ಈ ಸೂಪರ್ ಸ್ಟಾರ್ ನಟಿಗೆ ಪುರುಷನಾಗಬೇಕು ಎನ್ನವ ಆಸೆಯಂತೆ..! ಎಂಥಾ ವಿಚಿತ್ರ ಅಲ್ವಾ..
ಎರಡು ದಶಕಗಳಿಂದ ಇಂಡಸ್ಟ್ರಿಯಲ್ಲಿ ವಿಶೇಷ ಹೆಸರು ಗಳಿಸಿ ಪ್ರೇಕ್ಷಕರ ಮನಸೂರೆಗೊಳ್ಳುತ್ತಿರುವ ಸ್ಟಾರ್ ನಾಯಕಿ ತ್ರಿಶಾ.
40ರ ಹರೆಯದಲ್ಲಿಯೂ ಗ್ಲಾಮರ್ ಪಾತ್ರಗಳು, ಮಹಿಳಾ ಕೇಂದ್ರಿತ ಕಥೆಗಳು ಮತ್ತು ಕ್ಲಾಸಿಕ್ ಯಾವುದೇ ಪಾತ್ರಕ್ಕೆ ಈ ಸುಂದರಿ ರೆಡಿಯಾಗಿದ್ದಾಳೆ..
ಸದ್ಯ ತ್ರಿಶಾ ಅಜಿತ್, ಕಮಲ್ ಹಾಸನ್, ಮೋಹನ್ ಲಾಲ್, ರಾಮ್, ಚಿರಂಜೀವಿ ವಿಶ್ವಂಭರ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ತ್ರಿಶಾ ತಮ್ಮ ಮನದಲ್ಲಿ ಅನಾದಿ ಕಾಲದಿಂದಲೂ ಇದ್ದ ಆಸೆಯನ್ನು ಇದೀಗ ಬಹಿರಂಗಗೊಳಿಸಿದ್ದಾಳೆ.
ಯಾರೂ ಬಯಸದ ಆಸೆಯನ್ನು ತ್ರಿಷಾ ಬಹಿರಂಗ ಪಡಿಸಿದ್ದಾಳೆ.. ಮುಂದೊಂದು ದಿನ ಪುರುಷನಾಗಿ ಹುಟ್ಟುವ ಆಸೆ ಅಂತ ಹೇಳಿಕೊಂಡಿದ್ದಾಳೆ..
ಮನುಷ್ಯನ ದೇಹ ರಚನೆ, ಅವನ ಮಾನಸಿಕ ಸ್ಥಿತಿ ಬಗ್ಗೆ ತಿಳಿದುಕೊಳ್ಳುವ ಆಸೆ ಇದೆ. ಅದಕ್ಕೇ ಮುಂದೊಂದು ದಿನ ಗಂಡಸಾಗಿ, ಅದನ್ನೆಲ್ಲ ತಿಳಿದುಕೊಳ್ಳಬೇಕು ಎಂದರು.
ತ್ರಿಶಾ ವಿಚಿತ್ರ ಆಸೆಯನ್ನ ಕೇಳಿದ ನೆಟ್ಟಿಗರು ನಾನಾ ರೀತಿಯ ಕಮೆಂಟ್ಸ್ ಮಾಡುತ್ತಿದ್ದಾರೆ. ಕೆಲವು ಚಿತ್ರ ವಿಚಿತ್ರ ಸಲಹೆ ನೀಡುತ್ತಿದ್ದಾರೆ..