Keerthy Suresh: ಸೌತ್‌ ಸುಂದರಿ ಕೀರ್ತಿ ಸುರೇಶ್‌ ಉಟ್ಟಿರುವ ಡಿಸೈನರ್ ಸೀರೆಯ ಬೆಲೆಯೆಷ್ಟು ಗೊತ್ತೇ?

Thu, 25 Apr 2024-11:19 am,

ದಕ್ಷಿಣ ಭಾರತದ ಜನಪ್ರಿಯ ನಟಿ ಕೀರ್ತಿ ಸುರೇಶ್‌ ತನ್ನ ಡ್ರೆಸ್ಸಿಂಗ್ ಸೆನ್ಸ್‌ನಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದು, ಅದರಲ್ಲೂ ವಾರಕ್ಕೆ ಒಂದೆರಡು ಬಾರಿಯಾದರೂ, ಸೀರೆಯುಟ್ಟು ಫೋಟೊಶೂಟ್ ಮಾಡಿಸುತ್ತಲೇ ಇರುತ್ತಾರೆ.

ಸೌತ್‌ ಸುಂದರಿ ಕೀರ್ತಿ ಸುರೇಶ್‌ ಸೋಶಿಯಲ್ ಮೀಡಿಯಾಗಳಲ್ಲಿ ವಿಭಿನ್ನ ಸೇರೆಯನ್ನು ಧರಸಿಕೊಂಡು ಮಾಡಿಸಿಕೊಂಡಿರುವ ಫೋಟೋಶೂಟ್‌ ಅನ್ನು ಹಂಚಿಕೊಳ್ಳುತ್ತಿದ್ದು, ಅದಕ್ಕೆ ಆಕೆಯ ಫ್ಯಾನ್ಸ್‌ ಡಿಸೈನ್ ಡಿಸೈನ್ ಆಗಿ ಕಾಮೆಂಟ್‌ಗಳನ್ನು ಹಾಕುತ್ತಿರುತ್ತಾರೆ. 

ನಟಿ ಕೀರ್ತಿ ಸುರೇಶ್‌ ಉಟ್ಟಿರುವ ಡಿಸೈನರ್ ಸೀರೆಯನ್ನು ಜನಪ್ರಿಯ ವಸ್ತ್ರ ವಿನ್ಯಾಸಕ ತರುಣ್ ತಹಿಲಿಯಾನಿ ಡಿಸೈನ್‌ ಮಾಡಿದ್ದಾರೆ. ಇದನ್ನು ಸಾಂಪ್ರದಾಯಿಕ ಕಸೂತಿ ಕಲೆಯನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ.

ಬಹುಭಾಷಾ ತಾರೆ ಕೀರ್ತಿ ಸುರೇಶ್ ಉಟ್ಟಿಕೊಂಡಿರುವ ಸೀರೆಯು ಹೆಣ್ಮಕ್ಕಳ ಮನಸ್ಸನ್ನು ಸೆಳೆದೆದ್ದರೂ ಅದರ ಬೆಲೆಯನ್ನು ಕೇಳಿ ದಂಗಾಗಿ ಕಳೆದು ಹೊಗಿದ್ದಾರೆ. ಈ ಒಂದು ಸೀರೆಯ ಬೆಲೆ ಬರೋಬ್ಬರು 2,99,99 ರೂಪಾಯಿ ಆಗಿದೆ.

ಕೀರ್ತಿ ಸುರೇಶ್ ದುಬಾರಿ ಸೀರೆಯು ಹೂವು ಹಾಗೂ ಜಿಯೋಮೆಟ್ರಿಕ್ ಪ್ಯಾಟ್ರನ್ ಅನ್ನು ಥೀಮ್ ಆಗಿ ಇಟ್ಟುಕೊಂಡು ಡಿಸೈನ್‌ ಮಾಡಲಾಗಿದೆ. ಇದಕ್ಕೆ ಕಣ್ಣಿಗೆ ಹಿತ ಎನಿಸುವ ಹಲವು ಬಣ್ಣಗಳನ್ನು ಬಳಸಲಾಗಿದೆ ಹಾಗಯೆಯೇ ಇದರಲ್ಲಿ ಥ್ರೆಡ್ ವರ್ಕ್‌ಗಳನ್ನು ಮಾಡಿದ್ದಾರೆ.

ಭಾರತೀಯ ನಟಿ ಕೀರ್ತಿ ಸುರೇಶ್‌ ಈ ದುಬಾರಿ ಸೀರೆಯನ್ನು ಇತ್ತೀಚೆಗೆ ನಡೆದ ನಿರ್ದೇಶಕ ಶಂಕರ್ ಮಗಳ ಮದುವೆಗೆ ಉಟ್ಟಿದ್ದರು ಎಂದು ಹೇಳಲಾಗುತ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link