ದಕ್ಷಿಣದ ಸಿನೆಮಾಗಳನ್ನು ರಿಮೇಕ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಗೆದ್ದ ಬಾಲಿವುಡ್ ಚಿತ್ರಗಳಿವು ..!
ಭೂಲ್ ಭುಲೈಯಾ: 2007 ರಲ್ಲಿ ಬಿಡುಗಡೆಯಾದ 'ಭೂಲ್ ಭುಲೈಯಾ' ಚಿತ್ರವು 1993 ರಲ್ಲಿ ಬಿಡುಗಡೆಯಾದ ಮಲಯಾಳಂ ಚಲನಚಿತ್ರ 'ಮಣಿಚಿರತಾಜು' ಚಿತ್ರದ ರಿಮೇಕ್ ಆಗಿತ್ತು. ಚಿತ್ರವು ಸಸ್ಪೆನ್ಸ್ ಮತ್ತು ಹಾರರ್‌ನೊಂದಿಗೆ ಹಾಸ್ಯದ ಛಾಯೆಯನ್ನು ಹೊಂದಿದ್ದು, ಪ್ರೇಕ್ಷಕರ ಹೃದಯವನ್ನು ಗೆದ್ದಿದೆ.
ದೃಶ್ಯಂ: ಬಾಲಿವುಡ್‌ನ ಅತ್ಯುತ್ತಮ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಚಲನಚಿತ್ರವನ್ನು ವೀಕ್ಷಿಸಲು ಬಯಸಿದರೆ 'ದೃಶ್ಯಂ' ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. 2015 ರಲ್ಲಿ ಬಿಡುಗಡೆಯಾದ ಈ ಚಿತ್ರವು ಮಲಯಾಳಂನ 'ದೃಶ್ಯಂ' ಚಿತ್ರದ ರಿಮೇಕ್ ಆಗಿತ್ತು.
ಜೆರ್ಸಿ: ತೆಲುಗು ಚಿತ್ರ 'ಜೆರ್ಸಿ' ಸ್ಪೋರ್ಟ್ಸ್ ಡ್ರಾಮಾ ಚಿತ್ರವಾಗಿದ್ದು, ಇದನ್ನು ಗೌತಮ್ ತಿನ್ನನೂರಿ ನಿರ್ದೇಶಿಸಿದ್ದಾರೆ. ಈ ಚಿತ್ರದ ಹಿಂದಿ ರಿಮೇಕ್‌ನಲ್ಲಿ ಶಾಹಿದ್ ಕಪೂರ್ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ, ಶಾಹಿದ್ ಕ್ರಿಕೆಟಿಗನ ಪಾತ್ರವನ್ನು ನಿರ್ವಹಿಸಿದ್ದಾರೆ.
ಕಬೀರ್ ಸಿಂಗ್: ಶಾಹಿದ್ ಕಪೂರ್ ಅಭಿನಯದ 'ಕಬೀರ್ ಸಿಂಗ್' ಚಿತ್ರ ಬಿಡುಗಡೆಯಾದಾಗ, ಜನರು ಶಾಹಿದ್ ಅವರ ಲುಕ್ ಮತ್ತು ನಟನೆಯನ್ನು ಬಹಳವಾಗಿ ಮೆಚ್ಚಿದರು. ಈ ಚಿತ್ರದಲ್ಲಿ ಶಾಹಿದ್ ಮತ್ತು ಕ್ಯಾರಾ ಜೋಡಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಆದರೆ ಈ ಚಿತ್ರವು ತೆಲುಗಿನ 'ಅರ್ಜುನ್ ರೆಡ್ಡಿ' ಚಿತ್ರದ ರಿಮೇಕ್ .'ಅರ್ಜುನ್ ರೆಡ್ಡಿ' ಚಿತ್ರದಲ್ಲಿ ವಿಜಯ್ ದೇವರಕೊಂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ವಾಂಟೆಡ್ : ಈ ಚಿತ್ರವು ಸಲ್ಮಾನ್ ಖಾನ್ ಅವರ ವೃತ್ತಿಜೀವನಕ್ಕೆ ಹೊಸ ಆಯಾಮವನ್ನೇ ನೀಡಿತ್ತು. ಈ ಚಿತ್ರದ ನಂತರ, ಸಲ್ಮಾನ್ ಅವರ ಅದೃಷ್ಟ ಬದಲಾಗಿತ್ತು ಎಂದರೂ ತಪ್ಪಲ್ಲ. ಪ್ರಭುದೇವ ನಿರ್ದೇಶನದ ಈ ಚಿತ್ರವು ತೆಲುಗಿನ 'ಪೋಕಿರಿ' ಚಿತ್ರದ ರಿಮೇಕ್. ಸಲ್ಮಾನ್ ಖಾನ್ ಅವರ ವೃತ್ತಿಜೀವನವನ್ನು ಮತ್ತೆ ಹಳಿಗೆ ಮರಳಿಸಿದ ಚಿತ್ರವಾಗಿತ್ತು ವಾಂಟೆಡ್.
ಗಜನಿ: ಅಮೀರ್ ಖಾನ್ ಗೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂಬ ಗುರುತನ್ನು ತಂದುಕೊಟ್ಟ ಸಿನಿಮಾ ‘ಗಜನಿ’. 2008 ರಲ್ಲಿ ಬಿಡುಗಡೆಯಾದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಹಲವು ದಾಖಲೆಗಳನ್ನು ಮುರಿಯಿತು. ಚಿತ್ರದಲ್ಲಿ ಅಮೀರ್ ಖಾನ್ ಶಾರ್ಟ್ ಟರ್ಮ್ ಮೆಮೊರಿ ಲಾಸ್ ಖಾಯಿಲೆಯಿಂದ ಬಳಲುತ್ತಿರುವ ಉದ್ಯಮಿಯ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರ ತಮಿಳು ಚಿತ್ರರಂಗದ 'ಸೂರ್ಯ' ಚಿತ್ರದ ರಿಮೇಕ್ ಆಗಿದೆ.