Vastu Plants: ಅದೃಷ್ಟವನ್ನು ಆಕರ್ಷಿಸುವ ಈ ಸಸ್ಯವನ್ನು ಮನೆಯ ಈ ಭಾಗದಲ್ಲಿ ನೆಡಿ: ಚಮತ್ಕಾರ ಆಮೇಲೆ ನೋಡಿ
ಮನಿ ಪ್ಲಾಂಟ್ ಜೊತೆಗೆ ಸ್ಪೈಡರ್ ಪ್ಲಾಂಟ್ ಅನ್ನು ಇಟ್ಟರೆ ಡಬಲ್ ಲಾಭವನ್ನು ನೀಡುತ್ತದೆ. ಮತ್ತು ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಎನ್ನಲಾಗುತ್ತದೆ. ಉತ್ತರ, ಈಶಾನ್ಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಜೊತೆಗೆ ಸ್ಪೈಡರ್ ಪ್ಲಾಂಟ್ ಅನ್ನು ನೆಡುವುದು ತುಂಬಾ ಮಂಗಳಕರ.
ಸ್ಪೈಡರ್ ಪ್ಲಾಂಟ್ ಅನ್ನು ಎಂದಿಗೂ ಒಣಗಲು ಬಿಡಬೇಡಿ. ಅಷ್ಟೇ ಅಲ್ಲದೆ, ಅವುಗಳನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೆಡಬೇಡಿ. ವಾಸ್ತು ಪ್ರಕಾರ ಇದು ಸರಿಯಲ್ಲ.
ನೀವು ಮನೆಯೊಳಗೆ ಸ್ಪೈಡರ್ ಪ್ಲಾಂಟ್ ಅನ್ನು ನೆಡುತ್ತಿದ್ದರೆ, ಅದನ್ನು ಅಡುಗೆ ಮನೆಯಲ್ಲಿ, ಬಾಲ್ಕನಿಯಲ್ಲಿ, ಲಿವಿಂಗ್ ರೂಂನಲ್ಲಿ ಸ್ಟಡಿ ರೂಂನಲ್ಲಿ ನೆಡಬಹುದು. ಈ ಸಸ್ಯವು ಎಲ್ಲಾ ಕೆಟ್ಟ ಶಕ್ತಿಯನ್ನು ನಾಶಪಡಿಸುತ್ತದೆ ಮತ್ತು ಕುಟುಂಬದಲ್ಲಿ ಪ್ರೀತಿ ಹೆಚ್ಚಾಗುವಂತೆ ಮಾಡುತ್ತದೆ.
ಸ್ಪೈಡರ್ ಪ್ಲಾಂಟ್ ಒತ್ತಡ ಮತ್ತು ಹತಾಶೆಯಂತಹ ಭಾವನೆಗಳನ್ನು ತೆಗೆದುಹಾಕುತ್ತದೆ. ರೋಗ ಮತ್ತು ರಕ್ತದೊತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಸ್ಪೈಡರ್ ಪ್ಲಾಂಟ್ ಮನೆಯ ಗಾಳಿಯನ್ನು ಸ್ವಚ್ಛಗೊಳಿಸುತ್ತದೆ. ಮತ್ತು ಗಾಳಿಯಲ್ಲಿರುವ 95 ಪ್ರತಿಶತದಷ್ಟು ವಿಷಕಾರಿ ಏಜೆಂಟ್‌ಗಳನ್ನು ತೆಗೆದುಹಾಕುತ್ತದೆ.
ಕಚೇರಿಯಲ್ಲಿ ಪ್ರಗತಿಗಾಗಿ ನೀವು ಈ ಸಸ್ಯವನ್ನು ಮೇಜಿನ ಮೇಲೆ ಇರಿಸಬಹುದು. ಇದು ಮನಸ್ಸನ್ನು ಶಾಂತವಾಗಿರಿಸುತ್ತದೆ