ಹೆಣ್ಣು ಮಕ್ಕಳಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ವಿಶೇಷ ಯೋಜನೆ: ನಿಮ್ಮ ಮಗಳಿಗೆ ಸಿಗುತ್ತೆ 15 ಲಕ್ಷ ರೂ.

Wed, 07 Jun 2023-11:08 am,

ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಭಾರತ ಸರ್ಕಾರ ನಡೆಸುತ್ತಿರುವ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಮಾಹಿತಿ ನೀಡಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಹೆಣ್ಣು ಮಕ್ಕಳಿಗೆ ಸಂಪೂರ್ಣ 15 ಲಕ್ಷ ರೂ.ಗಳನ್ನು ನೀಡುತಲಾಗುತಿದೆ ಎಂದು ಎಸ್‌ಬಿಐ ತಿಳಿಸಿದೆ.  ಈ ಹಣವ ನ್ನು ಮಗಳ ಅಧ್ಯಯನ ಅಥವಾ ಮದುವೆಗಾಗಿ ಬಳಸಬಹುದಾಗಿದೆ. 

ಈ ಕುರಿತಂತೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಎಸ್‌ಬಿ‌ಐ, ಬ್ಯಾಂಕ್‌ನಿಂದ ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ಸೌಲಭ್ಯವನ್ನು ನೀಡಲಾಗುತ್ತಿದ್ದು, ಇದರಲ್ಲಿ ಕೇವಲ 250 ರೂಪಾಯಿಗಳನ್ನು ಠೇವಣಿ ಮಾಡುವ ಮೂಲಕ ನಿಮ್ಮ ಮಗಳನ್ನು ಲಕ್ಷಾಧಿಪತಿಯಾಗಿ ಮಾಡಬಹುದು ಎಂದು ತಿಳಿಸಿದೆ. 

ಸುಕನ್ಯಾ ಸಮೃದ್ಧಿ ಯೋಜನೆ: ಣ್ಣು ಮಕ್ಕಳ ಭವಿಷ್ಯವನ್ನು ಸುಭದ್ರಗೊಳಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ ವಿಶೇಷ ಯೋಜನೆಯಲ್ಲಿ ಹೂಡಿಕೆ ಮೇಲೆ ಖಚಿತ ಆದಾಯ ಲಭ್ಯವಾಗಲಿದೆ. ಮಾತ್ರವಲ್ಲ, ಇದರಲ್ಲಿ ಹೂಡಿಕೆ ಮಾಡುವುದರಿಂದ ಆದಾಯ ತೆರಿಗೆ ವಿನಾಯಿತಿಯೂ ಲಭ್ಯವಿದೆ. 

ಹೆಣ್ಣು ಮಕ್ಕಳ ಭವಿಷ್ಯವನ್ನು ಸುಭದ್ರಗೊಳಿಸುವ ಸಲುವಾಗಿ ಆರಂಭಿಸಲಾಗಿರುವ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರಸ್ತುತ ಸರ್ಕಾರವು 8% ಬಡ್ಡಿಯನ್ನು ನೀಡುತ್ತಿದೆ. 

ಗಮನಾರ್ಹವಾಗಿ, ಪೋಷಕರು ಎರಡು ಹೆಣ್ಣುಮಕ್ಕಳಿಗೆ ಈ ಯೋಜನೆಯ ಲಾಭವನ್ನು ಪಡೆಯಬಹುದು. ಒಂದೊಮ್ಮೆ ಮೊದಲೇ ಒಂದು ಹೆಣ್ಣು ಮಗು ಇದ್ದು, ಬಳಿಕ ಅವಳಿ ಹೆಣ್ಣು ಮಕ್ಕಳಾದರೆ ಅಂತಹ ಸಂದರ್ಭದಲ್ಲಿ ಮೂವರು ಹೆಣ್ಣು ಮಕ್ಕಳಿಗೆ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link