Nag Panchami 2023: ಇಂದು ನಿರ್ಮಾಣಗೊಂಡಿದೆ ಈ ಶುಭಯೋಗ, ಮಹಾದೇವನ ಕೃಪೆಯಿಂದ ಈ ರಾಶಿಗಳ ಭಾಗ್ಯ ಚಿನ್ನದಂತೆ ಹೊಳೆಯಲಿದೆ!
ಇಂದಿನ ದಿನ ನಾಗಪಂಚಮಿ ಹಬ್ಬ ಮತ್ತು ಸರ್ವಾರ್ಥ ಸಿದ್ಧಿ ಯೋಗದ ಶುಭ ಕಾಕತಾಳೀಯ ನೆರವೇರುತ್ತಿದೆ. ಇದರ ಪ್ರಭಾವದಿಂದ ನಾಗಪಂಚಮಿಯ ದಿನ ಕೆಲವು ರಾಶಿಯವರಿಗೆ ಅದೃಷ್ಟ ಕೂಡಿಬರಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
ವೃಶ್ಚಿಕ ರಾಶಿ- ನಾಗಪಂಚಮಿಯ ದಿನವು ವೃಶ್ಚಿಕ ರಾಶಿಯವರಿಗೆ ವಿಶೇಷವಾಗಿ ಫಲಕಾರಿಯಾಗಲಿದೆ. ಈ ದಿನ ನಾಗದೇವತೆಯನ್ನು ಪೂಜಿಸುವುದರಿಂದ ನಿಮ್ಮ ವೃತ್ತಿಯಲ್ಲಿ ಪ್ರಗತಿ ಮತ್ತು ಧನಲಾಭ praaptiyagalide. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ನಿಮ್ಮದಾಗಲಿದೆ. ಈ ರಾಶಿಯ ಸ್ಥಳೀಯರ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹರಿದುಬರಲಿದೆ.
ಕುಂಭ ರಾಶಿ- ಕುಂಭ ರಾಶಿಯವರಿಗೆ ನಾಗಪಂಚಮಿ ಹಬ್ಬ ತುಂಬಾ ವಿಶೇಷವಾಗಿರಲಿದೆ. ದೀರ್ಘಕಾಲದಿಂದ ನಡೆದುಕೊಂಡು ಬಂದ ನಿಮ್ಮ ಎಲ್ಲಾ ಹಳೆಯ ಸಮಸ್ಯೆಗಳು ದೂರಾಗಲಿವೆ ಮತ್ತು ನಿಮ್ಮ ಎಲ್ಲಾ ಅಪೂರ್ಣ ಕೆಲಸಗಳಿಗೆ ಮತ್ತೊಮ್ಮೆ ವೇಗ ಸಿಗಲಿದೆ. ಇದಕ್ಕಾಗಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಕ್ಕು ಅಪಾರ ಧನಪ್ರಾಪ್ತಿಯಾಗಲಿದೆ.
ಧನು ರಾಶಿ - ಧನು ರಾಶಿಯವರಿಗೆ ನಾಗಪಂಚಮಿಯ ದಿನದಂದು ನಿರ್ಮಾಣಗೊಳ್ಳುತ್ತಿರುವ ಸರ್ವಾರ್ಥ ಸಿದ್ಧಿ ಯೋಗವು ನಿಮ್ಮ ಕೆಲಸಗಳಲ್ಲಿ ಯಶಸ್ಸನ್ನು ನೇಗಲಿದೆ. ಈ ರಾಶಿಯ ಜನರು ತಮ್ಮ ಉದ್ಯೋಗದಲ್ಲಿ ಪ್ರಗತಿ ಹೊಂದುತ್ತಾರೆ ಮತ್ತು ವ್ಯಾಪಾರದಲ್ಲಿ ಲಾಭ ಇರುತ್ತದೆ. ನಿಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ನೀವು ಹಲವು ಯೋಜನೆಗಳನ್ನು ರೂಪಿಸುವಲ್ಲಿ ಯಶಸ್ವಿಯಾಗುವಿರಿ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)