ಈ ಚೆಲುವೆ ಜೊತೆ 40ನೇ ವಯಸ್ಸಿಗೆ ನಟ ಧನುಷ್ 2ನೇ ಮದುವೆ !?

Sat, 25 May 2024-2:27 pm,

ನಟ ಧನುಷ್ ಅವರು ರಜನಿಕಾಂತ್ ಪುತ್ರಿ ಐಶ್ವರ್ಯ ಅವರನ್ನು ನವೆಂಬರ್ 2004 ರಲ್ಲಿ ವಿವಾಹವಾದರು. ಆಗ ನಟ ಧನುಷ್‌ಗೆ 21 ವರ್ಷ ಮತ್ತು ಐಶ್ವರ್ಯಾ ರಜನಿಕಾಂತ್‌ಗೆ 22 ವರ್ಷ. 

ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಉತ್ತಮವಾಗಿ ಸಾಗುತ್ತಿದ್ದ ಇವರ ದಾಂಪತ್ಯ ಜೀವನ ಕೆಲ ವರ್ಷಗಳ ಹಿಂದೆಯೇ ಮುರಿದುಬಿತ್ತು. 

ಐಶ್ವರ್ಯ ಮತ್ತು ಧನುಷ್ ತಮ್ಮ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಜನವರಿ 2022 ರಲ್ಲಿ ಅವರು ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ಘೋಷಿಸಿದರು. ಇದನ್ನು ನೋಡಿದ ಅಭಿಮಾನಿಗಳು ಶಾಕ ಆದರು. ಇಬ್ಬರೂ ಪರಸ್ಪರ ವಿಚ್ಛೇದನ ಪಡೆದರು. 

18 ವರ್ಷಗಳ ದಾಂಪತ್ಯದ ನಂತರ ಧನುಷ್ ಮತ್ತು ಐಶ್ವರ್ಯಾ ಇಬ್ಬರೂ ಬೇರೆಯಾದರು. ಧನುಷ್ ಸಿನಿಮಾಗಳಿಗೆ ಕಮಿಟ್ ಆಗುತ್ತಿರುವಾಗಲೇ ಐಶ್ವರ್ಯಾ ರಜನಿಕಾಂತ್ ಕೂಡ ತಮ್ಮ ಸಿನಿಮಾದ ಕೆಲಸ ಶುರು ಮಾಡಿದ್ದಾರೆ. 

ಈ ಹಂತದಲ್ಲಿ ನಟ ಧನುಷ್ ಎರಡನೇ ಮದುವೆಯಾಗಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. 40 ವರ್ಷದ ನಟ ಧನುಷ್ ಅವರಿಗೆ ಎರಡನೇ ಮದುವೆ ಮಾಡಲು ಅವರ ಕುಟುಂಬದವರು ಪ್ರಯತ್ನಿಸುತ್ತಿದ್ದಾರೆ ಎಂಬ ವರದಿಗಳಿವೆ. 

ಈ ಬಗ್ಗೆ ನಟ ಧನುಷ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಖ್ಯಾತ ಪತ್ರಕರ್ತರೊಬ್ಬರು ತಮ್ಮ ಇತ್ತೀಚಿನ ಸಂದರ್ಶನದಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. 

ನಟ ಧನುಷ್‌ ಎರಡನೇ ಮದುವೆಯಾಗಲಿರುವ ವಧು ಚಿತ್ರರಂಗದವರಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ನಟ ಧನುಷ್ ಅಥವಾ ಅವರ ತಂದೆ ಕಸ್ತೂರಿ ರಾಜಾ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link