ಅವಿ-ಪವಿ ಬೆನ್ನಲ್ಲೇ ಬಿಗ್ ಬಾಸ್ ಮನೆಗೆ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ! ಈತ ಭಾರತೀಯನೇ ಅಲ್ಲ…

Sat, 09 Dec 2023-4:34 pm,

ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಅವಿನಾಶ್ ಶೆಟ್ಟಿ ಹಾಗೂ ಪವಿ ಪೂವಪ್ಪ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ. ಆದರೆ ನಾವಿಂದು ಮಾತನಾಡುತ್ತಿರುವುದು ಕನ್ನಡ ಬಿಗ್ ಬಾಸ್ ಬಗ್ಗೆ ಅಲ್ಲ, ಬದಲಾಗಿ ಹಿಂದಿ ಬಿಗ್ ಬಾಸ್ ಸೀಸನ್ 17 ಬಗ್ಗೆ.

ಬಿಗ್ ಬಾಸ್ ಹಿಂದಿ ಸೀಸನ್ 17ರಲ್ಲಿ ಈ ಹಿಂದೆ ಓರಿ ವೈಲ್ಡ್  ಕಾರ್ಡ್ ಮೂಲಕ ಬಂದಿದ್ದರು, ಇದೀಗ ಮತ್ತೊಬ್ಬ ಪ್ರವೇಶ ಪಡೆಯುತ್ತಿದ್ದಾರೆ. ಈ ಬಾರಿ, ಯಾವುದೇ ಟಿವಿ ಅಥವಾ ಬಾಲಿವುಡ್ ಸ್ಟಾರ್ ಅಲ್ಲ ಬದಲಾಗಿ ಗ್ಲೋಬಲ್ ಸ್ಟಾರ್ ಶೋನಲ್ಲಿ ಭಾಗವಹಿಸಲಿದ್ದಾರೆ.

ಕೆಲವು ದಿನಗಳ ಹಿಂದೆ, ಬಿಗ್ ಬಾಸ್ 17 ಕ್ಕೆ ಪ್ರಸಿದ್ಧ ಕೊರಿಯನ್ ಪಾಪ್ ಗಾಯಕರೊಬ್ಬರು ಕ್ಕೆ ಪ್ರವೇಶಿಸುತ್ತಾರೆ ಎಂಬ ಸುದ್ದಿ ಇತ್ತು. ಇದೀಗ ಈ ಜನಪ್ರಿಯ ತಾರೆಯೇ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ.

ಬಿಗ್ ಬಾಸ್ ಸೀಸನ್ 17ಕ್ಕೆ ಎಂಟ್ರಿ ಪಡೆಯುತ್ತಿರುವ ಈ ಸೆಲೆಬ್ರಿಟಿಯ ಹೆಸರು ಅವೂರಾ. ಈತ ಕೊರಿಯನ್ ಬಾಯ್ ಬ್ಯಾಂಡ್ ಡಬಲ್ ಎ ಸದಸ್ಯ. ಕೊರಿಯನ್ ಜೊತೆಗೆ, ಅವೂರಾ ಹಿಂದಿ ಹಾಡುಗಳನ್ನು ಸಹ ಇಷ್ಟಪಡುತ್ತಾರೆ. ಬಿಗ್ ಬಾಸ್ 17ರಲ್ಲಿ ಹಿಂದಿ ಹಾಡೊಂದನ್ನೂ ಹಾಡಿದ್ದಾರೆ.

ಬಿಗ್ ಬಾಸ್ 17 ಮುಂಬರುವ ವೀಕೆಂಡ್ ಕಾ ವಾರ್ ಸಂಚಿಕೆಯ ಪ್ರೋಮೋವನ್ನು ಬಿಡುಗಡೆ ಮಾಡಿದೆ. ಈ ವೀಡಿಯೊದಲ್ಲಿ, ಔರಾ ಅವರು 'ವೋ ಕೃಷ್ಣಾ ಹೈ' ಹಾಡಿನ ಮೂಲಕ ವೇದಿಕೆಗೆ ಎಂಟ್ರಿ ಪಡೆಯುತ್ತಿದ್ದಾರೆ.  

ಅವೂರಾ ದಕ್ಷಿಣ ಕೊರಿಯಾದ ಶ್ರೀಮಂತ ಪಾಪ್ ಗಾಯಕರಲ್ಲಿ ಒಬ್ಬರು. ಇವರ ನಿವ್ವಳ ಮೌಲ್ಯ $5 ಮಿಲಿಯನ್

ZEENEWS TRENDING STORIES

By continuing to use the site, you agree to the use of cookies. You can find out more by Tapping this link