ನಯನತಾರಾ.. ದೀಪಿಕಾ.. ಪ್ರಿಯಾಂಕಾ ಇವರ್ಯಾರು ಅಲ್ಲ.. ಮೊದಲ ಸಿನಿಮಾಗೆ 50 ಕೋಟಿ ಸಂಭಾವನೆ ಪಡೆದ ಸೌತ್‌ ನಟಿ ಈಕೆ!!

Sat, 17 Aug 2024-5:46 pm,

ನಟಿಯರು ನಟರಿಗೆ ಸರಿಸಮಾನವಾಗಿ ಸಂಭಾವನೆ ಪಡೆಯುವ ಮೂಲಕ ನಿರ್ಮಾಪಕರಿಗೆ ಶಾಕ್ ನೀಡುತ್ತಿದ್ದಾರೆ.   

ಬಾಲಿವುಡ್ ಬೆಡಗಿಯರಾದ ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ಸಾಮಾನ್ಯವಾಗಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯರು. ಆದರೆ ಮತ್ತೊಬ್ಬ ನಟಿ 50 ಕೋಟಿ ಸಂಭಾವನೆ ಪಡೆಯುವ ಮೂಲಕ ಎಲ್ಲರಿಗೂ ಶಾಕ್‌ ನೀಡಿದ್ದಾರೆ..   

ಅಲ್ಲದೆ, ದಕ್ಷಿಣದ ನಾಯಕಿಯರ ಮಟ್ಟಿಗೆ, ನಯನತಾರಾ ಮತ್ತು ತ್ರಿಶಾ ಅವರಂತಹ ನಾಯಕಿಯರು ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಆದರೆ ಈಗ ತೆಲುಗು ನಾಯಕಿಯೊಬ್ಬರು ರೂ. 50 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ..  

ಆ ನಟಿ ಬೇರೆ ಯಾರೂ ಅಲ್ಲ ಸಾಯಿ ಪಲ್ಲವಿ. ಇವರು ಪ್ರೇಮಂ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.   

ಇದಕ್ಕೂ ಮೊದಲು ಅವರು ಅನೇಕ ಟಿವಿ ಶೋಗಳಲ್ಲಿ ಡಾನ್ಸ್‌ ಕಾರ್ಯಕ್ರಮಗಳನ್ನು ಮಾಡಿದ್ದರು.. ಅಲ್ಲದೇ ಬಾಲ ಕಲಾವಿದೆಯಾಗಿಯೂ ಮಿಂಚಿದ್ದರು..   

ಈ ಚೆಲುವೆ ತೆಲುಗಿನ ಫಿದಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಳು. ಇದಾದ ಬಳಿಕ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ತೆಲುಗು, ತಮಿಳು ಭಾಷೆಗಳಲ್ಲದೆ ಈಗ ಹಿಂದಿಯಲ್ಲೂ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ..    

ಹೌದು ರಾಮಾಯಣದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ನಟಿಸುತ್ತಿದ್ದಾರೆ. ಹಾಗೆಯೇ ಸಾಯಿ ಪಲ್ಲವಿ ಸೀತೆಯಾಗಿ ನಟಿಸಲಿದ್ದಾರೆ.   

ಹಲವು ಭಾಗಗಳಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಹಾಗಾಗಿ ನಟರಿಗೂ ಹೆಚ್ಚು ಸಂಭಾವನೆ ನೀಡಲಾಗುತ್ತಿದೆಯಂತೆ. ಈ ಚಿತ್ರಕ್ಕೆ ಸಾಯಿ ಪಲ್ಲವಿ ರೂ. 50 ಕೋಟಿ ಸಂಭಾವನೆ ಪಡೆಯಲಿದ್ದಾರೆಯಂತೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link