ಕನ್ನಡದ ಸ್ಟಾರ್ ನಟಿಯ ಪ್ರೀತಿಗಾಗಿ ಸೌರವ್ ಗಂಗೂಲಿ ತಮ್ಮ ಪತ್ನಿಗೆ ವಿಚ್ಛೇದನ ನೀಡಲು ಸಿದ್ಧರಾಗಿದ್ದರಂತೆ!?
ಕ್ರಿಕೆಟ್ ಮತ್ತು ಬಾಲಿವುಡ್‌ಗೆ ಹಳೆಯ ನಂಟಿದೆ. ಗ್ಲಾಮರ್ ಲೋಕದ ಸೆಲೆಬ್ರಿಟಿಗಳು ಹಲವು ಬಾರಿ ಕ್ರಿಕೆಟರ್ ಜೊತೆ ಪ್ರೀತಿಯಲ್ಲಿ ಬಿದ್ದಿರುವುದು ಇದೆ. ಸೌರವ್ ಗಂಗೂಲಿ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಸಾಕಷ್ಟು ಹೆಸರು ಮತ್ತು ಖ್ಯಾತಿಯನ್ನು ಗಳಿಸಿದ್ದಾರೆ.
ಒಂದು ಕಾಲದಲ್ಲಿ ನಟಿ ನಗ್ಮಾ ಜೊತೆಗೆ ಸೌರವ್ ಗಂಗೂಲಿ ಹೆಸರು ತಳುಕು ಹಾಕಿಕೊಂಡಿತ್ತು. ಮುಂಬೈನಲ್ಲಿ ನಡೆದ ಸಮಾವೇಶದಲ್ಲಿ ನಗ್ಮಾ ಮತ್ತು ಸೌರವ್ ಗಂಗೂಲಿ ಮೊದಲ ಬಾರಿ ಭೇಟಿಯಾದರು.
ನಗ್ಮಾ ಮತ್ತು ಸೌರವ್ ನಡುವೆ ಶುರುವಾದ ಸ್ನೇಹ ಬಳಿಕ ಪ್ರೀತಿಯಾಗಿ ಬದಲಾಯಿತು ಎನ್ನಲಾಗುತ್ತದೆ. ವರದಿಗಳ ಪ್ರಕಾರ, ಇಬ್ಬರೂ ಸುಮಾರು 2 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದಾರೆ ಎನ್ನಲಾಗುತ್ತದೆ.
ನಂತರ ಸೌರವ್ ಗಂಗೂಲಿ ಜೊತೆ ಮದುವೆ ಆಗಲು ನಗ್ಮಾ ಬೇಡಿಕೆ ಇಟ್ಟಾಗ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ಹೇಳಲಾಗುತ್ತದೆ. ಆ ಸಮಯದಲ್ಲಿ ಸೌರವ್ ನಗ್ಮಾಳನ್ನು ಮದುವೆಯಾಗಲು ಸಾಧ್ಯವಾಗಲಿಲ್ಲ.
ಆಗಲೇ ಮದುವೆಯಾಗಿದ್ದ ಸೌರವ್ ಗಂಗೂಲಿ, ಇತ್ತ ನಗ್ಮಾರನ್ನು ಬಿಡಲಾಗದೇ ಒದ್ದಾಡಿದ್ದರಂತೆ. ತಮ್ಮ ಪತ್ನಿ ಡೋನಾ ಗಂಗೂಲಿ ಅವರಿಗೆ ಡಿವೋರ್ಸ್ ಕೊಡಲು ಸಹ ಒಂದೊಮ್ಮೆ ಯೋಚಿಸಿದ್ದರಂತೆ.
ಆದರೆ ಇದೆಲ್ಲವೂ ಅವರ ವೃತ್ತಿಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದಾಗ, ನಗ್ಮಾದಿಂದ ಅಂತರವನ್ನು ಕಾಯ್ದುಕೊಳ್ಳಬೇಕಾಯಿತು. ಇಬ್ಬರೂ 2001 ರಲ್ಲಿ ಬೇರ್ಪಟ್ಟರು.