Actress Cosmetic Surgery: ಕಾಸ್ಮೆಟಿಕ್ ಸರ್ಜರಿ ಮೂಲಕ ಸೌಂದರ್ಯ ಹೆಚ್ಚಿಸಿಕೊಂಡ ಸೌತ್ ನಟಿಯರಿವರು ! ಮೊದಲು ಹೇಗಿದ್ರು ನೋಡಿ, ಇಲ್ಲಿವೆ ಫೋಟೋಸ್..
ಶ್ರುತಿ ಹಾಸನ್: ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಕೂಡ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತೆ.
ಸಮಂತಾ ರುತ್ ಪ್ರಭು : ಮಾಡೆಲಿಂಗ್ ಮೂಲಕ ಸಮಂತಾ ರುತ್ ಪ್ರಭು ಬಣ್ಣದ ಲೋಕದ ಪಯಣ ಆರಂಭಿಸಿದರು. ಸಮಂತಾ ಅವರಿಗೆ ರವಿವರ್ಮನ್ ಸಿನಿಮಾ ಆಫರ್ ನೀಡಿದರು. ಮೊದಲ ಚಿತ್ರದಲ್ಲೇ ಫೇಮಸ್ ಆದ ಸಮಂತಾ, ಆ ಬಳಿಕ ಹಿಂತಿರುಗಿ ನೋಡಲೇ ಇಲ್ಲ. ಇಂದು ದಕ್ಷಿಣದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿಕೊಂಡಿದ್ದಾರೆ.
ನಯನತಾರಾ: ನಯನತಾರಾ ಸಹ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದರು ಎನ್ನಲಾಗುತ್ತದೆ. ಅವರು 2003 ರ ಮಲಯಾಳಂ ಚಲನಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.
ಕೀರ್ತಿ ಸುರೇಶ್ : ನಟಿ ಕೀರ್ತಿ ಸುರೇಶ್ ಲಿಪ್ ಜಾಬ್ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಕೀರ್ತಿ ಸುರೇಶ್ ಸಹ ಪಡೆದಿದ್ದಾರೆ. ಮಹಾನಟಿ ಚಿತ್ರಕ್ಕಾಗಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.
ಕಾಜಲ್ ಅಗರ್ವಾಲ್ : ಕಾಜಲ್ ಅಗರ್ವಾಲ್ ಮೂಗಿನ ಸರ್ಜರಿಗೆ ಒಳಗಾಗಿದ್ದಾರೆ ಎನ್ನಲಾಗುತ್ತದೆ. ಕಾಜಲ್ ತಮ್ಮ ನಟನಾ ವೃತ್ತಿಯನ್ನು ಹಿಂದಿ ಚಲನಚಿತ್ರದ ಮೂಲಕ ಆರಂಭಿಸಿದರು. ಇದಾದ ನಂತರ ಕಾಜಲ್ ಅಗರ್ವಾಲ್ ಅನೇಕ ಸೌತ್ ಚಿತ್ರಗಳಲ್ಲಿ ಕೆಲಸ ಮಾಡಿದರು.