ತಾಯಿ ನೃತ್ಯ ಕಲಾವಿದೆ ತಂದೆ ಸ್ಟಾರ್ ಕ್ರಿಕೆಟರ್ ಆದರೂ ಸನಾ ಗಂಗೂಲಿ ಆಯ್ಕೆ ಮಾಡಿದ್ದು ಈ ವೃತ್ತಿ ಬದುಕು! ಅವರ ವಿದ್ಯಾಭ್ಯಾಸ ಪೂರೈಸಿದ್ದು ಈ ವಿವಿಯಲ್ಲಿ
)
ಸನಾ ಗಂಗೂಲಿ ನವೆಂಬರ್ 3, 2001 ರಂದು ಜನಿಸಿದರು. ಆಕೆಯ ತಂದೆ ಸೌರವ್ ಗಂಗೂಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದವರು. ತಾಯಿ ವೃತ್ತಿಪರ ಒಡಿಸ್ಸಿ ನೃತ್ಯಗಾರ್ತಿ.
)
ಸನಾ ಗಂಗೂಲಿ ಅವರು ಕೋಲ್ಕತ್ತಾದ ಲೊರೆಟೊ ಹೌಸ್ ಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.1942ರಲ್ಲಿ ಸ್ಥಾಪನೆಯಾದ ಲೊರೆಟೊ ಹೌಸ್ ದೇಶದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿದೆ.ಇದು ಭಾರತದಲ್ಲಿ ಸ್ಥಾಪಿಸಲಾದ ಅತ್ಯಂತ ಹಳೆಯ ಮತ್ತು ಮೊದಲ ಲೊರೆಟೊ ಸಂಸ್ಥೆಯಾಗಿದೆ.
)
ಸನಾ ತನ್ನ 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 98 ಅಂಕಗಳನ್ನು ಗಳಿಸಿ ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳಿದರು.
ಸನಾ ಯುಕೆ ಲಂಡನ್ ಯೂನಿವರ್ಸಿಟಿ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ.1836 ರಲ್ಲಿ ಸ್ಥಾಪನೆಯಾದ ಇದು ಇಂಗ್ಲೆಂಡ್‌ನ ಅತ್ಯಂತ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ.
ಸನಾ PwC ಮತ್ತು Deloitte ನಲ್ಲಿ ಇಂಟರ್ನ್‌ಶಿಪ್ ಕೂಡಾ ಮಾಡಿದ್ದಾರೆ. ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ಪ್ರಸ್ತುತ INNOVERVನಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರು ಮೋರ್ಗನ್ ಸ್ಟಾನ್ಲಿಯಲ್ಲಿ ವೆಲ್ತ್ ಮ್ಯಾನೇಜ್ಮೆಂಟ್ ವಿಶ್ಲೇಷಕರಾಗಿಯೂ ಕೆಲಸ ಮಾಡಿದ್ದಾರೆ.ಅಧ್ಯಯನದ ಹೊರತಾಗಿ ಸನಾ ತನ್ನ ತಾಯಿಯಂತೆ ಟ್ರೆಂಡ್ ಡ್ಯಾನ್ಸರ್.