ಮದುವೆಯಾಗಿ ಮಗಳಿದ್ದರೂ ಸಹ ಕನ್ನಡದ ಖ್ಯಾತ ನಟಿ ಜೊತೆ ಸೌರವ್ ಗಂಗೂಲಿ ಡೇಟಿಂಗ್! ಸಂದರ್ಶನದಲ್ಲಿ ರಿವೀಲ್ ಆಯ್ತು ‘ದಾದ’ ಅಪೇರ್!!
ಇದೀಗ ಅಂತಹದ್ದೇ ಒಂದು ಸಂಬಂಧದ ಬಗ್ಗೆ ಮಾತನಾಡಲಿದ್ದೇವೆ. ಕನ್ನಡ ಸೇರಿದಂತೆ ಕೆಲ ಭಾಷೆಗಳಲ್ಲಿ ಬಣ್ಣ ಹಚ್ಚಿರುವ ಪ್ರಖ್ಯಾತ ನಟಿ ನಗ್ಮಾ ಜೊತೆ, ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ ಡೇಟಿಂಗ್ ನಡೆಸುತ್ತಿದ್ದರಂತೆ. ಈ ಬಗ್ಗೆ ನಗ್ಮಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.
ಹಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಸೌರವ್ ಗಂಗೂಲಿ ಜೊತೆಗಿನ ಸಂಬಂಧ ಮತ್ತು ಬ್ರೇಕಪ್ ಬಗ್ಗೆ ನಗ್ಮಾ ಮಾತನಾಡಿದ್ದರು. ತನ್ನ ಮತ್ತು ಸೌರವ್ ಗಂಗೂಲಿ ನಡುವಿನ ಸಂಬಂಧ ಏಕೆ ಮುರಿದುಬಿತ್ತು ಎಂಬುದನ್ನು ಸಹ ನಗ್ಮಾ ಹೇಳಿದ್ದಾರೆ.
ನಗ್ಮಾ ನಿಜ ಹೆಸರು ನಂದಿತಾ ಅರವಿಂದ್ ಮೊರಾರ್ಜಿ. ಅಮ್ಮನ ಒತ್ತಾಯದ ಮೇರೆಗೆ ನಟನೆಯ ಜಗತ್ತಿಗೆ ಬಂದವರು. 1990 ರಲ್ಲಿ ಸಲ್ಮಾನ್ ಖಾನ್ ಅಭಿನಯದ 'ಬಾಘಿ: ಎ ರೆಬೆಲ್ ಫಾರ್ ಲವ್' ಚಿತ್ರದ ಮೂಲಕ ನಗ್ಮಾ ಬಾಲಿವುಡ್ ಪ್ರವೇಶಿಸಿದರು. ಈ ಚಿತ್ರವು ಆ ವರ್ಷದ ಏಳನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಯಿತು. ಮೊದಲ ಹಿಟ್ ನಂತರ, ನಗ್ಮಾ ಬಗ್ಗೆ ಎಲ್ಲೆಡೆ ಜನಪ್ರಿಯರಾದರು.
ಅನೇಕ ಚಲನಚಿತ್ರ ಆಫರ್‌ಗಳು ಬರಲು ಪ್ರಾರಂಭಿಸಿದವು. ಆದರೆ 1999 ರ ಹೊತ್ತಿಗೆ, ನಗ್ಮಾ ತನ್ನ ವೈಯಕ್ತಿಕ ಜೀವನದಿಂದಾಗಿ ಚರ್ಚೆಯ ವಿಷಯವಾದರು. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಜೊತೆ ನಗ್ಮಾ ಹೆಸರು ತಳುಕು ಹಾಕಲು ಪ್ರಾರಂಭವಾಯಿತು.
1999 ಕ್ರಿಕೆಟ್ ವಿಶ್ವಕಪ್ ಸಂದರ್ಭದಲ್ಲಿ ಇಬ್ಬರೂ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ನಗ್ಮಾ ಮತ್ತು ಸೌರವ್ ಗಂಗೂಲಿ ನಡುವೆ ಸಂಬಂಧ ಇದೆ ಎಂಬ ವದಂತಿ ಎಲ್ಲೆಡೆ ಹಬ್ಬಿತ್ತು. ಇದರ ನಂತರ ಅನೇಕ ಸಂದರ್ಭಗಳಲ್ಲೂ ಇಬ್ಬರೂ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಂಡರು. ಆದರೆ ಅದಾಗಲೇ ಗಂಗೂಲಿಗೆ ವಿವಾಹವಾಗಿತ್ತು.
ವರದಿಗಳ ಪ್ರಕಾರ, ಒಮ್ಮೆ ನಗ್ಮಾ ಮತ್ತು ಸೌರವ್ ಗಂಗೂಲಿ ದೇವಸ್ಥಾನದಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗ, ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ನಗ್ಮಾ ಮತ್ತು ಸೌರವ್ ಗಂಗೂಲಿ ನಡುವೆ ಏನೋ ನಡೆಯುತ್ತಿದೆ ಎಂಬ ವದಂತಿಗಳು ಏಳಲಾರಂಭಿಸಿದವು. ಇವರಿಬ್ಬರ ಸಂಬಂಧದ ಸುದ್ದಿ ಸೌರವ್ ಗಂಗೂಲಿ ಪತ್ನಿ ಡೋನಾ ಅವರ ಕಿವಿಗೂ ಬಿದ್ದಿತ್ತು.
ವರದಿಗಳ ಪ್ರಕಾರ, ನಗ್ಮಾ ಮತ್ತು ಸೌರವ್ ಗಂಗೂಲಿ ಸಂಬಂಧದ ಸುದ್ದಿ ಅವರ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿತು. ಡೋನಾ ವಿಚ್ಛೇದನ ಪಡೆಯುವವರೆಗೆ ಮುಂದಾಗಿದ್ದರು. ಆದರೆ ಸೌರವ್ ಗಂಗೂಲಿ ತಪ್ಪನ್ನು ಅರಿತುಕೊಂಡ ಸಾಗಿದರು.
ಇದಾದ ಬಳಿಕ, ನಗ್ಮಾ ಮತ್ತು ಸೌರವ್ ಗಂಗೂಲಿ ದೂರವಾದರು. ಬ್ರೇಕಪ್ ನಂತರ, ನಗ್ಮಾ ಸಂದರ್ಶನವನ್ನು ನೀಡಿದ್ದು, ಇದರಲ್ಲಿ ಗಂಗೂಲಿ ಅವರೊಂದಿಗಿನ ಸಂಬಂಧ ಮತ್ತು ವಿಘಟನೆಯ ಬಗ್ಗೆ ಮಾತನಾಡಿದ್ದರು.
2003ರಲ್ಲಿ ಸಾವಿ ಎಂಬ ಮ್ಯಾಗಜಿನ್’ಗೆ ನೀಡಿದ ಸಂದರ್ಶನದಲ್ಲಿ ಸೌರವ್ ಗಂಗೂಲಿ ಹೆಸರು ಹೇಳದೆ ನಗ್ಮಾ ಈ ವಿಷಯ ಬಹಿರಂಗಪಡಿಸಿದ್ದರು.