ಫಿಟ್ ಆಗಿ ಕಾಣ್ತಿದ್ದ ಈ 5 ಸೆಲೆಬ್ರಿಟಿಗಳು ಹೃದಯಾಘಾತದಿಂದ ಹಠಾತ್ ಸಾವನ್ನಪ್ಪಿದ್ದರ ಹಿಂದಿದೆಯಾ ಕಾರಣ?
ಇತ್ತೀಚೆಗೆ ತಮಿಳು ನಟಿ ಶ್ರುತಿ ಷಣ್ಮುಗ ಪ್ರಿಯಾ ಹಠಾತ್ ಹೃದಯ ಸ್ತಂಭನದ ನಂತರ ಪತಿಯನ್ನು ಕಳೆದುಕೊಂಡರು, ಅವರಿಗೆ 30 ವರ್ಷ. ನಟಿ 2022 ರಲ್ಲಿ ವಿವಾಹವಾದರು ಮತ್ತು ಇಬ್ಬರೂ ಕೇವಲ ಒಂದೂವರೆ ವರ್ಷಗಳ ಕಾಲ ಒಟ್ಟಿಗೆ ಇದ್ದರು.
ಸ್ಪಂದನಾ ವಿಜಯ್ ರಾಘವೇಂದ್ರ: ಕನ್ನಡದ ಖ್ಯಾತ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ರಾಘವೇಂದ್ರ ಅವರ ನಿಧನದ ಸುದ್ದಿ ಎಲ್ಲರಿಗೂ ಶಾಕ್ ನೀಡಿದೆ. ಅವರು ಬ್ಯಾಂಕಾಕ್‌ನಲ್ಲಿ ರಜಾದಿನಗಳನ್ನು ಎಂಜಾಯ್ ಮಾಡುತ್ತಿದ್ದಾಗ ಹೃದಯ ಸ್ತಂಭನದಿಂದ ನಿಧನರಾದರು ಎಂದು ವರದಿಯಾಗಿದೆ. 45 ವರ್ಷದ ಸ್ಪಂದನಾ ಕೊನೆಯುಸಿರೆಳೆದರು. ಅವರು ನಿವೃತ್ತ ಪೊಲೀಸ್ ಅಧಿಕಾರಿ ಶಿವರಾಮ್ ಅವರ ಪುತ್ರಿ.
ಪುನೀತ್ ರಾಜ್‌ಕುಮಾರ್: ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಹೃದಯಾಘಾತದಿಂದ ನಿಧನರಾದರು. ಅವರು ಕೇವಲ 46 ವರ್ಷ ವಯಸ್ಸಿನವರಾಗಿದ್ದರು. ಸಖತ್ ಫಿಟ್ ಆಗಿಯೇ ಕಾಣುತ್ತಿದ್ದ ಪುನೀತ್ ಅವರ ಹಠಾತ್ ನಿಧನ ಎಲ್ಲರಿಗೆ ಶಾಕ್ ನೀಡಿತು.
ನಿತಿನ್ ಗೋಪಿ: ಕನ್ನಡ ನಟ ನಿತಿನ್ ಗೋಪಿ ಅವರು 39 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಕೂಡ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ವರದಿಗಳ ಪ್ರಕಾರ, ಅವರನ್ನು ಎದೆ ನೋವು ಎಂದು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಹಲೋ ಡ್ಯಾಡಿ ಚಿತ್ರದಲ್ಲಿ ನಿತಿನ್ ಗೋಪಿ ಬಾಲ ಕಲಾವಿದನಾಗಿ ಖ್ಯಾತ ನಟ ಡಾ.ವಿಷ್ಣುವರ್ಧನ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.
ಚಿರಂಜೀವಿ ಸರ್ಜಾ: ಸ್ಯಾಂಡಲ್‌ವುಡ್ ಅಭಿಮಾನಿಗಳು ಚಿರಂಜೀವಿ ಸರ್ಜಾ ಅವರನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ, 39 ನೇ ವಯಸ್ಸಿನಲ್ಲಿ ಅವರ ಅಕಾಲಿಕ ನಿಧನವು ಅವರ ಗರ್ಭಿಣಿ ಪತ್ನಿ ಮೇಘನಾ ರಾಜ್ ಮತ್ತು ಸಾವಿರಾರು ಅಭಿಮಾನಿಗಳನ್ನು ಆಘಾತಕ್ಕೀಡು ಮಾಡಿದೆ. ಅವರು ಹೃದಯಾಘಾತದಿಂದ ಜೂನ್ 7, 2020 ರಂದು ಕೊನೆಯುಸಿರೆಳೆದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕನ್ನಡದ ತಾರೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯರು ಸಾವಿಗೆ ಹೃದಯ ಸ್ತಂಭನ ಎಂದು ಉಲ್ಲೇಖಿಸಿದ್ದಾರೆ.