36 ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಪ್ರಸಿದ್ಧ ನಟಿ.. 18 ವರ್ಷಕ್ಕೆ 450 ಸಿನಿಮಾ ಮಾಡಿದ್ದ ಬ್ಯೂಟಿಗೆ ಸೌಂದರ್ಯವೇ ಶಾಪವಾಯ್ತಾ?

Sun, 01 Sep 2024-2:36 pm,

ಸಿಲ್ಕ್ ಸ್ಮಿತಾ.. ಈ ಹೆಸರು ಕೇಳಿದ್ರೆ ಸಾಕು ಹುಡುಗರ ಕಣ್ಣಮುಂದೆ ಈಗಲೂ ಆ ಸೌಂದರ್ಯದ ಸಿರಿ ಮೂಡುವುದು. ಸ್ಟಾರ್ ಹೀರೋಗಳನ್ನು ಮೀರಿ ಬೆಳೆದ ಈ ನಟಿಯ ಬದುಕು ಒಂದು ದುರಂತ ಕತೆ.

ಈಗಿನ ಪೀಳಿಗೆಗೆ ಸಿಲ್ಕ್ ಸ್ಮಿತಾ ಕ್ರೇಜ್ ಬಗ್ಗೆ ಹೆಚ್ಚು ತಿಳಿದಿಲ್ಲ, ಆದರೆ 80-90 ರ ದಶಕದಲ್ಲಿ ಸಿಲ್ಕ್ ಸ್ಮಿತಾ ಸೆನ್ಸೇಷನ್ ಆಗಿದ್ದರು.  

ಸಿಲ್ಕ್ ಸ್ಮಿತಾ ನೋಡಲೆಂದೇ ಮತ್ತೆ ಮತ್ತೆ ಥಿಯೇಟರ್‌ಗಳಿಗೆ ಬರುವವರಿದ್ದರು. ಆಕೆಯನ್ನುತೆರೆಯ ಮೇಲೆ ನೋಡಿಯೇ.. ಥಿಯೇಟರ್‌ಗಳಲ್ಲಿ ಶಿಳ್ಳೆ ಹೊಡೆಯುತ್ತಿದ್ದ ಯುವಕರಿದ್ದರು. ಒಬ್ಬ ಸ್ಟಾರ್ ಹೀರೋಗೂ ಸಿಗದ ಶಿಳ್ಳೆ, ಚಪ್ಪಾಳೆ, ಕ್ರೇಜ್ ಸಿಲ್ಕ್ ಸ್ಮಿತಾ‌ಗೆ ಸಿಗುತ್ತಿತ್ತು. 

ಕನ್ನಡ, ತೆಲುಗು ಸೇರಿದಂತೆ ಬಹುತೇಕ ಸೌತ್ ಸಿನಿಮಾಗಳಲ್ಲಿ ಸಿಲ್ಕ್ ಸ್ಮಿತಾ ನಟಿಸಿದ್ದಾರೆ. ಸಿಲ್ಕ್ ಸ್ಮಿತಾ ಖ್ಯಾತಿ ಹಿಂದಿಯವರೆಗೆ ಹಬ್ಬಿತ್ತು. ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದಾರೆ.

ಐಟಂ ಡ್ಯಾನ್ಸರ್ ಆಗಿ ಖ್ಯಾತಿ ಪಡೆದ ಸಿಲ್ಕ್ ಸ್ಮಿತಾ ನಟಿಯಾಗಿಯೂ ಒಳ್ಳೆಯ ಹೆಸರು ಗಳಿಸಿದ್ದಾರೆ. ಆಗ ಸಿಲ್ಕ್ ಸ್ಮಿತಾ ಪ್ರತಿ ಹಾಡಿಗೆ ರೂ.50 ಸಾವಿರ ಸಂಭಾವನೆ ತೆಗೆದುಕೊಳ್ಳುತ್ತಿದ್ದರು.

3 ದಶಕಗಳ ಹಿಂದೆ ರೂ.50 ಸಾವಿರ ಸಂಭಾವನೆ ಸಾಮಾನ್ಯ ಸಂಗತಿಯಾಗಿರಲಿಲ್ಲ. ಕೇವಲ 18 ವರ್ಷಗಳ ವೃತ್ತಿಜೀವನದಲ್ಲಿ 450 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 

ಇಷ್ಟೆಲ್ಲ ಕ್ರೇಜ್‌ ಹೊಂದಿದ್ದ ಸಿಲ್ಕ್ ಸ್ಮಿತಾ ಜೀವನದ ಕೊನೆಯ ದಿನಗಳಲ್ಲಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಕೈಯಲ್ಲಿ ಹಣವಿಲ್ಲದ ಕಡು ಬಡತನ, ಸಾಲದ ಸುಳಿಯಲ್ಲಿ ಸಿಲುಕಿ 36ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link