ದಸರಾಗೂ ಮುನ್ನ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!ವಿಶೇಷ ಸಂಪುಟ ಸಭೆಯಲ್ಲಿ ವೇತನ ಹೆಚ್ಚಳಕ್ಕೆ ಅಧಿಕೃತ ಮುದ್ರೆ
ಅಕ್ಟೋಬರ್ 3 ಅಂದರೆ ನಾಳೆ ಸರ್ಕಾರದ ವಿಶೇಷ ಕ್ಯಾಬಿನೆಟ್ ಸಭೆ ನಡೆಯಲಿದೆ.ಈ ಸಭೆಯಲ್ಲಿ ಲಕ್ಷಾಂತರ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಬಗ್ಗೆ ನಿರ್ಧಾರ ಹೊರಬೀಳಲಿದೆ.
ಪ್ರತಿ ಬಾರಿ ಸರ್ಕಾರವು ದೀಪಾವಳಿಯ ಆಸುಪಾಸಿನಲ್ಲಿ ಡಿಎ ಹೆಚ್ಚಳದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.ಈ ಬಾರಿ ಸರ್ಕಾರ ಶೇ.3ರಿಂದ 4ರಷ್ಟು ಡಿಎ ಹೆಚ್ಚಿಸುವ ನಿರೀಕ್ಷೆ ಇದೆ.2023 ರಲ್ಲಿ,ಅಕ್ಟೋಬರ್ ಮೊದಲ ವಾರದಲ್ಲಿ ಸರ್ಕಾರವು ಡಿಎ ನಿರ್ಧಾರವನ್ನು ತೆಗೆದುಕೊಂಡಿತು.
ಕ್ಯಾಬಿನೆಟ್ ಸಭೆಯಲ್ಲಿ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು (ಡಿಎ) 3% ಹೆಚ್ಚಿಸಿದರೆ,ಒಟ್ಟು ತುಟ್ಟಿಭತ್ಯೆ 53% ಕ್ಕೆ ಹೆಚ್ಚಾಗುತ್ತದೆ.ಆದರೆ ಈ ಹೆಚ್ಚಳವು ಶೇಕಡಾ 4ರಷ್ಟಾದರೆ ಅದು 54 ಶೇಕಡಾವಾಗುತ್ತದೆ. ಹೆಚ್ಚಿಸಿದ ಡಿಎ ಜುಲೈ 1 ರಿಂದಲೇ ಅನ್ವಯವಾಗುವುದು.
ಅಂದರೆ ಮುಂದಿನ ವೇತನದಲ್ಲಿ ಡಿಎ ಹೆಚ್ಚಳದ ಜೊತೆಗೆ ಅರಿಯರ್ಸ್ ಕೂಡಾ ಸೇರಿ ಖಾತೆಗೆ ಬೀಳುವುದು. ತುಟ್ಟಿಭತ್ಯೆ ಹೆಚ್ಚಳವು ಹೆಚ್ಚುತ್ತಿರುವ ಹಣದುಬ್ಬರವನ್ನು ನಿಭಾಯಿಸಲು ಉದ್ಯೋಗಿಗಳಿಗೆ ಸಹಾಯ ಮಾಡುತ್ತದೆ.
ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಆಧಾರದ ಮೇಲೆ ಕೇಂದ್ರ ನೌಕರರಿಗೆ ತುಟ್ಟಿಭತ್ಯೆ ನಿರ್ಧರಿಸಲಾಗುತ್ತದೆ.ಎಐಸಿಪಿಐ ಹೆಚ್ಚಾದಾಗ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಾಗುತ್ತದೆ.
ಪ್ರಸ್ತುತ ಮೂಲ ವೇತನ 18000 ರೂಪಾಯಿ ಆಗಿದ್ದು, ತುಟ್ಟಿಭತ್ಯೆ ಮೂರು ಪ್ರತಿಶತದಷ್ಟು ಹೆಚ್ಚಾದರೆ ಪ್ರತಿ ತಿಂಗಳು 540 ರೂಪಾಯಿ ಹೆಚ್ಚಳವಾಗುವುದು. ಅಂದರೆ ವರ್ಷಕ್ಕೆ 6480 ರೂ. ಆದರೆ ಶೇಕಡಾ 4 ರಷ್ಟು ಡಿಎ ಹೆಚ್ಚಳವಾದರೆ ಪ್ರತಿ ತಿಂಗಳು 720 ರೂ.,ವಾರ್ಷಿಕ 7440 ರೂ. ಏರಿಕೆಯಾಗುತ್ತದೆ.