯಾಪಿ ಯುಗಾದಿ ಹಬ್ಬದ ಶುಭಾಶಯಗಳು ಸೋನು … ಬೇವು ಬೆಲ್ಲ ತಿಂದು ಸಿಹಿ ಯಾಗಿ ಇರೋಣʼ ಎಂದು ಬರೆದಿದ್ದಾರೆ. ಮತ್ತೊಬ್ಬರು ʻಸೋನು ಗೌಡ ಉಟ್ಟಿದ್ದ ಸೀರೆ ಇಷ್ಟವಾಗಿದೆ. ನಿಮ್ಮ ಸೀರೆ ಲುಕ್ ಸೂಪರ್ ಆಗಿದೆ ʼ ಎಂದು ಹೊಗಳಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಇತ್ತೀಚೆಗೆ ಹೆಣ್ಣು ಮಗುವನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸಬೇಕಾಯ್ತು. 11 ದಿನಗಳ ನಂತರ ಈಕೆ ಸೆರೆಮನೆ ವಾಸ ಮುಕ್ತಾಯವಾಗಿ ತಮ್ಮ ಮನೆಗೆ ವಾಪಸ್ಸು ಬಂದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link