ವಕ್ರಾವಸ್ಥೆಯಲ್ಲಿ ಬುಧನ ಉದಯ, ಈ ರಾಶಿಗಳ ಜನರ ಜೀವನದಲ್ಲಿ ಝಣಝಣಿಸಲಿದೆ ಕಾಂಚಾಣದ ಸದ್ದು!

Mon, 07 Aug 2023-3:00 pm,

Budh Uday In Retrograde State: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಸಿಂಹ ರಾಶಿಯಲ್ಲಿ ವಕ್ರಾವಸ್ಥೆಯಲ್ಲಿರುವ ಬುಧ ಉದಯಿಸಲಿದ್ದಾನೆ. ಇದರಿಂದ ಮೂರು ರಾಶಿಗಳ ಜನರ ಜೀವನದಲ್ಲಿ ಸುದಿನಗಳು ಆರಂಭಗೊಳ್ಳಲಿವೆ. ಬುಧನ ಕೃಪೆಯಿಂದ ಅಪಾರ ಧನಲಾಭಯೋಗ ನಿರ್ಮಾಣಗೊಳ್ಳುತ್ತಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ,  

ಮೇಷ ರಾಶಿ: ಬುಧನ ಉದಯ ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ನೆರವೇರುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ಮಕ್ಕಳ ಕಡೆಯಿಂದ ನಿಮಗೆ ಶುಭ ಸಮಾಚಾರಗಳು ಪ್ರಾಪ್ತಿಯಾಗಲಿವೆ. ಇದರಿಂದ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಮುಂದುವರೆದುಕೊಂಡು ಬಂದಿರುವ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಪ್ರೇಮ-ಸಂಬಂಧಗಳಲ್ಲಿಯೂ ಕೂಡ ನೀವು ಯಶಸ್ಸು ಕಾಣಬಹುದು. ಅವಿವಾಹಿತರಾಗಿರುವ ಈ ಜಾತಕದ ವ್ಯಕ್ತಿಗಳ ಜೀವನದಲ್ಲಿ ವಿಶೇಷ ವ್ಯಕ್ತಿಯ ಆಗಮನವಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಉನ್ನತ ಕೋರ್ಸ್ ಗೆ ಪ್ರವೇಶ ಪಡೆಯುವ ಸಾಧ್ಯತೆ ಇದೆ.   

ಸಿಂಹ ರಾಶಿ: ನಿಮ್ಮ ಗೋಚರ ಜಾತಕದ ಲಗ್ನಭಾವದಲ್ಲಿ ಬುಧನ ಈ ಉದಯ ನೆರವೇರಲಿದೆ. ಹೀಗಾಗಿ ಬುಧನ ಉದಯ ನಿಮ್ಮ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಭಾರಿ ಹೊಳಪು ಕಾಣಲು ಸಿಗಲಿದೆ. ಯೋಜನೆಗಳಲ್ಲಿ ನೀವು ಯಶಸ್ಸನ್ನು ಕಾಣಬಹುದು. ನೌಕರ ವರ್ಗದ ಜಾತಕದವರಿಗೆ ವೃತ್ತಿಜೀವನದಲ್ಲಿ ಉನ್ನತಿ ಹಾಗೂ ಉತ್ತಮ ಅವಕಾಶಗಳು ಲಭಿಸಲಿವೆ. ಗಣ್ಯವ್ಯಕ್ತಿಗಳ ಜೊತೆಗೆ ನಿಮ್ಮ ಸಂಬಂಧಗಳು ಉತ್ತಮವಾಗಲಿವೆ. ಅವಿವಾಹಿತರಿಗೆ ಸಂಬಂಧ ಕೂಡಿಬರಲಿದೆ. ಬುಧ ನಿಮ್ಮ ಜಾತಕದ ಧನ ಹಾಗೂ ಆದಾಯ ಭಾವಕ್ಕೆ ಅಧಿಪತಿಯಾಗಿರುವ ಕಾರಣ ಈ ಅವಧಿಯಲ್ಲಿ ನಿಮ್ಮ ಆಧಾಯದಲ್ಲಿ ಭಾರಿ ಹೆಚ್ಚಳ ಸಂಭವಿಸಲಿದೆ. ಸಿಲುಕಿಬಿದ್ದ ನಿಮ್ಮ ಹಣ ನಿಮ್ಮ ಬಳಿ ಮರಳಲಿದೆ.   

ಧನು ರಾಶಿ: ಬುಧ ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ಉದಯಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಭಾಗ್ಯದ ಸಂಪೂರ್ಣ ಸಾಥ್ ಸಿಗಲಿದೆ. ನಿಂತುಹೋದ ಕೆಲಸ ಕಾರ್ಯಗಳಿಗೆ ಪುನಃ ವೇಗ ಸಿಗಲಿದ್ದು, ಬುಧನ ಉದಯ ನಿಮಗೆ ಸಾಕಷ್ಟು ಅನುಕೂಲಕರ ಸಾಬೀತಾಗಲಿದೆ. ತಂದೆ-ತಾಯಿಯರು ತೀರ್ಥಯಾತ್ರೆಯ ಮೇಲೆ ಹೋಗುವ ಯೋಜನೆ ರೂಪಿಸಬಹುದು. ಈ ಅವಧಿಯಲ್ಲಿ ಧರ್ಮ-ಕರ್ಮ ಕಾರ್ಯಗಳಲ್ಲಿ ನಿಮ್ಮ ಸದಭಿರುಚಿ ಹೆಚ್ಚಾಗಲಿದೆ. ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳ ಆಸೆ ಈಡೇರಲಿದೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)   

ZEENEWS TRENDING STORIES

By continuing to use the site, you agree to the use of cookies. You can find out more by Tapping this link