ಟಿಕೆಟ್ ಮೇಲೆ ರಿಯಾಯಿತಿಯೊಂದಿಗೆ SpiceJet ತನ್ನ ಯಾತ್ರಿಗಳಿಗೆ ನೀಡುತ್ತಿದೆ ಈ ಸೌಲಭ್ಯ
ಸ್ಪೈಸ್ ಜೆಟ್ ತನ್ನ ಪ್ರಯಾಣಿಕರು ಈಗ ವಿಮಾನಯಾನದ ಇನ್ ಫ್ಲೈಟ್ ಮನರಂಜನಾ ವೇದಿಕೆಯಾದ SpiceScreen ಬಳಸಿ ಪ್ರಯಾಣದಲ್ಲಿರುವಾಗ ಟ್ಯಾಕ್ಸಿಗಳನ್ನು ಬುಕ್ ಮಾಡಬಹುದು. ಸ್ಪೈಸ್ ಜೆಟ್ ಪ್ರಯಾಣಿಕರು ತಮ್ಮ ಸಾಮಾನುಗಳನ್ನು ಹೊತ್ತುಕೊಂಡು ಕ್ಯಾಬ್ ಡಿಪಾರ್ಚರ್ ಪ್ರದೇಶಕ್ಕೆ ಕೊಂಡೊಯ್ಯುವ ಅಗತ್ಯವಿಲ್ಲ. ಯಾಕೆಂದರೆ ಕ್ಯಾಬ್ ಅರೈವಲ್ ಗೇಟ್ ನಲ್ಲಿಯೇ ನಿಂತಿರುತ್ತದೆ.
ಈ ಸೇವೆಯನ್ನು ಇಂದಿನಿಂದ ಆರಂಭಿಸಲಾಗಿದೆ. ದೆಹಲಿ ವಿಮಾನ ನಿಲ್ದಾಣದಿಂದ ಈ ಸೇವೆಯನ್ನು ಆರಂಭಿಸಲಾಗಿದೆ. ಇದರ ನಂತರ ಈ ಸೇವೆಯನ್ನು ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ, ಕೋಲ್ಕತಾ, ಗೋವಾ, ಅಹಮದಾಬಾದ್ ಮತ್ತು ಪುಣೆ ಸೇರಿದಂತೆ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಿಗೂ ವಿಸ್ತರಿಸಲಾಗುವುದು.
ಸ್ಪೈಸ್ ಜೆಟ್ ಪ್ರಕಾರ, ದೇಶೀಯ ವಿಮಾನಯಾನ ಉದ್ಯಮದಲ್ಲಿ ಈ ರೀತಿಯ ಸೇವೆಯನ್ನು ಇದೇ ಮೊದಲ ಬಾರಿಗೆ ಒದಗಿಸಲಾಗುತ್ತಿದೆ. ಇದು ಪ್ರಯಾಣಿಕರ ಸಮಯವನ್ನು ಉಳಿಸುತ್ತದೆ. ಟ್ಯಾಕ್ಸಿಗಾಗಿ ಹೆಚ್ಚು ಹೊತ್ತು ಕಾಯಬೇಕಾಗಿಲ್ಲ. ಸ್ಪೈಸ್‌ಸ್ಕ್ರೀನ್‌ನಲ್ಲಿ ಪ್ರಯಾಣಿಕರು ಟ್ಯಾಕ್ಸಿಯನ್ನು ಬುಕ್ ಮಾಡಿದರೆ, ವಿಮಾನ ನಿಲ್ದಾಣಕ್ಕೆ ಬಂದ ಕೂಡಲೇ, ಟ್ಯಾಕ್ಸಿ ಬುಕಿಂಗ್ OTP ಸಂದೇಶವನ್ನು ಸ್ವೀಕರಿಸುತ್ತಾರೆ.
ಪ್ರಯಾಣದ ಕೊನೆಯಲ್ಲಿ ಪಾವತಿಯನ್ನು ಹಲವಾರು ವಿಧಗಳಲ್ಲಿ ಮಾಡಬಹುದು. ಪ್ರಯಾಣಿಕರು ನಗದು ಅಥವಾ ಆನ್‌ಲೈನ್‌ನಲ್ಲಿ ಪಾವತಿಸಬಹುದು. ಸ್ಪೈಸ್‌ಜೆಟ್ ಕಳೆದ ವರ್ಷ ಆಗಸ್ಟ್‌ನಲ್ಲಿ ಸ್ಪೈಸ್‌ಸ್ಕ್ರೀನ್ ಅನ್ನು ಪ್ರಾರಂಭಿಸಿತ್ತು. ಆನ್‌ಬೋರ್ಡ್ ವೈರ್‌ಲೆಸ್ ನೆಟ್‌ವರ್ಕ್‌ಗೆ ನೇರವಾಗಿ ಸಂಪರ್ಕಿಸುವ ಮೂಲಕ ಪ್ರಯಾಣಿಕರ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಅಥವಾ ಲ್ಯಾಪ್‌ಟಾಪ್‌ಗಳಂತಹ ಸಾಧನಗಳಿಂದ ಅಕ್ಸೆಸ್ ಆಗಬಹುದು.
ಟ್ಯಾಕ್ಸಿಗಳನ್ನು ಬುಕ್ ಮಾಡಲು ಈ ಆಯ್ಕೆಯನ್ನು ಬಳಸುವ ಪ್ರಯಾಣಿಕರಿಗೆ ಪ್ರಯಾಣದ ಮೇಲೆ ವಿಶೇಷ ರಿಯಾಯಿತಿಯನ್ನು ನೀಡುವುದಾಗಿ ಏರ್ಲೈನ್ ಹೇಳಿದೆ. ಒಂದು ವೇಳೆ ಪ್ರಯಾಣಿಕರು ಟ್ಯಾಕ್ಸಿಯನ್ನು ಬಳಸದಿದ್ದಲ್ಲಿ, ಕ್ಯಾನ್ ಸೆಲೇಶನ್ ಶುಲ್ಕವನ್ನು ವಿಧಿಸುವುದಿಲ್ಲ ಎಂದು ಹೇಳಿದೆ.