ಹೀರೋ ಜೊತೆ ಮಲಗದಿದ್ದರೂ.. ನಿರ್ಮಾಪಕ, ನಿರ್ದೇಶಕರ ಜೊತೆ ಮಲಗಲೇ ಬೇಕು: ಕಾಸ್ಟಿಂಗ್‌ ಕೌಚ್‌ ಕರಾಳ ಮುಖ ಬಿಚ್ಚಿಟ್ಟ ನಟಿ

Tue, 02 Jul 2024-7:45 am,

ಮರಾಠಿ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ನಟಿ ಸಾಯಿ ತಮ್ಹಂಕರ್ ಕಾಸ್ಟಿಂಗ್‌ ಕೌಚ್‌ ಬಗ್ಗೆ ಓಪನ್‌ ಆಗಿಯೇ ಮಾತನಾಡಿದ್ದಾರೆ. 

ಅದೊಂದು ದಿನ ಒಬ್ಬ ವ್ಯಕ್ತಿ  ನನಗೆ ಕರೆ ಮಾಡಿ, ನಿಮಗೋಸ್ಕರ ಒಂದು ಅತ್ಯುತ್ತಮ ಪಾತ್ರ ಇದೆ ಎಂದು ಹೇಳಿದ. ಬಳಿಕ ಅರೆ ಕ್ಷಣವೂ ಯೋಚಿಸದೇ ಮಂಚಕ್ಕೆ ಕರೆದ ಎಂದು ಹೇಳಿದ್ದಾರೆ.

ಈ ಪಾತ್ರ ನಿಮ್ಮದಾಗ ಬೇಕೆಂದರೆ ನೀವು ನಿರ್ಮಾಪಕ ಮತ್ತು ನಿರ್ದೇಶಕರ ಜೊತೆ ಮಲಗಬೇಕು. ಸಾಮಾನ್ಯವಾಗಿ ಹೀರೋ ಜೊತೆಯೂ ಮಲಗಬೇಕು, ಆದರೆ ನೀವು ನಾಯಕನ ಜೊತೆ ಮಲುಗಬೇಕಿಲ್ಲ. ನಿರ್ಮಾಪಕ ಮತ್ತು ನಿರ್ದೇಶಕರ ಜೊತೆ ಒಂದು ಸಲ ಮಲಗಿ ಎದ್ದರೆ ಸಾಕು ಅಂತ ಹೇಳಿದ್ದನಂತೆ ಎಂದು ಸಾಯಿ ತಮ್ಹಂಕರ್ ಹೇಳಿದ್ದಾರೆ.

ಅವನ ಮಾತಿನಿಂದ ಕೋಪಗೊಂಡ ನಾನು, ನೀನೇಕೆ ನಿಮ್ಮ ಅಮ್ಮನನ್ನು ಮಲಗಲು ಕಳಿಸಿಬಾರದು ಎಂದು ಕೇಳಿದ್ದೆ ಅಂತ ಸಾಯಿ ತಮ್ಹಂಕರ್ ಹೇಳಿದ್ದಾರೆ. ಇನ್ಮುಂದೆ ಇಂಥದ್ದೆಲ್ಲ ಕೇಳಿ ಕಾಲ್‌ ಮಾಡಿದರೆ ಸರಿ ಇರಲ್ಲ ಎಂದು ಬೈದು ಇಟ್ಟಿದ್ದೆ ಎಂದಿದ್ದಾರೆ. 

ಸಾಯಿ ತಮ್ಹಂಕರ್ ಮರಾಠಿ ಮಾತ್ರವಲ್ಲ ಹಿಂದಿ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಮಲಯಾಳಂನಲ್ಲಿ ಕೂಡ ಒಂದು ಚಿತ್ರ ಮಾಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link