ಮನೆಯಲ್ಲಿ ಸುಖ-ಶಾಂತಿ-ಸಮೃದ್ಧಿಗಾಗಿ ಶುಕ್ರವಾರದ ವಿಶೇಷ ಪರಿಹಾರಗಳಿವು
ಹಿಂದೂ ಧರ್ಮದಲ್ಲಿ ಪ್ರತಿ ದಿನವನ್ನೂ ಒಂದೊಂದು ದೇವ-ದೇವತೆಗೆ ಅರ್ಪಿಸಲಾಗಿದೆ. ಅಂತೆಯೇ ಶುಕ್ರವಾರವನ್ನು ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿಗೆ ಸಮರ್ಪಿಸಲಾಗಿದೆ. ಈ ದಿನ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಮನೆಯಲ್ಲಿ ಆರ್ಥಿಕ ತೊಂದರೆಗಳು ನಿವಾರಣೆಯಾಗಿ ಸುಖ-ಸಂಪತ್ತು ವೃದ್ಧಿಯಾಗಲಿದೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರವಾರದ ದಿನ ಲಕ್ಷ್ಮಿ ದೇವಿಗೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಸುಖ-ಸಂತೋಷ ಪ್ರಾಪ್ತಿಯಾಗುತ್ತದೆ. ಆಂತಹ ಮನೆಯಲ್ಲಿ ಹಣಕಾಸಿಗೂ ಯಾವುದೇ ಕೊರತೆ ಇರುವುದಿಲ್ಲ ಎಂದು ನಂಬಲಾಗಿದೆ.
ಶುಕ್ರವಾರದ ದಿನ ನೀವು ಮನೆ ಒರೆಸುವಾಗ ಆ ನೀರಿನಲ್ಲಿ ಚಿಟಿಕೆ ಅರಿಶಿನದ ಪುಡಿ ಬೆರೆಸಿ ಮನೆ ಒರೆಸಿ. ಇದರಿಂದ ತಾಯಿ ಲಕ್ಷ್ಮಿ ಭಕ್ತರಿಗೆ ಆಶೀರ್ವಾದ ಮಾಡುತ್ತಾಳೆ ಎಂಬ ನಂಬಿಕೆಯಿದೆ.
ಲಕ್ಷ್ಮಿಯ ಆಶೀರ್ವಾದಕ್ಕಾಗಿ ಶುಕ್ರವಾರದ ದಿನ ಹಾಲು ಮತ್ತು ಅಕ್ಕಿ/ಅನ್ನದಿಂದ ತಯಾರಿಸಿದ ಖೀರ್ ಅನ್ನು ತಾಯಿಗೆ ನೇವೇದ್ಯವಾಗಿ ಅರ್ಪಿಸಿ. ಬಳಿಕ ಶುಕ್ರ ಬೀಜ ಮಂತ್ರವನ್ನು ಪಠಿಸಿ. ಇದರಿಂದ ಲಕ್ಷ್ಮಿ ದೇವಿ ಪ್ರಸನ್ನಳಾಗುತ್ತಾಳೆ.
ಶುಕ್ರವಾರದ ದಿನ ಹಸುವಿಗೆ ಹಸಿರು ಮೇವು, ಇಲ್ಲವೇ, ಒಂದಿಡಿ ಅಕ್ಕಿ, ಬೇಳೆ, ಬೆಲ್ಲ, ತುಪ್ಪವನ್ನು ತಿನ್ನಿಸಿ. ಇದರಿಂದ ಮನೆಯಲ್ಲಿ ಋಣಾತ್ಮಕ ಶಕ್ತಿಗಳು ಹೊರಹೋಗಿ, ಧನಾತ್ಮಕತೆ ಮನೆಯನ್ನು ಪ್ರವೇಶಿಸಲಿದೆ ಎಂಬ ನಂಬಿಕೆ ಇದೆ.
ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರ ದೋಷವಿದ್ದರೆ, ಶುಕ್ರವಾರದ ದಿನ ಬೆಳ್ಳಿ ಉಂಗುರದಲ್ಲಿ ಹರಳಿನ ರತ್ನವನ್ನು ಧರಿಸಿ. ಸ್ಫಟಿಕವು ಶುಕ್ರ ಗ್ರಹಕ್ಕೆ ನೇರವಾಗಿ ಸಂಬಂಧಿಸಿದ್ದು, ಈ ಉಂಗುರವನ್ನು ಧರಿಸುವುದರಿಂದ ಶುಕ್ರ ದೋಷದ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ.
ಮನೆಯಲ್ಲಿ ಆಗಾಗ್ಗೆ ಆರ್ಥಿಕ ಬಿಕ್ಕಟ್ಟು ಕಾಣಿಸಿಕೊಳ್ಳುತ್ತಿದ್ದರೆ ಶುಕ್ರವಾರ ಏಲಕ್ಕಿಯ ಪರಿಹಾರವನ್ನು ಪ್ರಯತ್ನಿಸಿ. ಇದಕ್ಕಾಗಿ ಶುಕ್ರವಾರ ಸಂಜೆ ಲಕ್ಷ್ಮಿ ದೇವಿಗೆ 5 ಚಿಕ್ಕ ಏಲಕ್ಕಿಗಳನ್ನು ಅರ್ಪಿಸಿ. ಪೂಜೆಯ ನಂತರ, ಈ ಏಲಕ್ಕಿಗಳನ್ನು ನಿಮ್ಮ ಪರ್ಸ್‌ನಲ್ಲಿ ಅಥವಾ ನೀವು ಮನೆಯಲ್ಲಿ ಹಣ ಇಡುವ ಜಾಗದಲ್ಲಿ ಇಡಿ. ಈ ರೀತಿ ಮಾಡುವುದರಿದ್ನ ಸಂಪತ್ತು ವೃದ್ಧಿಯಾಗುತ್ತದೆ.
ಪ್ರತಿ ಶುಕ್ರವಾರದ ನಿಮ್ಮ ಮನೆಯ ಸಮೀಪದ ಶಿವನ ಮಂದಿರಕ್ಕೆ ಭೇಟಿ ನೀಡ್, ಅಲಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ. ಬಳಿಕ, ಅಲ್ಲಿಯೇ ಕುಳಿತು, ಓಂ ನಮಃ ಶಿವಾಯ ಮಂತ್ರವನ್ನು 108 ಬಾರಿ ಜಪಿಸಿ. ನಂತರ ಲಕ್ಷ್ಮಿ ದೇವಿ ಮಂತ್ರವನ್ನು ಜಪಿಸಿ. ಈ ರೀತಿ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.