ಈ ಸ್ಟಾರ್‌ ನಟ ಒಂದು ದಿನದ ಊಟಕ್ಕೆ 2 ಲಕ್ಷ ರೂಪಾಯಿ ಖರ್ಚು ಮಾಡ್ತಾರಂತೆ !

Thu, 12 Sep 2024-3:00 pm,

Prabhas Meal cost: ಪ್ರಭಾಸ್‌ ಬಗ್ಗೆ ಇಂಟರೆಸ್ಟಿಂಗ್‌ ವಿಚಾರವೊಂದು ವೈರಲ್‌ ಆಗುತ್ತಿದೆ. ಪ್ರಭಾಸ್‌ ಒಂದು ದಿನದ ಊಟಕ್ಕಾಗಿ ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಾರೆಂಬ ಸಂಗತಿ ವೈರಲ್‌ ಆಗಿದೆ. 

ನಟ ಪ್ರಭಾಸ್‌ ಫಿಟ್‌ನೆಸ್‌ ಎಂಥವರಿಗೂ ಸ್ಫೂರ್ತಿದಾಯಕವಾಗಿದೆ. ಸಿನಿಮಾದಲ್ಲಿನ ಆಕ್ಷನ್‌ ಸೀನ್‌ಗಳಲ್ಲಿ ಮಿಂಚುವ ಡಾರ್ಲಿಂಗ್‌ ಪ್ರಭಾಸ್‌ ಫಿಟ್ನೆಸ್‌ ಗಾಿ ಸಾಕಷ್ಟು ಶ್ರಮಿಸುತ್ತಾರೆ. 

ಪ್ರಭಾಸ್‌ ಫಿಟ್ನೆಸ್‌ಗೆ ವರ್ಕೌಟ್‌ ಜತೆ ಊಟ ಕೂಡ ಮಖ್ಯ ಕಾರಣವಾಗಿದೆ. ಪ್ರಭಾಸ್‌ಗೆ ಊಟವೆಂದರೇ ಬಲು ಪ್ರೀತಿ ಎಂದು ಹೇಳಲಾಗುತ್ತದೆ.

ಪ್ರಭಾಸ್‌ ಫುಡಿ ಆಗಿದ್ದರೂ ಡಯೆಟ್‌ ವಿಚಾರದಲ್ಲಿ ತುಂಬಾ ಸ್ಟ್ರಿಕ್ಟ್‌ ಆಗಿದ್ದಾರೆ. ಪ್ರಭಾಸ್‌ ಊಟಕ್ಕೆಂದೇ ಪ್ರತಿದಿನ ಲಕ್ಷಗಟ್ಟಲೇ ಹಣ ಖರ್ಚು ಮಾಡ್ತಾರಂತೆ ಎಂಬ ವಿಚಾರ ವೈರಲ್ ಆಗಿದೆ. 

ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್‌ ಎಂದಿಗೂ ಒಬ್ಬರೇ ಊಟ ಮಾಡುವದಿಲ್ಲ. ಇದು ತುಂಬಾ ಕಡಿಮೆ ಸಮಯ ಅವರು ಒಬ್ಬರೇ ಊಟ ಮಾಡ್ತಾರಂತೆ.

ಸೆಟ್‌ನಲ್ಲಿ ತಮ್ಮ ಜೊತೆಗಿರುವ ನೂರಾರು ಮಂದಿಗೆ ಊಟ ತರಿಸಿ ಕೊಡುವುದು ಪ್ರಭಾಸ್‌ ರೂಢಿಸಿಕೊಂಡಿದ್ದಾರಂತೆ. ಕೆಲವೊಮ್ಮೆ ಪ್ರತಿನಿತ್ಯ ಜೊತೆಯಲ್ಲಿದ್ದವರಿಗೆ ಊಟ ಕೊಡಿಸುತ್ತಾರಂತೆ. 

ಹೀಗಾಗಿ ಪ್ರಭಾಸ್ ಒಂದು ದಿನದ ಊಟಕ್ಕೆ 2 ಲಕ್ಷ ರೂಪಾಯಿ ಖರ್ಚು ಮಾಡ್ತಾರೆ ಎನ್ನಲಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link