ತಿರುಪತಿ ತಿರುಮಲದಲ್ಲಿ ಹಿರಿಯ ನಾಗರಿಕರಿಗೆ ಉಚಿತ ವಿಶೇಷ ದರ್ಶನ ವ್ಯವಸ್ಥೆ!ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ!ನಿಂತ ಜಾಗಕ್ಕೆ ಬರುವುದು ಊಟ, ಹಾಲು

Thu, 21 Nov 2024-4:17 pm,

ತಿರುಮಲ ತಿರುಪತಿ ದೇವಸ್ಥಾನಂ ಆಡಳಿತವು ವಯೋವೃದ್ಧರಿಗೆ ವಿಶೇಷ ದರ್ಶನ ಸೌಲಭ್ಯವನ್ನು ಒದಗಿಸುತ್ತಿದೆ. ಅವರಿಗೆ ಉಚಿತ ದರ್ಶನ ಹಾಗೂ ಅನ್ನಸಂತರ್ಪಣೆ ಸೇವೆಯನ್ನು ಕಲ್ಪಿಸಿದೆ. 

ಪ್ರತಿದಿನ ಎರಡು ಸ್ಲೋಟ್‌ಗಳಲ್ಲಿ ಶ್ರೀವರ ದರ್ಶನ ಪಡೆಯುವ ಅವಕಾಶ ಒದಗಿಸಲಾಗಿದೆ. ಹೀಗಾಗಿ ವಯೋವೃದ್ಧರು ಬಾಲಾಜಿ ದರ್ಶನಕ್ಕೆ ಹೆಚ್ಚು ಹೊತ್ತು ಕಾಯಬೇಕಾಗಿಲ್ಲ. ದರ್ಶನಕ್ಕಾಗಿ ಕಾಯುತ್ತಿರುವ ವೃದ್ಧರಿಗೆ  ಆಹಾರ ಬಿಸಿ ಹಾಲನ್ನು ನೀಡಲಾಗುತ್ತದೆ.  

ದರ್ಶನದ ನಂತರವೂ ಅವರನ್ನು ಬ್ಯಾಟರಿ ಕಾರಿನಲ್ಲಿ ಕರೆ ತರುವ ವ್ಯವಸ್ಥೆಯೂ ಇದೆ.  ಕೇವಲ ಅರ್ಧಗಂಟೆಯಲ್ಲಿ ವಯೋವೃದ್ಧರಿಗೆ ದೇವರ ದರ್ಶನ ಭಾಗ್ಯ ಸಿಗಲಿದೆ.  ಹೆಚ್ಚಿನ ಸಂಪೂರ್ಣ ವಿವರಗಳಿಗಾಗಿ 0877227777 ಅನ್ನು ಸಂಪರ್ಕಿಸಬಹುದು.    

ಈ ಮಧ್ಯೆ ಟಿಟಿಡಿ ಕಲ್ಯಾಣೋತ್ಸವಂ ಆರ್ಜಿತ ತಿರುಮಂಜಾಸನ ಸೇವಾ ಟಿಕೆಟ್‌ಗಳನ್ನು ಇಂದಿನಿಂದ ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.  24ರಂದು  300 ರೂ. ತಿರುಮಲ ಶ್ರೀವಾರಿ ವಿಶೇಷ ದರ್ಶನ ಟಿಕೆಟ್ ವಿತರಣೆ ಕೂಡಾ ಆರಂಭವಾಗುವುದು. ಕೊಠಡಿಗಳನ್ನು ಮಧ್ಯಾಹ್ನ 3:00 ರಿಂದ ಬುಕ್ ಮಾಡಬಹುದಾಗಿದೆ. 

ಪ್ರತಿ ಮೂರು ತಿಂಗಳಿಗೊಮ್ಮೆ ಟಿಟಿಡಿ ಸಾಮಾನ್ಯ ಭಕ್ತರಿಗೆ ಆನ್‌ಲೈನ್‌ನಲ್ಲಿ ದರ್ಶನ ಟಿಕೆಟ್‌ಗಳನ್ನು ಲಭ್ಯವಾಗುವಂತೆ ಮಾಡುತ್ತದೆ. ಮುಂಗಡ ಕಾಯ್ದಿರಿಸಿದವರು ಸ್ವಾಮಿಯ ದರ್ಶನ ಪಡೆಯಬಹುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link