ಸೆಪ್ಟೆಂಬರ್ 4 ರಿಂದ 118 ದಿನಗಳ ಕಾಲ ಈ ಜನರ ಜೀವನದಲ್ಲಿ ಸುವರ್ಣ ಕಾಲ ಆರಂಭ, ಬೃಹಸ್ಪತಿಯ ಕೃಪೆಯಿಂದ ಅಪಾರ ಧನಪ್ರಾಪ್ತಿ!
ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 4 ರಿಂದ ಮುಂದಿನ 118 ದಿನಗಳು ಕೆಲ ಅದೃಷ್ಟವಂತ ರಾಶಿಗಳ ಜನರ ಜೀವನದಲ್ಲಿ ಸುವರ್ಣ ಆರಂಭಗೊಳ್ಳಲಿದೆ. ಈ ರಾಶಿಗಳ ಜನರ ಜ್ಞಾನ, ಭಾಗ್ಯ, ಸೌಭಾಗ್ಯದಲ್ಲಿ ವೃದ್ಧಿಯಾಗಲಿದೆ. ಜೀವನದಲ್ಲಿ ಅಪಾರ ಸುಖ ಸಮೃದ್ಧಿ ಹರಿದುಬರಲಿದೆ. ಅಷ್ಟೇ ಅಲ್ಲ ಈ ಅವಧಿಯಲ್ಲಿ ಈ ಜನರಿಗೆ ಅಧಿಕ ಆರ್ಥಿಕ ಲಾಭದ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.
ಮಿಥುನ ರಾಶಿ: ಮೇಷ ರಾಶಿಯಲ್ಲಿ ಬೃಹಸ್ಪತಿಯ ವಕ್ರ ನಾದೇಯ ಅವಧಿಯು ಮಿಥುನ ರಾಶಿಯ ಜನರಿಗೆ ವಿಶೇಷ ಲಾಭವನ್ನು ತಂದು ಕೊಡಲಿದೆ. 118 ದಿನಗಳ ಕಾಲ ಈ ರಾಶಿಯ ಜನರಿಗೆ ಒಂದು ವಿಶಿಷ್ಟ ರಾಜಯೋಗದ ಆಶೀರ್ವಾದ ಪ್ರಾಪ್ತಿಯಾಗಲಿದೆ. ಇದರಿಂದ ಮಿಥುನ ಜಾತಕದವರ ಆರ್ಥಿಕ ಸ್ಥಿತಿ ಸುಧಾರಿಸುವುದರ ಜೊತೆಗೆ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದ ಅವರ ಕೆಲಸಗಳು ಪೂರ್ಣಗೊಲ್ಲಳಿವೆ. ವೈವಾಹಿಕ ಜೀವನದಲ್ಲಿ ತಲೆದೂರಿದ್ದ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಹಳೆ ವ್ಯಾಜ್ಯಗಳಿಂದಲೂ ಕೂಡ ಮುಕ್ತಿ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಪಾಲಿಗೆ ಆಧಾಯದ ಹೊಸ ಮೂಲಗಳು ಕೂಡ ತೆರೆದುಕೊಳ್ಳಲಿವೆ.
ಸಿಂಹ ರಾಶಿ: ಸಿಂಹ ರಾಶಿಯ ಜಾತಕದವರು ಈ ಅವಧಿಯಲ್ಲಿ ತಮ್ಮ ಜೀವನದಲ್ಲಿ ವಿಭಿನ್ನ ರಾತೀಯ ಚಟುವಟಿಕೆಗಳನ್ನು ಪೂರ್ಣಗೊಳಿಸಿ ಭಾವನಾತ್ಮಕವಾಗಿ ಸಂಪನ್ನತೆಯನ್ನು ಅನುಭವಿಸಲಿದ್ದಾರೆ. ಮುಂಬರುವ ಸವಾಲುಗಳಿಗೆ ಇದು ತುಂಬಾ ಮಹತ್ವದ್ದಾಗಿದೆ ಮತ್ತು ಅದು ಲಾಭವನ್ನು ಕೂಡ ತಂದು ಕೊಡಲಿದೆ. ಮೇಷ ರಾಶಿಯಲ್ಲಿ ಬೃಹಸ್ಪತಿ ವಕ್ರನಾಗುವುದು ನಿಮ್ಮನ್ನು ಆಧ್ಯಾತ್ಮಿಕತೆಯ ಕಡೆಗೆ ಕೊಂಡೊಯ್ಯಲಿದೆ. ಇದರೊಂದಿಗೆ ಜೀವನದಲ್ಲಿ ಹಲವು ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿವೆ. ಕುಟುಂಬದ ಜೊತೆಗೆ ಉತ್ತಮ ಕಾಲವನ್ನು ಕಳೆಯುವಿರಿ. ದೀರ್ಘಕಾಲದಿಂದ ವೈವಾಹಿಕ ಜೀವನದಲ್ಲಿ ನಡೆದು ಬಂದ ಸಮಸ್ಯೆಗಳು ನಿವಾರಣೆಯಾಗಲಿವೆ.
ತುಲಾ ರಾಶಿ: ತುಲಾ ರಾಶಿಯ ಜಾತಕದವರಿಗೆ ಈ ಸಮಯ ನಂಬಿಕೆಗೆ ಬಾರದಷ್ಟು ಅನುಕೂಲಕರ ಸಿದ್ಧ ಸಾಬೀತಾಗಲಿದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳಲ್ಲಿನ ಯಶಸ್ಸಿಗೆ ಈ ಸಮಯ ಸಹಕರಿಸಲಿದೆ. ಇದಲ್ಲದೆ ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಭಾರಿ ಆರ್ಥಿಕ ಲಾಭ ಪ್ರಾಪ್ತಿಯಾಗಲಿದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಕೂಡ ನಿವಾರಣೆಯಾಗಲಿವೆ. ಆರ್ಥಿಕ ಬಿಕ್ಕಟ್ಟು ಕೂಡ ನಿವಾರಣೆಯಾಗಿ ಜೀವನದಲ್ಲಿ ಖುಷಿಗಳ ಮರು ಪ್ರವೇಶವಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)